ಕಾರವಾರ- ದರ್ಗಾ ಕಟ್ಟಡ ಕ್ಕೆ ಹಾನಿಮಾಡಿದ ಆರೋಪಿಗಳ ಬಂಧನ

1452

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಕಣಸಗಿರಿ ಬಂದರವಾಡದಲ್ಲಿರುವ ದರ್ಗಾ ವನ್ನು ಹಾನಿ ಮಾಡಿದ ಘಟನೆ ಸಂಬಂಧ ಮೂರು ಜನ ಆರೋಪಿಗಳನ್ನು ಚಿತ್ತಾಕುಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬಂಧಿತರು ಕಾರವಾರ ನಗರದ ಗಿಂಡಿವಾಡ ಕಣಸಗಿರಿ.
ಮಹೇಂದ್ರ ರಾಣಿ (39 ) ,ಸಾವಂತವಾಡಾ, ಮಾಜಾಳಿಯ ವಿನಾಯಕ ಸಾವಂತ(40),ಖುರ್ಸಾವಾಡ
ಮುರಳೀಧರ ಬಂಧಿತ ಆರೋಪಿಗಳಾಗಿದ್ದು ,ಬಂಧಿತರಿಂದ ಕೃತ್ಯಕ್ಕೆ ಬಳಸಿದ
2 ಸುತ್ತಿಗೆ, ಒಂದು ಕಾರ್ ಹಾಗೂ ಒಂದು ಮೋಟಾರ ಸೈಕಲ್‌ನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಘಟನೆ ಏನು?

ಚಿತ್ತಾಕುಲಾ ಪೊಲೀಸ್ ಠಾಣೆ ವ್ಯಾಪ್ತಿಯ ಕಣಸಗಿರಿ ಬಂದರವಾಡದಲ್ಲಿರುವ ದರ್ಗಾಕ್ಕೆ ಯಾರೋ ದಿನಾಂಕ: 01-02-2022 ರಂದು ಮಂಗಳವಾರ ಮದ್ಯಾಹ್ನ 12-00 ಗಂಟೆಯಿಂದ ದಿನಾಂಕ:03 02-2022 ರಂದು ಬೆಳಗ್ಗೆ 11-00 ಗಂಟೆಯ ಒಳಗೆ ದರ್ಗಾಕ್ಕೆ ಪ್ರವೇಶ ಮಾಡಿ ಧಾರ್ಮಿಕ ಭಾವನೆಗೆ ದಕ್ಕೆಯುಂಟಾಗುವಂತೆ ಹಸಿರು ಬಾವುಟವನ್ನು ಬೆಂಕಿ ಹಚ್ಚಿ ಭಾಗಶಃ ಸುಡುವಂತೆ ಮಾಡಿ, ದರ್ಗಾದ ಗೋಡೆಗಳನ್ನು ಕೆಡವಿ ಹಾಗೂ ಕಬ್ಬಿಣದ ಗ್ರಿಲ್ ಮತ್ತು ಗೇಟನ್ನು ಭಾಗಶಃ ಹಾಳು ಮಾಡಿ ದರ್ಗಾದ ಮಜರ್ (ಹಿರಿಯರ ಸಮಾದಿ) ಯನ್ನು ಒಡೆದು ಹಾಕಿ ಅದರ ಮೇಲೆ ಹೊದಿಸಿದ ಹಸಿರು ಗಲೀಪನ್ನು ತೆಗೆದು ಬಿಸಾಕಿದ್ದರು. ಈ ಕುರಿತು ತನಿಖೆ ಕೈಗೊಂಡ ಪೊಲೀಸರು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!