BREAKING NEWS
Search
Doctor, covid vaccine

ಕಾರವಾರ|ಕರೋನಾ ಲಸಿಕೆ ತೆಗೆದುಕೊಳ್ಳಲು ಹೆದರಿದ ವೈದ್ಯರು-ಆರೋಗ್ಯ ಇಲಾಖೆ ಶ್ರಮಕ್ಕೆ ಬೇಷ್!

829

ಕಾರವಾರ :- ರಾಜ್ಯ ಸರ್ಕಾರ ಜ.16 ರಂದು ಕರೋನಾ ಲಸಿಕೆಯನ್ನು ಕರೋನಾ ವಾರಿಯರ್ಸ ಗಳಿಗೆ ಮೊದಲು ನೀಡಲು ಪ್ರಾರಂಭ ಮಾಡಿತು.ಆದ್ರೆ ಜನರಿಗೆ ದೈರ್ಯ ತುಂಬಬೇಕಾದ ವೈದ್ಯರು ಮತ್ತು ನರ್ಸ ಗಳೇ ಕರೋನಾ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ವೈದ್ಯರು,ನರ್ಸ್ ಸೇರಿದಂತೆ ಕರೋನ ವಾರಿಯರ್ಸ ಗಳ ಒಟ್ಟು 14,655 ಜನರಿಗೆ ಲಸಿಕೆ ನೀಡಲು ಜಿಲ್ಲಾ ಆರೋಗ್ಯ ಇಲಾಖೆ ಪಟ್ಟಿ ಮಾಡಿತ್ತು. ಇದರಲ್ಲಿ 9689 ಜನರಿಗೆ ಕರೋನಾ ಲಸಿಕೆ ನೀಡಲಾಗಿದೆ.4966 ಜನ ತೆಗೆದುಕೊಳ್ಳುವುದು ಬಾಕಿ ಇದ್ದು, 311ಜನ ಗರ್ಭಿಣಿ,ಹಾಗೂ ಇತರೆ ರೋಗ ಕಾರಣಗಳಿಗೆ ನೀಡಲಾಗಿಲ್ಲ.9 ಜನರಿಗೆ ಜಿಲ್ಲೆಯಲ್ಲಿ ಲಸಿಕೆ ಪಡೆದ ನಂತರ ತಲೆ ಸುತ್ತುವ ಹಾಗೂ ಜ್ವರದ ಚಿಕ್ಕಪುಟ್ಟ ಪರಿಣಾಮ ಬಿಟ್ಟರೆ ಲಸಿಕೆಯ ಅಡ್ಡಪರಿಣಾಮ ಆಗಿಲ್ಲ. ಇನ್ನು 4655 ಜನರು ತೆಗೆದುಕೊಳ್ಳಬೇಕಿದ್ದು ಇದರಲ್ಲಿ ವೈದ್ಯರು,ನರ್ಸಗಳು ,ಆಯುಷ್ ಇಲಾಖೆ ವೈದ್ಯರು,ಖಾಸಗಿ ಆಸ್ಪತ್ರೆ ಸಿಬ್ಬಂದಿಗಳು ಸೇರಿದ್ದಾರೆ. ಆದರೇ ಇವರಲ್ಲಿ ಕಡ್ಡಾಯವಲ್ಲದ ಕಾರಣ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.

