BREAKING NEWS
Search

ಕೋವಿಡ್ ಬಂದರೂ ಕಾಲೇಜಿಗೆ ಹಾಜುರಾದ ಪ್ರಾಧ್ಯಾಪಕ-13 ಜನ ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್!

3185

ಕಾರವಾರ:- ಕೋವಿಡ್ ಪಾಸಿಟಿವ್ ಇದ್ದರೂ ಮುಚ್ಚಿಟ್ಟು ಪದವಿ ಕಾಲೇಜಿನಲ್ಲಿ ಪಾಠ ಮಾಡಿದ ಪ್ರಾಣಿಶಾಸ್ತ್ರ ವಿಭಾಗದ ಪ್ರಾಧ್ಯಾಪಕ ನಿಂದಾಗಿ
13 ಜನ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಗೋಖುಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ನಡೆದಿದೆ.
ಕೆಲವು ದಿನದ ಹಿಂದೆ ಖಾಸಗಿ ಕಾರ್ಯಕ್ರಮಕ್ಕಾಗಿ ಮಹಾರಾಷ್ಟ್ರಕ್ಕೆ ತೆರಳಿದ್ದ ಪ್ರಾಧ್ಯಾಪಕನಿಗೆ ಕೋವಿಡ್ ಪಾಸಿಟಿವ್ ವರದಿಯಾಗಿತ್ತು.

ಪಾಸಿಟಿವ್ ಬಂದಿದ್ದರಿಂದ ಹೋಮ್ ಐಸೋಲೇಷನ್ ಗೆ ಸೂಚಿಸಲಾಗಿತ್ತು.ಆದರೇ
ರಜೆ ಹಾಕಿದರೆ ಗಳಿಕೆ ರಜೆ ವ್ಯರ್ಥವಾಗುತ್ತದೆ ಎನ್ನುವ ಕಾರಣದಿಂದ ರಜೆ ಹಾಕದೇ ಉಪನ್ಯಾಸಕ ಕಾಲೇಜಿಗೆ ಹಾಜುರಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡಿದ್ದಾರೆ. ಇದರಿಂದ 13 ಜನ ವಿದ್ಯಾರ್ಥಿಗಳಿಗೆ ಪಾಸಿಟಿವ್ ವರದಿಯಾಗಿದೆ. ಸದ್ಯ ಕಾಲೇಜಿನಲ್ಲಿ ಕೋವಿಡ್ ಸೋಂಕಿತ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿಗಳ ಸಂಪರ್ಕಕ್ಕೆ ಬಂದ 320 ವಿದ್ಯಾರ್ಥಿಗಳನ್ನು
ಆರೋಗ್ಯ ಇಲಾಖೆ ಇಂದು ಕೊವಿಡ್ ತಪಾಸಣೆ ನಡೆಸಿದೆ.

ಕೋವಿಡ್ ಆತಂಕ ಕಾಲೇಜಿಗೆ ಗೈರಾದ ವಿದ್ಯಾರ್ಥಿಗಳು

ಗೋಖುಲೆ ಸೆಂಟಿನರಿ ಪದವಿ ಕಾಲೇಜಿನಲ್ಲಿ ಹಾಗೂ ಕೆಲವು ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೋವಿಡ್ ಪಾಸಿಟಿವ್ ವರದಿ ಬರುತಿದ್ದಂತೆ ಪೋಷಕರಲ್ಲಿ ಆತಂಕಕ್ಕೆ ಕಾರಣವಾಗಿದ್ದು ಇದರಿಂದ ವಿದ್ಯಾರ್ಥಿಗಳು ಕಾಲೇಜುಗಳಿಗೆ ಗೈರಾಗಿದ್ದಾರೆ.

ವಿದ್ಯಾರ್ಥಿಗಳಲ್ಲಿ ಶೀತ,ಜ್ವರ.

ಅಂಕೋಲದ ಕಾಲೇಜುಗಳಲ್ಲಿ ಹಲವು ಮಕ್ಕಳಲ್ಲಿ ಶೀತ ,ಜ್ವರ ಕಾಣಿಸಿಕೊಂಡಿದೆ. ಆದರೇ ಹಲವು ಮಕ್ಕಳು ಕೋವಿಡ್ ತಪಾಸಣೆಗೆ ಹಿಂಜರಿಯುತಿದ್ದು ,ಮನೆಯಲ್ಲೇ ಚಿಕಿತ್ಸೆ ಪಡೆಯುತಿದ್ದಾರೆ. ಇನ್ನು ಹಲವು ವಿದ್ಯಾರ್ಥಿಗಳು ಕೋವಿಡ್ ಲಕ್ಷಣವಿದ್ದರೂ ತರಗತಿಗೆ ಹಾಜುರಾಗುತಿದ್ದು ಮತ್ತಷ್ಟು ಸೋಂಕು ಹೆಚ್ಚಾಗುವ ಭೀತಿ ಆವರಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!