ಕಾಳಿ ನದಿಯಲ್ಲಿ ಮೊಸಳೆ ಪಾಲಾಗಿದ್ದ ಬಾಲಕನ ಶವ ಪತ್ತೆ

1359

ಕಾರವಾರ:- ಕಾಳಿನದಿಯಲ್ಲಿ ಮೀನು ಹಿಡಿಯಲು ಹೋಗಿ ಮೊಸಳೆ ಪಾಲಾಗಿದ್ದ ದಾಂಡೇಲಿಯ ಮೆಹಬೂಬ್ (15)ಬಾಲಕನ ಶವವು ಎರಡು ದಿನದ ನಂತರ ಇಂದು ಪತ್ತೆಯಾಗಿದೆ. ಪೊಲೀಸರು ,ಅಗ್ನಿಶಾಮಕ ದಳ ಹಾಗೂ ಸ್ಥಳೀಯರ ಸಹಾಯದಿಂದ ಆತನ ಶವವನ್ನು ಪತ್ತೆಹಚ್ಚಿ ತರಲಾಗಿದೆ.ಮೊಸಳೆ ದಾಳಿಯಿಂದ ಆತನ ಒಂದುಕೈ ಸಂಪೂರ್ಣ ತುಂಡಾಗಿದೆ.


ಭಾನುವಾರ ದಂದು ದಾಂಡೇಲಿಯ ಕಾಳಿ ನದಿ ದಡದಲ್ಲಿ ಮೀನು ಹಿಡಿಯುವಾಗ ಮೊಸಳೆ ಪಾಲಾಗಿದ್ದ ಬಾಲಕನನ್ನು ಹುಡುಕಲು ಅವಿರತ ಶ್ರಮವನ್ನು ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಕೈಗೊಂಡಿದ್ದರು.

ಇದನ್ನೂ ಓದಿ:-

https://kannadavani.news/a-crocodile-dragged-a-boy-who-went-fishing-in-the-kali-river/
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!