ಇನ್ನು ಈ ಕುರಿತು ಮಾತನಾಡಿದ ಆರ್.ಸಿ.ಹೆಚ್.ಓ ರಮೇಶ್ ರವರು ಹೇಳುವಂತೆ 50% ವೈದ್ಯರು,ನರ್ಸುಗಳು ಅದರಲ್ಲೂ ಖಾಸಗಿ ಆಸ್ಪತ್ರೆಯವರೇ ಹೆಚ್ಚಾಗಿ ಲಸಿಕೆ ತೆಗೆದುಕೊಳ್ಳಲು ನಿರಾಕರಿಸಿದ್ದಾರೆ.ಇವರ ಮನಪರಿವರ್ತನೆ ಮಾಡಲು ಇಲಾಖೆ ಪ್ರಯತ್ನ ನಡೆಸುತ್ತಿದೆ.ಲಸಿಕೆಯಿಂದ ಯಾವುದೇ ಸಮಸ್ಯೆಗಳು ಹೆಚ್ಚಿನದಾಗಿಲ್ಲ.ಲಸಿಕಿಯಿಂದ ಯಾವುದೇ ತೊಂದರೆ ಆಗದು ರಾಜ್ಯದಲ್ಲಿ ಲಸಿಕೆ ನೀಡುವಲ್ಲಿ ನಾಲ್ಕನೇ ಸ್ಥಾನ ಉತ್ತರ ಕನ್ನಡ ಜಿಲ್ಲೆಗೆ ಸಂದಿದೆ, ಇನ್ನು ಉಳಿದ ನಾಲ್ಕು ಸಾವಿರ ಜನರಿಗೂ ಲಸಿಕೆ ನೀಡುತ್ತೇವೆ. ಸದ್ಯ ಜಿಲ್ಲೆಯಲ್ಲಿ ಮೊದಲ ಹಂತವಾಗಿ 7500 ಲಸಿಕೆಗಳು ಬಂದಿದ್ದವು ನಂತರ ಎರಡನೇ ಹಂತದಲ್ಲಿ 7500 ಲಸಿಕೆ ಬಂದಿದೆ.ನಮ್ಮ ಬೇಡಿಕೆ 15ಸಾವಿರ ಲಸಿಕೆಯದ್ದಾಗಿತ್ತು.ಆದರೇ ಯಾವುದೇ ತೊಂದರೆ ಆಗದಂತೆ ಲಸಿಕೆಯನ್ನು ಸರ್ಕಾರ ನೀಡಿದೆ. ಎಂದಿದ್ದಾರೆ.

ಇನ್ನು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಲಸಿಕೆ ಪಡೆಯದ ವೈದ್ಯರು,ನರ್ಸಗಳಿಗೆ ಕೌನ್ಸಲಿಂಗ್ ಮೂಲಕ ಮನಪರಿವರ್ತನೆಗೆ ಜಿಲ್ಲಾ ಆರೋಗ್ಯ ಇಲಾಖೆ ಮುಂದಾಗಿದೆ. ಇನ್ನು ಈ ಕುರಿತು ಭಯ ಬಿಡುವಂತೆ ಜಾಗೃತಿ ಪ್ರಯತ್ನ ಸಾಗಿದೆ. ಆದರೂ ಜಿಲ್ಲೆಯು ರಾಜ್ಯದಲ್ಲೇ ಅತೀ ಹೆಚ್ಚು ವ್ಯಾಕ್ಸಿನ್ ಪಡೆದ ಜಿಲ್ಲೆಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದೆ.

ನಾಳೆ ಮಕ್ಕಳಿಗೆ ಪೋಲಿಯೋ ಲಸಿಕೆ.

www.kannadavani.news

ನಾಳೆ ರಾಜ್ಯಾಧ್ಯಾಂತ ಪೋಲಿಯೋ ಲಸಿಕೆಯನ್ನು ನೀಡಲಾಗುತಿದ್ದು ರಾಜ್ಯದಲ್ಲಿ ಅಲ್ಲದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಸಹ ನೀಡಲಾಗುತ್ತಿದೆ.

ಜಿಲ್ಲೆಯಲ್ಲಿ 881 ಪೊಲಿಯೋ ವ್ಯಾಕ್ಸಿನೇಷನ್ ಬೂತ್ ಗಳನ್ನು ಮಾಡಲಾಗಿದ್ದು ಆರೋಗ್ಯ ಇಲಾಖೆಯಿಂದ 10,3583 ಮಕ್ಕಳಿಗೆ ಜಿಲ್ಲೆಯಲ್ಲಿ ಲಸಿಕೆ ನೀಡಲು ಗುರಿ ಹೊಂದಲಾಗಿದೆ.

ಒಟ್ಟು 3,22804 ಮಕ್ಕಳಿರುವ ಮನೆಗಳನ್ನು ಜಿಲ್ಲೆಯಲ್ಲಿ ಗುರುತಿಸಲಾಗಿದ್ದು 3679 ವ್ಯಾಕ್ಸಿನೇಟರ್ ,200 ಸುಪ್ರವೇಜರ್ ,35 Transits ಟೀಮ್ ಅನ್ನು ವ್ಯವಸ್ಥೆ ಮಾಡಲಾಗಿದೆ.

ಇದನ್ನು ಓದಿ:-

https://kannadavani.news/uttarakannada-police-a-man-sentenced-to-11-years-in-jail-for-raping-six-year-old-girl/




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!