ಉತ್ತರ ಕನ್ನಡ ಜಿಲ್ಲೆಯ 2500ಕ್ಕೂ ಹೆಚ್ಚು ಮನೆಗಳಿಗಿಲ್ಲ ವಿದ್ಯುತ್! ಉಂಡು ತಿಂದವರೇ ಇತ್ತ ನೋಡಿ.

266

ಕಾರವಾರ :-ಕತ್ತಲಾಯಿತು ಎಂದರೇ ಆ ಗ್ರಾಮಗಳಿಗೆ ಸೀಮೆಎಣ್ಣೆ ಚಿಮಣಿ ದೀಪವೇ ಗತಿ.ಸ್ವಾತಂತ್ರ್ಯ ಬಂದು ಇಷ್ಟು ವರ್ಷ ಕಳೆದರೂ ಆ ಗ್ರಾಮದ ಜನರ ಬದುಕಿಗೆ ಬೆಳಕೆ ಇಲ್ಲ. ಯಾವ ಮೂಲಭೂತ ಸೌಕರ್ಯವೂ ಇಲ್ಲದೇ ಸರ್ಕಾರದ ಯೋಜನೆಯ ಫಲವೂ ಇಲ್ಲದೇ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳು ಇಂದು ಕತ್ತಲಲ್ಲೇ ಬದುಕುತ್ತಿವೆ .ಈ ಕುರಿತು ಜನ ದ್ವನಿ ಅಂಕಣದಲ್ಲಿ ನೀಡಿದ್ದೇವೆ ಓದಿ.

copyrights Kannadavani.news

ಕಡು ಕತ್ತಲಲ್ಲೇ ಚಿಮಣಿ ದೀಪದಲ್ಲಿ ಅಡುಗೆ ಮಾಡುವ ಮಹಿಳೆಯರು,ಮತ್ತೊಂದೆಡೆ ಚಿಕ್ಕದೀಪದ ಬೆಳಕಲ್ಲಿ ಓದುತ್ತಿರುವ ಪುಟ್ಟ ಮಕ್ಕಳು. ಇಂತಹ ದೃಶ್ಯಗಳು ಸಿಗೋದು ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಉಳವಿ ಪಂಚಾಯ್ತಿ ವ್ಯಾಪ್ತಿಯ ಅಂಬೋಳಿ ಮುಂಬರ್ಗಿ ಗ್ರಾಮದಲ್ಲಿ.

ಜೋಯಿಡಾ ತಾಲೂಕಿನ ಉಳವಿ,ಡಿಗ್ಗಿ ,ಅಣಶಿ ,ಗ್ರಾಮಪಂಚಾಯ್ತಿ ವ್ಯಾಪ್ತಿಯ ಹಳ್ಳಿಗಳಲ್ಲಿ ಈವರೆಗೂ ಮನೆಗಳಿಗೆ ವಿದ್ಯುತ್ ದೀಪದ ಬೆಳಕೇ ಕನಸಿನ ಮಾತಾಗಿದೆ.

ಕೇಂದ್ರ ಸರ್ಕಾರದ ದೀನದೆಯಾಳ್, ಸೌಭಾಗ್ಯದಂತ ಯೋಜನೆಯಡಿಯೂ ಈ ಗ್ರಾಮಗಳಿಗೆ ವಿದ್ಯುತ್ ಸಂಪರ್ಕವೇ ಕಲ್ಪಿಸಿಲ್ಲ.
ರಾಜ್ಯ ಸರ್ಕಾರದ ಬೆಳಕು ಯೋಜನೆ ಸಹ ಈ ಗ್ರಾಮಕ್ಕೆ ನಿಲುಕದ ನಕ್ಷತ್ರ. ಹೀಗಾಗಿ ಸ್ವಾತಂತ್ರ ಬಂದು ಇಷ್ಟು ವರ್ಷಗಳು ಕಳೆದರೂ ಈ ಗ್ರಾಮಗಳಿಗೆ ವಿದ್ಯುತ್ ಎಂಬುದೇ ಕನ್ನಡಿಯೊಳಗಿನ ಗಂಟಿನಂತಾಗಿದೆ.

