BREAKING NEWS
Search

ಉತ್ತರ ಕನ್ನಡ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ ನಲ್ಲಿ ಸಮಯ ಬದಲಾವಣೆಗೆ ಜಿಲ್ಲಾಧಿಕಾರಿ ಆದೇಶ

6559

ಕಾರವಾರ :- ಹೊಸ ವರ್ಷಾಚರಣೆ ಸಂಬಂಧ ರಾಜ್ಯ ಸರ್ಕಾರ ಆದೇಶಿಸಿದ್ದ ನೈಟ್ ಕರ್ಫ್ಯೂ ಗೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗಕ್ಕೆ ಮಾತ್ರ ಸಮಯ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಮಾಡಿದ್ದಾರೆ.

ಈ ಆದೇಶ 31-12-2021 ಕ್ಕೆ ಮಾತ್ರ ಸೀಮಿತವಾಗಿದೆ. ಹೊಸ ಆದೇಶದಂತೆ ಡಿ.31 ರಂದು ರಾತ್ರಿ ಎಂಟು ಗಂಟೆಯಿಂದ ಮುಂಜಾನೆ ಐದು ಗಂಟೆ ವರೆಗೆ ಕರ್ಫ್ಯೂ ಜಾರಿ ಇರಲಿದ್ದು ಮರುದಿನ ಎಂದಿನಂತೆ ರಾತ್ರಿ ಹತ್ತು ಗಂಟೆ ವರೆಗೆ ಕರ್ಫೂ ಇರಲಿದೆ. ಈ ಆದೇಶ ಕರಾವಳಿ ಭಾಗದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳದ ಕರಾವಳಿ ತೀರಗಳು,ಉದ್ಯಾನವನಗಳಿಗೆ ಸೀಮಿತವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!