BREAKING NEWS
Search

ಕಾರವಾರ ಪೌರಾಯುಕ್ತರ ಮೇಲೆ ಹಲ್ಲೆಗೆ ಯತ್ನ-ದೂರು ದಾಖಲು

769

ಕಾರವಾರ :- ಕಾರವಾರ ನಗರಸಭೆಯ ಪೌರಾಯುಕ್ತ ಆರ್.ಪಿ.ನಾಯ್ಕ ಅವರಿಗೆ ಅವಾಚ್ಯಶಬ್ದಗಳಿಂದ ನಿಂದಿಸಿ ಕಚೇರಿಯಲ್ಲಿದ್ದ ಬಣ್ಣದ ಡಬ್ಬಿಯಿಂದ ಹೊಡೆಯಲು ಮುಂದಾದ ಬಗ್ಗೆ ನಗರಸಭೆಯ ಆಯುಕ್ತ ಆರ್.ಪಿ ನಾಯ್ಕ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಜಿ.ಬಿ. ಇವರ ವಿರುದ್ಧ ಕಾರವಾರದ ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಗುರುವಾರ ಸಂಜೆ 4 ಗಂಟೆ ಸುಮಾರಿಗೆ ಪೌರಾಯುಕ್ತರು ತಮ್ಮಕೊಠಡಿಯಲ್ಲಿ ಪರಿಸರ ಅಭಿಯಂತರ ಮಲ್ಲಿಕಾರ್ಜುನ ಅವರಿಗೆ ಸರಿಯಾಗಿ ಕೆಲಸ ಮಾಡದೇ ಇರುವ ಬಗ್ಗೆ ಪ್ರಶ್ನಿಸಿದಾಗ, ಏಕಾ ಏಕಿ ಸಿಟ್ಟಿಗೆದ್ದ ಮಲ್ಲಿಕಾರ್ಜುನ್ ಅವರು, ಅವಾಚ್ಯ ಶಬ್ದಗಳಿಂದ ಬೈಯ್ದು ಕೂಗಾಡಿದ್ದಲ್ಲದೇ, ಪೌರಾಯುಕ್ತರ ಕೊಠಡಿಯಲ್ಲಿ ಇರಿಸಲಾದ ಬಣ್ಣದ ಡಬ್ಬಿಯನ್ನು ಎತ್ತಿ ಹೊಡೆಯಲು ಬಂದಿದ್ದು, ಈ ಸಂದರ್ಭದಲ್ಲಿ ಕಚೇರಿಯಲ್ಲಿದ್ದ ನೌಕರರು ಆತನನ್ನು ಹಿಡಿದು ಹಲ್ಲೆಯನ್ನು ತಪ್ಪಿಸಿದ್ದಾರೆ.ಸಂದರ್ಭದಲ್ಲಿ ಡಬ್ಬಿಯಲ್ಲಿದ್ದ ಬಣ್ಣವು ಪೌರಾಯುಕ್ತರ ಕೊಠಡಿಯಲ್ಲಿ ಚೆಲ್ಲಾಡಿದೆ.

ಈ ಕುರಿತು ಪೌರಾಯುಕ್ತರು ತಮ್ಮದೂರಿನಲ್ಲಿ ತಿಳಿಸಿದ್ದಾರೆ. ಈ ಹಿಂದೆ ಕೂಡ ಮಲ್ಲಿಕಾರ್ಜುನ ಅವರು ಅವಾಚ್ಯ ಶಬ್ದಗಳಿಂದ ಬೈಯ್ದು ಹೊಡೆಯಲು ಮುಂದಾಗಿದ್ದು ,ಆ ಸಂದರ್ಭದಲ್ಲಿ ಪೊಲೀಸ್ ಠಾಣೆಯಲ್ಲಿ ಮಲ್ಲಿಕಾರ್ಜುನ್ ವಿರುದ್ಧ ದೂರು ದಾಖಲಿಸಲಾಗಿತ್ತು. ಆದರೆ ಮಲ್ಲಿಕಾರ್ಜುನ ಅವರು ಕ್ಷಮೆ ಕೇಳಿದ್ದ ಕಾರಣಕ್ಕೆ ಅವರ ವಿರುದ್ಧ ನೀಡಿದ್ದ ದೂರನ್ನು 2021 ರ ಡಿಸೆಂಬರ್ 18 ರಂದು ವಾಪಸ್ ಪಡೆಯಲಾಗಿತ್ತು.ಒಬ್ಬ ಹಿರಿಯ ಅಧಿಕಾರಿ ಸ್ಥಾನದಲ್ಲಿರುವ ನನಗೆ ಸರಕಾರಿ ನೌಕರನಾಗಿರುವ ಮಲ್ಲಿಕಾರ್ಜುನ ಅವರು ಅವಾಚ್ಯ ಶಬ್ದಗಳಿಂದ ಬೈಯ್ದಿರುವುದು ಮನಸ್ಸಿಗೆ ತುಂಬಾ ನೋವು ತಂದಿದೆ. ಮಲ್ಲಿಕಾರ್ಜುನ ವಿರುದ್ಧ ಸೂಕ್ತ ಕ್ರಮ ಕೈಗೊಂಡು ದೂರು ದಾಖಲಿಸಿಕೊಳ್ಳವಂತೆ ಆರ್. ಪಿ.ನಾಯ್ಕ ತಮ್ಮದೂರಿನಲ್ಲಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!