BREAKING NEWS
Search

ಒಂದರಿಂದ ಶಾಲೆ ಪ್ರಾರಂಭಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ- ಶಿಕ್ಷಣ ಸಚಿವ ಬಿಸಿ ನಾಗೇಶ್.

544

ಕಾರವಾರ : – ತಾಂತ್ರಿಕ ಸಲಹಾ ಸಮಿತಿ ಸಲಹೆ ಇಲ್ಲದೇ ಒಂದನೇ ತರಗತಿ ಪ್ರಾರಂಭಿಸುವುದಿಲ್ಲ ,ಈಗಾಗಲೇ ಒಂದರಿಂದ ಶಾಲೆ ಆರಂಭಿಸಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶಿಕ್ಷಣ ಸಚಿವ ಬಿ ಸಿ ನಾಗೇಶ ಹೇಳಿದ್ದಾರೆ.

ತಾಲೂಕಿನ ಬಂಗಾರಮಕ್ಕಿ ಶ್ರೀ ಕ್ಷೇತ್ರ ವೀರಾಂಜನೇಯ ದೇವಾಲಯಕ್ಕೆ ಭೇಟಿ ನೀಡಿದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ಪಡೆದು ಆರನೇ ತರಗತಿಯಿಂದ ಆರಂಭ ಮಾಡಿದ್ದು ಯಶಸ್ವಿಯಾಗಿದ್ದೇವೆ.


ರಾಜ್ಯದಲ್ಲಿ ಪಠ್ಯ ಪುಸ್ತಕ ಈಗಾಗಲೇ 82 ಶೇ. ಪೂರೈಕೆಯಾಗಿದೆ. ಪಠ್ಯ ಪುಸ್ತಕ ಸಮಿತಿ ರಚನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕಳೆದ ಸಲ ಈ ವಿಷಯ ಯಾಕೆ ಟೀಕೆಗೊಳಗಾಗಿಲ್ಲ. ಯಾವುದೇ ಪಠ್ಯಪುಸ್ತಕ ಕ್ರಮ 20 ರಿಂದ 15 ವರ್ಷ ಇರುತ್ತೆ. ಕಾಲಕಾಲಕ್ಕೆ ಅವಶ್ಯಕತೆಗನುಗುಣವಾಗಿ ಪಠ್ಯಕ್ರಮ ರಚನೆಯಾಗುತ್ತೆ. 2015ರಲ್ಲಿ ಆದ ಪಠ್ಯಕ್ರಮ 2017ರಲ್ಲಿ ಯಾಕೆ ಆಯಿತು ಎಂದು ಪ್ರಶ್ನಿಸಿದ ಅವರು, ಪ್ರತಿಸಲ ಪಠ್ಯ ಕ್ರಮದಲ್ಲಿ ಇರುವ ಅಲ್ಪಸ್ವಲ್ಪ ತಪ್ಪು ಗಳನ್ನ ಸರಿಪಡಿಸಲು ಸಮಿತಿ ನಿರ್ಮಾಣವಾಗಿರುತ್ತೆ. ಕಾಂಗ್ರೆಸ್ ನವರಿಗೆ ಬಿಜೆಪಿಯವರನ್ನ ಟೀಕೆ ಮಾಡುವ ಕೆಟ್ಟ ಅಭ್ಯಾಸ. ಕಾಂಗ್ರೆಸ್ ಗೆ ರೂಲಿಂಗ್ ಪಾರ್ಟಿ ಮಾಡಿ ರೂಢಿಯಾಗಿದೆ ಹೊರತು ಪ್ರತಿಪಕ್ಷ ಸ್ಥಾನದಲ್ಲಿನ ನಡತೆ ಅವರಿಗೆ ಗೊತ್ತಿಲ್ಲ. ಎಲ್ಲಾ ಕಡೆ ಜಾತಿ- ಧರ್ಮ ಹುಡುಕೋದೇ ಅವರ ಹಣೆಬರಹ ಎಂದು ಟೀಕಿಸಿದ್ರು.

ಕಾಂಗ್ರೆಸ್ ಓಟಿಗೋಸ್ಕರ ಧರ್ಮವನ್ನ ಉಪಯೋಗಿಸ್ತಾರೆ. ಮಕ್ಕಳಿಗೆ ಕೊಡುವ ಪಠ್ಯ ಪುಸ್ತಕ ಸರಿಯಾಗಿರಬೇಕು. ಕಸ್ತೂರಿ ರಂಗನ್ ನೇತೃತ್ವದಲ್ಲಿ ಮಾಡಿದ ರಾಷ್ಟ್ರೀಯ ಶಿಕ್ಷಣ ನೀತಿ ಸಿದ್ದರಾಮಯ್ಯ ಟೀಕೆ ಮಾಡ್ತಾರೆ. ಅವರ ಜೊತೆ ಇದ್ದಾಗ ಇವರು ಏನು ಮಾಡಿದ್ದರು ಎಂದು ಟೀಕಿಸಿದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!