ಕಾಳಿ ನದಿಯಲ್ಲಿ ಅಪರಿಚಿತನ ಶವ ಎಳೆದೊಯ್ದ ಮೊಸಳೆ!

1530

ದಾಂಡೇಲಿ ನಗರದ ಕುಳಗಿ ರಸ್ತೆಯ ಕಾಳಿ ನದಿ ಸೇತುವೆ ಕೆಳಗೆ ಮೊಸಳೆ ಯೊಂದು ಅಪರಿಚಿತ ವ್ಯಕ್ತಿಯ ಶವ ಎಳೆದೊಯ್ದ ಘಟನೆ ನಡೆದಿದೆ.

ಕಾಳಿ ನದಿ ಸೇತುವೆಯಿಂದ ಮೊಸಳೆಯು ಮೃತದೇಹವನ್ನು ಕೋಗಿಲಬನ ಗ್ರಾಮದ ಖಾಸಗಿ ರೆಸಾರ್ಟ್ ತನಕ ಎಳೆದುಕೊಂಡು ಹೋಗಿತ್ತು. ಶವವನ್ನು ಹೊರತರುವಲ್ಲಿ ಜಂಗಲ್ ಸಫಾರಿ ರ‌್ಯಾಫ್ಟಿಂಗ್ ತಂಡ ಹಾಗೂ ಪೋಲೀಸ್ ಸಿಬ್ಬಂದಿ ಸಹಕರಿಸಿದ್ದಾರೆ.

ವ್ಯಕ್ತಿಯ ಒಂದು ಕೈ ಹಾಗೂ ಒಂದು ಕಾಲು ತುಂಡಾಗಿದ್ದು ಶವವು ಕೊಳೆತ ಸ್ಥಿತಿಯಲ್ಲಿದೆ.

ಮೃತ ವ್ಯಕ್ತಿ ಗುರುತು ಈವರೆಗೂ ಪತ್ತೆ ಯಾಗಿಲ್ಲ.
ವ್ಯಕ್ತಿಯು ಮೊಸಳೆ ದಾಳಿಗೆ ಒಳಾಗಿದ್ದರೋ, ಆತ್ಮಹತ್ಯೆಯೇ ಅಥವಾ ಕೊಲೆಯೇ ಎಂಬ ಬಗ್ಗೆ ತನಿಖೆಯಿಂದ ತಿಳಿದುಬರಬೇಕಿದೆ. ಮೃತನ ಗುರುತು ಪತ್ತೆಹಚ್ಚಲು ಡಿ.ಎನ್.ಎ ಪರೀಕ್ಷೆ ಪೊಲೀಸರು ಮುಂದಾಗಿದ್ದಾರೆ.

ಘಟನಾ ಸ್ಥಳಕ್ಕೆ ತಹಶೀಲ್ದಾರ್ ಶೈಲೇಶ ಪರಮಾನಂದ, ಕೋಗಿಲೆಬನ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶೋಕ ನಾಯ್ಕ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮರಣೊತ್ತರ ಪರೀಕ್ಷೆ ನಡೆಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!