BREAKING NEWS
Search

ಕರೋನಾ ಸೋಂಕಿತರಿಗೆ ಉತ್ತರ ಕನ್ನಡ ಜಿಲ್ಲಾಡಳಿತದಿಂದ ಪ್ರಾರಂಭವಾಯ್ತು ನಿರಂತರ ಸಹಾಯವಾಣಿ:ಏನೇನು ಸಹಾಯ ಸಿಗುತ್ತೇ ಇಲ್ಲಿದೆ ಮಾಹಿತಿ.

1833

ಕಾರವಾರ:- ಕರೋನಾ ಬಂತು ಅಂದ್ರೆ ಆ ವ್ಯಕ್ತಿ ಮಾನಸಿಕವಾಗಿ ಕುಗ್ಗಿಹೋಗುತ್ತಾನೆ. ಸ್ವಲ್ಪ ಜ್ವರ ಕೆಮ್ಮು ಹೀಗೆ ಏನಾದರೂ ಆರೋಗ್ಯ ಸಮಸ್ಯೆ ಬಂದರೂ ತನಗೆ ಕರೋನಾ ಸೋಂಕು ತಗಲಿರಬಹುದೇ ಎಂದು ಭಯ ಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ.

ಇನ್ನು ಸೋಂಕು ಪತ್ತೆಯಾದ್ರೂ ಅದಕ್ಕೆ ಆರೈಕೆ ಹೇಗೆ ಮಾಡಬೇಕು,ತೊಂದರೆಯಾದ್ರೆ ಹೇಗೆ,ಯಾರನ್ನು ಸಂಪರ್ಕ ಮಾಡಬೇಕು ಎನ್ನುವ ಗೊಂದಲದಲ್ಲೇ ಹೈರಾಣವಾಗಿ ಹೋಗುತ್ತಾರೆ.

ಹೀಗಾಗಿ ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಉತ್ತರ ಕನ್ನಡ ಜಿಲ್ಲಾಡಳಿತ ಕೋವಿಡ್ ಸಹಾಯವಾಣಿಯನ್ನು ತೆರೆದಿದೆ.

ಪ್ರತಿ ತಾಲೂಕಿನಲ್ಲಿ ಒಂದರಂತೆ 12 ಸಹಾಯವಾಣಿಯನ್ನು ಜಿಲ್ಲಾಡಳಿತ ತೆರೆದಿದೆ. ದಿನದ “24” ಘಂಟೆ ಓರ್ವ ವೈದ್ಯರು ಇಬ್ಬರು ಸಹಾಯಕರು ಸಹಾಯವಾಣಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಾರೆ.

ಕೋವಿಡ್ ಸಂಬಂದಪಟ್ಟಂತೆ ಆಪ್ತ ಸಲಹೆ,ಚಿಕಿತ್ಸೆ ಕುರಿತು ಅರಿವು, ಸಹಾಯವನ್ನು ಈ ಕೇಂದ್ರದವರು ಮಾಡುತ್ತಾರೆ. ಪ್ರತಿ ತಾಲೂಕಿಗೂ ಒಂದೊಂದು ಸಹಾಯವಾಣಿಯ ನಂಬರ್ ಅನ್ನು ನೀಡಲಾಗಿದೆ.

ಆಯಾ ತಾಲೂಕಿನ ವ್ಯಕ್ತಿಗಳು ಆಯಾ ತಾಲೂಕಿನ ಸಹಾಯವಾಣಿಗೆ ಕರೆ ಮಾಡಿದರೆ ಅವರು ಸೊಂಕಿತರಿಗೆ ಅಥವಾ ಕರೋನಾ ಸೋಂಕಿನ ಬಗ್ಗೆ ಗೊಂದಲ ಇರುವ ಜನರಿಗೆ ಸಹಾಯ ಮಾಡುವ ಜೊತೆಗೆ ಮಾನಸಿಕ ದೈರ್ಯ ನೀಡುವ ಕೆಲಸವನ್ನು ಈ ಸಹಾಯವಾಣಿ ಮೂಲಕ ಮಾಡಲಾಗುತ್ತಿದೆ.

