ಉತ್ತರ ಕನ್ನಡ ಜಿಲ್ಲೆ 1060 ಕರೋನಾ ಪಾಸಿಟಿವ್ !ಆರು ಸಾವು!

3075

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆ ಮೂಲಗಳ ಪ್ರಕಾರ ರಾತ್ರಿ 9:30 ರ ಒಳಗೆ ಒಟ್ಟು 1060 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದೆ ಎಂದು ತಿಳಿದುಬಂದಿದೆ.(ನಾಳಿನ ಬುಲಟಿನ್ ನಲ್ಲಿ ಈ ಸಂಖ್ಯೆ ಸೇರ್ಪಡೆ ಗೊಳ್ಳಲಿದೆ.)

ರಾಜ್ಯ ಹೆಲ್ತ್ ಬುಲಟಿನ್ ಪ್ರಕಾರ 06/05/2021 ರ ಸಂಜೆ ಒಳಗೆ 734 ಕರೋನಾ ಪಾಸಿಟಿವ್ ವರದಿಯಾಗಿದ್ದು ಆರು ಜನರು ಕರೋನಾಕ್ಕೆ ಬಲಿಯಾಗಿದ್ದಾರೆ‌.

ಜಿಲ್ಲೆಯಲ್ಲಿ ಕಾರವಾರದಲ್ಲಿ ಕಳೆದ ಮೂರು ದಿನಗಳಿಂದ ಕರೋನಾ ಸೋಂಕಿತ ಸಂಖ್ಯೆ ಪ್ರತಿ ದಿನ 150 ರಿಂದ 200ರ ಗಡಿ ದಾಟಿದೆ. ನಂತರದ ಸ್ಥಾನದಲ್ಲಿ ಅಂಕೋಲ,ಶಿರಸಿ ,ಯಲ್ಲಾಪುರ ಸ್ಥಾನ ಪಡೆದುಕೊಂಡಿದೆ.

ಈ ಬಾರಿ ಹಳ್ಳಿ ಭಾಗದಲ್ಲಿ ಅತೀ ಹೆಚ್ಚು ಸೋಂಕಿತರ ಸಂಖ್ಯೆ ದಾಖಲಾಗುತ್ತಿದೆ. ಇನ್ನು ಸಾವಿನ ಸಂಖ್ಯೆಯಲ್ಲೂ 18 ರಿಂದ 45 ವರ್ಷ ವಯಸ್ಸಿನವರೇ ಬಲಿಯಾಗುತಿದ್ದು ಈ ಸಂಖ್ಯೆ ಜಿಲ್ಲೆಯಲ್ಲಿ ಏರಿಕೆ ಕಾಣುತ್ತಿದೆ.

ಎರಡನೇ ಅಲೆಯಲ್ಲಿ ವ್ಯಾಕ್ಸಿನ್ ತೆಗೆದುಕೊಂಡ ವೈದ್ಯರು ಮತ್ತು ಇತರೆ ವ್ಯಕ್ತಿಗಳಲ್ಲೂ ಕರೋನಾ ಪಾಸಿಟಿವ್ ವರದಿಯಾಗಿದೆ.

ಜಿಲ್ಲೆಯಲ್ಲಿ 4500 ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಬೆಂಗಳೂರು ಭಾಗದಿಂದ ಬಂದವರಿಂದಾಗಿ ಸಹ ಸೋಂಕು ಹರಡುತಿದ್ದು ಜನರು ಭಯ ಪಡುವಂತೆ ಮಾಡಿದೆ.

ರಾಜ್ಯದ ಹೆಲ್ತ್ ಬುಲಟಿನ್ ವಿವರ ಈ ಕೆಳಗಿನಂತಿದೆ:-

ಇಂದು ನ ಉತ್ತರ ಕನ್ನ ಜಿಲ್ಲೆಯ ಬೆಡ್ ಗಳು ಹಾಗೂ ಐಸಿಯು ವಿವರ



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!