ಕಾರವಾರ-ಅಕ್ರಮವಾಗಿ ಸಾಗಾಟ ಮಾಡುತಿದ್ದ ಸ್ಪೋಟಕ ವಶ

2162

ಕಾರವಾರ :- ಕಾರಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸ್ಟೋಟಕ ವಸ್ತುಗಳನ್ನು ಕಾರವಾರ ನಗರದ ಲಂಡನ್ ಬ್ರಿಡ್ಜ್ ಸಮೀಪ ಪೊಲೀಸರು ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿದ್ದಾರೆ.

84 ಜಿಲೆಟಿನ್ ಕಡ್ಡಿಗಳು, 4 ಇಲಕ್ಟ್ರಿಕ್ ಡಿಟೋನೆಟರ್ ವಶಕ್ಕೆ ಪಡೆಯಲಾಗಿದ್ದು
ಬಾಲಮುರುಗನ್, ಆನಂದ ನಾಯ್ಕ್ ಎಂಬುವವರನ್ನು ವಶಕ್ಕೆ ಪಡೆಯಲಾಗಿದೆ.

ಅಂಕೋಲ ದಿಂದ ದಾಖಲೆ ಇಲ್ಲದೇ ಅವೈಜ್ಞಾನಿಕ ರೀತಿಯಲ್ಲಿ ಕಾರಿನಲ್ಲಿ ಕಾರವಾರಕ್ಕೆ ಸ್ಪೋಟಕ ವಸ್ತುಗಳನ್ನು ಸಾಗಿಸುತ್ತಿದ್ದ ಆರೋಪಿಗಳ ಬಗ್ಗೆ ಮಾಹಿತಿ ಪಡೆದ ಕಾರವಾರ ನಗರ ಪೊಲೀಸರು ದಾಳಿ ನಡೆಸಿದ್ದಾರೆ.ಘಟನೆ ಸಂಬಂಧ ಕಾರವಾರ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!