ಈ ಗ್ರಾಮಗಳಿಗೆ ಒಂದರಿಂದ ಎರಡು ಕಿಲೋಮೀಟರ್ ವಿದ್ಯುತ್ ತಂತಿ ಎಳೆದರೆ ಸಾಕು ಸಂಪರ್ಕ ಸಾಧಿಸಬಹುದು.ಆದರೇ ಅರಣ್ಯ ಇಲಾಖೆಯ ತಕರಾರು ಹಾಗೂ ಅಧಿಕಾರಿಗಳ ನಿರ್ಲಕ್ಷ ದಿಂದ ಈವರೆಗೂ ವಿದ್ಯುತ್ ಸಂಪರ್ಕ ವಾಗಿಲ್ಲ. ಇನ್ನು ಬಿಪಿಎಲ್ ಕಾರ್ಡ ಗಳಿಗೆ ಸಹ ಸೀಮೆ ಎಣ್ಣೆ ಸಹ ಸಮರ್ಪಕವಾಗಿ ನೀಡುತ್ತಿಲ್ಲ. ಹೀಗಾಗಿ ಎಣ್ಣೆ ದೀಪವೇ ಇವರಿಗೆ ಬೆಳಕಿನ ಮೂಲವಾಗಿದ್ದು ,ದುಬಾರಿ ಹಣ ನೀಡಿ ಎಣ್ಣೆ ಕರೀದಿಸಬೇಕಾಗಿದೆ.

ವಿದ್ಯಭ್ಯಾಸ ಮಾಡುವ ಮಕ್ಕಳಿಗೆ ಆನ್ ಲೈನ್ ತರಗತಿಗಳ ಸಹ ಮರಿಚಿಕೆಯಾಗಿದ್ದು ಕತ್ತಲಾಗುತಿದ್ದಂತೆ ಓದಲು ಸಹ ಮಕ್ಕಳಿಗೆ ಸಾಧ್ಯವಾಗದು. ಹೆಚ್ಚಿನ ವಿದ್ಯಾಭ್ಯಾಸ ಮಾಡಬೇಕು ಎಂದರೆ ಸಂಬಂಧಿಕರ ಅಥವಾ ಹಾಸ್ಟೆಲ್ ನಲ್ಲಿ ಬಿಡಬೇಕಾಗಿದ್ದು ಹಲವು ಮಕ್ಕಳು ವಿದ್ಯಾಭ್ಯಾಸವನ್ನು ಅರ್ಧಕ್ಕೆ ಮೊಟಕು ಗೊಳಿಸಿದ್ದಾರೆ.

ಇನ್ನು ಆರ್ಥಿಕವಾಗಿ ತಕ್ಕಮಟ್ಟಿಗಿದ್ದವರು ಮಾತ್ರ ಸೋಲಾರ್ ನನ್ನು ತಮ್ಮ ಸ್ವಂತ ಕರ್ಚಿನಿಂದ ಮಾಡಿಸಿಕೊಂಡಿದ್ದಾರೆ.ಆದ್ರೆ ಇದು ಮಳೆಗಾಲದಲ್ಲಿ ಕೈಕೊಡುವುದರಿಂದ ಚಿಮಣಿ ದೀಪವೇ ಗತಿಯಾಗಿದೆ‌ .ನಾವು ಕತ್ತಲ್ಲೇ ಮೂರು ತಲೆಮಾರು ಕಳೆದೆವು ಈಗ ನಮ್ಮ ಮೊಮ್ಮಕ್ಕಳ ಭವಿಷ್ಯಕ್ಕಾದರೂ ವಿದ್ಯುತ್ ಸಂಪರ್ಕ ನೀಡಿ ಎಂಬುದು ಇಲ್ಲಿನ ಹಿರಿಯ ಮಹಿಳೆ ಲಕ್ಷ್ಮಿ. ಮಂಜಮ್ಮನವರ ಅಳಲು.

ಉತ್ತರ ಕನ್ನಡ ಜಿಲ್ಲೆಯಲ್ಲಿ 60 ಗ್ರಾಮಂಚಾಯ್ತಿ ವ್ಯಾಪ್ತಿಯ 2500 ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಲ್ಲ. ಗುಡ್ಡಗಾಡು ಪ್ರದೇಶ,ಚದುರಿದ ಗ್ರಾಮಗಳ ಮನೆಗಳು , ಇವುಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆಹಾಕುವಲ್ಲಿ ವಿಳಂಬ ಮಾಡಿದರೇ, ಅರ್ಜಿ ವಿಲೇವಾರಿ ವಿಳಂಬ ,ಅರಣ್ಯ ಇಲಾಖೆ ಅಡ್ಡಿಯಿಂದ ಈವರೆಗೂ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಳಂಬವಾಗಿದೆ.

