ಕಾರವಾರ :- ಕರಾವಳಿಯ ಉಡುಪಿ,ಮಂಗಳೂರು ಭಾಗದಲ್ಲಿ ಒಮಿಕ್ರಾನ್ ಸೋಂಕು ಪತ್ತೆಯಾಗುತಿದ್ದಂತೆ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲೂ ಕಠಿಣ ನಿಯಮಗಳನ್ನು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಜಾರಿ ಮಾಡಿದ್ದಾರೆ.
ಜಿಲ್ಲೆಯಲ್ಲಿ 17 ಜನ ವಿದೇಶದಿಂದ ಬಂದವರನ್ನು ಕೊರಂಟೈನ್ ಮಾಡಲಾಗಿದೆ. 218 ಜನರ ಜಿನೋಮ್ ಸ್ವೀಕ್ವೆನ್ಸ್ ತಪಾಸಣೆಗೆ ಕಳಿಸಿರುವ ಜಿಲ್ಲಾ ಆರೋಗ್ಯ ಇಲಾಖೆ ಇದೀಗ ಜಿಲ್ಲೆಗೆ ಬರುವ ವಿದೇಶಿ ಪ್ರವಾಸಿಗರಿಗೂ ಕ್ವಾರಂಟೈನ್ ಗೆ ಸೂಚಿಸಿದೆ.
ಕಠಿಣ ನಿಯಮ ಜಾರಿ.
ಉತ್ತರ ಕನ್ನಡ ಜಿಲ್ಲೆಗೆ ವಿದೇಶದಿಂದ ಮರಳಿ ಬಂದವರು ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕಿದೆ.
ಯಾರೇ ವಿದೇಶದಿಂದ ಬಂದರೂ ಅವರ ಕೈಗೆ ಕ್ವಾರಂಟೈನ್ ಸೀಲ್ ಹಾಕಲಾಗುತ್ತದೆ.ಅಂತವರು ಮನೆ ಬಿಟ್ಟು ಹೊರ ಹೋಗುವಂತಿಲ್ಲ.
ಇನ್ನು ಮನೆಗೂ ಸಹ ಕ್ವಾರಂಟೈನ್ ಅವಧಿ ಹೊಂದಿದ ಸ್ಟಿಕರ್ ಅನ್ನು ಅಳವಡಿಸಲು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ರವರು ಸೂಚನೆ ನೀಡಿದ್ದಾರೆ.