ಕಾರವಾರದ ಸಹಾಯವಾಣಿ ಕೇಂದ್ರಕ್ಕೆ ಕಳೆದ ಮೂರು ದಿನದಲ್ಲಿ 48 ಕೋವಿಡ್ ಸಂಬಂದದ ಕರೆಗಳು ಹಾಗೂ 164 ಕರೆಗಳು ಲಾಕ್ ಡೌನ್ ಹಾಗೂ ಇತರೆ ಸಮಸ್ಯೆ ಕುರಿತು ಜನರು ಕರೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ 1400 ಕ್ಕೂ ಹೆಚ್ಚು ಜನ ಸಹಾಯವಾಣಿಗೆ ಕರೆ ಮಾಡಿ ತಮ್ಮ ಸಮಸ್ಯೆ ಹೇಳಿಕೊಂಡು ಬಗೆಹರಿಸಿಕೊಂಡಿದ್ದಾರೆ.

ಇನ್ನು ಕೆಲವರು ಸಹಾಯವಾಣಿ ಸಹಾಯದಿಂದ ಹೋಮ್ ಐಸೋಲೇಟೆಡ್ ಆಗುವ ಮೂಲಕ ಕೋವಿಡ್ ಚಿಕಿತ್ಸೆ ಪಡೆಯುತಿದ್ದಾರೆ.

ಹೀಗಾಗಿ ಜಿಲ್ಲೆಯಲ್ಲಿ ತೆರೆದ ಈ ಸಹಾಯವಾಣಿ ಇದೀಗ ಜನರ ಮೆಚ್ಚುಗೆಗೆ ಕಾರಣವಾಗಿದೆ.

ಇನ್ನು ಕಾರವಾರದ ತಹಶಿಲ್ದಾರ್ ಕಚೇರಿಯಲ್ಲಿ ಸಹ ಸಹಾಯವಾಣಿ ತೆರೆದಿದ್ದು ಒಂದು ದಿನಕ್ಕೆ ಕನಿಷ್ಟ ಹತ್ತು ಕರೆಗಳನ್ನು ಸ್ವೀಕರಿಸಿ ಜನರ ನೋವಿಗೆ ವೈದ್ಯರು ಮತ್ತು ಜಿಲ್ಲಾಡಳಿತ ಸ್ಪಂದನೆ ಮಾಡುತ್ತಿದೆ.

ಈ ಕೆಳಗೆ ಕೊಟ್ಟಿರುವ ದೂರವಾಣಿ ಸಂಖ್ಯೆಗೆ ಕಾಲ್ ಮಾಡಿ ಸಹಾಯ ಪಡೆಯಿರಿ:-

ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಚಿಕಿತ್ಸೆಗೆ ಇಂದಿನ ಬೆಡ್ ಮತ್ತು ಆಕ್ಸಿಜನ್ ಲಭ್ಯತೆ ವಿವರ ಈ ಕೆಳಗಿನಂತಿದೆ.

ಇಂದಿಗೆ ಕೋವಿಡ್ ವ್ಯಾಕ್ಸಿನ್ ಯಾವ ತಾಲೂಕಿನಲ್ಲಿ ಎಷ್ಟು ಪ್ರಮಾಣ ವಿದೆ. ವಿವರ ಈ ಕೆಳಗಿನಂತಿದೆ.

ಜಿಲ್ಲೆಯಲ್ಲಿ ಸದ್ಯ ಕರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಯಾವುದೇ ಸಮಸ್ಯೆಗಳಿಲ್ಲ. ಇನ್ನು ಜಿಲ್ಲಾಧಿಕಾರಿ ಆದೇಶದಂತೆ ಕರೋನೇತರ ಚಿಕಿತ್ಸೆಗೆ ಕೋವಿಡ್ ನೆಗಟೀವ್ ರಿಪೋರ್ಟ ಅವಷ್ಯವಿಲ್ಲ. ಒಂದುವೇಳೆ ಯಾವುದೇ ಆಸ್ಪತ್ರೆಯವರು ಅನ್ಯ ಚಿಕಿತ್ಸೆಗೆ ಕೋವಿಡ್ ನೆಗಟೀವ್ ರಿಪೋರ್ಟ ಕೇಳಿದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ದೂರು ನೀಡಬಹುದಾಗಿದ್ದು,ಅಂತಹ ಆಸ್ಪತ್ರೆ ಅಥವಾ ವೈದ್ಯರ ವಿರುದ್ಧ ಕ್ರಮ ಜರುಗಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಕೋವಿಡ್ ಹೊರತುಪಡಿಸಿ ಅಪಘಾತ,ಅಗ್ನಿ ಅವಘಡ, ವಿಫತ್ತು ಅಥವಾ ಇನ್ಯಾವುದೇ ಸಹಾಯಕ್ಕೆ 112 ಗೆ ಕರೆಮಾಡಬಹುದಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!