ಆದ್ರೆ ಹೆಸ್ಕಾ ಹಿರಿಯ ಅಧಿಕಾರಿಗಳು ಮಾತ್ರ ಜಿಲ್ಲೆಯಲ್ಲಿರುವ ವಿದ್ಯುತ್ ರಹಿತ ಹಲವು ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ನೀಡಿದ್ದೇವೆ 2015 ರಲ್ಲೇ ಎಲ್ಲಾ ಗ್ರಾಮಕ್ಕೆ ವಿದ್ಯುತ್ ನೀಡಲಾಗಿದೆ ಎಂದು ಕಡತದಲ್ಲಿ ನಮೋದಿಸಿದ್ದಾರೆ. ಇದು ಶಿರಸಿ ಭಾಗಕ್ಕೆ ಸಹ ಹೊರತಾಗಿಲ್ಲ.

ಇನ್ನು ವಿದ್ಯುತ್ ನೀಡದ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಸಹ ಪ್ರತಿಕ್ರಿಯಿಸಿದ್ದು 2500 ಕ್ಕೂ ಹೆಚ್ಚು ಮನೆಗಳಿಗೆ ಜಿಲ್ಲೆಯಲ್ಲಿ ವಿದ್ಯುತ್ ಇಲ್ಲ. ವಿದ್ಯುತ್ ನೀಡಲು ಸಾದಕ ಬಾದಕಗಳ ಬಗ್ಗೆ ಮಾಹಿತಿ ಕಲೆಹಾಕುತಿದ್ದೇವೆ, ಅರಣ್ಯವಾಗಿರುವುದರಿಂದ ಸಮಸ್ಯೆ ಎದುರಾಗಿದೇ ಶೀಘ್ರವೇ ಬಗೆಹರಿಸಿ ವಿದ್ಯುತ್ ಪೂರೈಕೆ ಮಾಡುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:- ಈ ಊರಿನ ಜನರಿಗೆ ಜೋಳಿಗೆಯೇ ಅಂಬುಲೆನ್ಸ್ ,ಸಂಕಷ್ಟ ಕೇಳುವವರು ಯಾರು? (ಅಕ್ಷರದ ಮೇಲೆ ಕ್ಲಿಕ್ ಮಾಡಿ ಓದಿ)

ಕೈಗಾ ಅಣುಸ್ಥಾವರ ,ಕದ್ರಾ ಜಲವಿದ್ಯುತ್ ಯೋಜನೆಯ ಮೂಲಕ ದೇಶಕ್ಕೆ ಬೆಳಕು ನೀಡಿದ ಉತ್ತರ ಕನ್ನಡ ಜಿಲ್ಲೆಯ ಹಳ್ಳಿಗರಿಗೆ ಮಾತ್ರ ಕತ್ತಲೇ ಜೀವನವಾಗಿದೆ.ದೀಪದ ಬುಡ ಕತ್ತಲು ಎನ್ನುವ ಗಾದೆಯಂತೆ ಇಲ್ಲಿನ ಜನರ ಬದುಕು ಕತ್ತಲಾಗಿದೆ. ಇನ್ನಾದರೂ ಸರ್ಕಾರ ಇತ್ತ ಗಮನಿಸಿ ಇಲ್ಲಿನ ಜನರ ಮನೆ-ಮನಗಳಿಗೆ ಬೆಳಕು ನೀಡಬೇಕಿದೆ.

ನಮ್ಮ ವಿಶೇಷ ಲೇಕನ ಸುದ್ದಿಗಳನ್ನು ತಕ್ಷಣ ಓದಲು ಕೆಳಗೆ ಕೊಟ್ಟಿರುವ WhatsApp ಗ್ರೂಪ್ ಲಿಂಕ್ ಗೆ ಕ್ಲಿಕ್ ಮಾಡಿ ಸೇರಿ.

https://chat.whatsapp.com/I99BjB6usDtEaFCzlY2WQz
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!