ಪಿ.ಯು.ಸಿ ಪರೀಕ್ಷೆ ಮುಖ್ಯವಾದರೆ ಅಂದಿನ ರೂಲ್ಸ್ ಫಾಲೋ ಮಾಡಿ-ವಿದ್ಯಾರ್ಥಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ಶಿಕ್ಷಣ ಸಚಿವ.

3599

ಕಾರವಾರ:- ಪಿಯುಸಿ ಪರೀಕ್ಷೆಗೆ ಹಾಜುರಾಗುವ ವಿದ್ಯಾರ್ಥಿಗಳು ಹೈಕೋರ್ಟ ಏನು ಆರ್ಡರ್ ಮಾಡುತ್ತೋ ಅದನ್ನು ಪಾಲಿಸಲೇ ಬೇಕು.ಈ ಪರೀಕ್ಷೆಯಲ್ಲಿ ಆಪ್ಸೆಂಟ್ ಆದವರಿಗೆ ಮತ್ತೆ ಪ್ರತ್ತೇಕ ಎಕ್ಸಾಮ್ ಕೊಡುವುದಿಲ್ಲ. ಮುಂದೆ ಎಕ್ಸಾಮ್ ನೆಡೆದಾಗಲೇ ತೆಗೆದುಕೊಳ್ಳಬೇಕು.ಪರೀಕ್ಷೆ ಮುಖ್ಯವಾದರೆ ಅಂದಿನ ರೂಲ್ಸ್ ಫಾಲೋ ಮಾಡಬೇಕು ಎಂದು ಕಾರವಾರದಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಖಡಕ್ ಎಚ್ಚರಿಕೆ ನೀಡಿದರು. ಹಿಜಾಬ್ ವಿಷಯದಲ್ಲಿ ಸಂಘಟನೆಗಳು,ವಿಚಾರವಾದಿಗಳು ಇದರ ಹಿಂದೆ ಇದ್ದಾರೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.

ಮುಂದಿನ ಶೈಕ್ಷಣಿಕ ವರ್ಷದಲ್ಲಿ 20 ಸಾವಿರ ಶಾಲೆಯಲ್ಲಿ ಅರ್ಲಿ ಚೈಲ್ಡ್ ಎಜುಕೇಶನ್ ಪರಿಚಯ ಮಾಡುತಿದ್ದೇವೆ ಅಂದ ಅವರು ಈ ಹಿಂದೆ ಆದ
ಪಠ್ಯಗಳ ತಪ್ಪುಗಳನ್ನು ತಿದ್ದುವ ಕೆಲಸ ಮಾಡುತಿದ್ದೇವೆ,ಮಕ್ಕಳಿಗೆ ರಾಷ್ಟ್ರೀಯವಾದಿಗಳಾಗಿ ರೂಪಿಸುವ ಕೆಲಸ ಮಾಡುತ್ತೇವೆ ಎಂದರು. ಇನ್ನೊಂದು ವಾರದಲ್ಲಿ ಶಿಕ್ಷಕರ ನೇಮಕಾತಿ ನೋಟಿಫಿಕೇಷನ್ ಹೊರಡಿಸುತ್ತೇವೆ.
15 ಸಾವಿರ ಶಿಕ್ಷಕರ ನೇಮಕಾತಿ ಮಾಡಿಕೊಳ್ಳಲಾಗುವುದು.
5 ಸಾವಿರ ಕಲ್ಯಾಣ ಕರ್ನಾಟಕ ,10 ಸಾವಿರ ಕರ್ನಾಟಕ ಭಾಗಕ್ಕೆ ಅವಕಾಶ ನೀಡುತಿದ್ದೇವೆ ಎಂದರು.ಕೋವಿಡ್ ಕಾರಣದಿಂದ ಶಾಲೆಗಳನ್ನು ಬಂದ್ ಮಾಡಿದ್ದರಿಂದ ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರಿದೆ ಹೀಗಾಗಿ ಬೇಸಿಗೆ ರಜೆ ನಂತರ ಕಲಿಕಾ ಚೇತರಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದರು.

ಗೊಕರ್ಣದಲ್ಲಿ 1886 ರಲ್ಲಿ ಪ್ರಾರಂಭವಾದ ಶಾಲೆಗೆ ಭೇಟಿ ನೀಡಿದ ಸಚಿವ.

ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲೂಕಿನ ಗೋಕರ್ಣದಲ್ಲಿ 1886ರಲ್ಲಿ ಆರಂಭವಾದ
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ನಾಡುಮಾಸ್ಕೇರಿ ಗ್ರಾಮದ ಸರ್ಕಾರಿ ಪ್ರೌಢಶಾಲೆಗೆ
ಭೇಟಿ ನೀಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಜೊತೆ ಮಾತನಾಡಿದೆ. ಮಕ್ಕಳೊಂದಿಗೆ ಬೆರೆತ ಸಚಿವರು ಕೆಲವು ಸಮಯ ಕಳೆದರು.

ಸಚಿವರ ಕಾರ್ಯಕ್ರಮದಲ್ಲಿ ಪವರ್ ಕಟ್ -ಕತ್ತಲಲ್ಲೇ ದೀಪ ಬೆಳಗಿಸಿದ ಶಿಕ್ಷಣ ಸಚಿವ.

ಪದವಿಪೂರ್ವ ನೌಕರರ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನ ಹಾಗೂ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಕುರಿತು ರಾಜ್ಯಮಟ್ಟದ ಕಾರ್ಯಕ್ರಮವನ್ನು ಕಾರವಾರದ ಮಾಲಾದೇವಿ ಕ್ರೀಡಾಂಗಣದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದು ರಾಜ್ಯಾಧ್ಯಾಂತ ಶಿಕ್ಷಕರು ಈ ಕಾರ್ಯ ಕ್ರಮಕ್ಕೆ ಆಗಮಿಸಿದ್ದರು. ಶಿಕ್ಷಣ ಸಚಿವರು ಈ ಕಾರ್ಯಕ್ರಮ ಉದ್ಘಾಟನೆ ಮಾಡಬೇಕಿತ್ತು. ಆದರೇ ಕಾರ್ಯಕ್ರಮಕ್ಕೆ ಸಚಿವರು ಆಗಮಿಸುತಿದ್ದಂತೆ ರಂಗಮಂದಿರದಲ್ಲಿ ಪವರ್ ಕಟ್ ಆಗಿದೆ. ಇನ್ನು ಆಯೋಜಕರು ಸಮರ್ಪಕ ವ್ಯವಸ್ಥೆ ಸಹ ಮಾಡಿರಲಿಲ್ಲ. ಹೀಗಾಗಿ ಇಡೀ ರಂಗಮಂದಿರ ಕತ್ತಲು ಮಯವಾಗಿದ್ದರೆ ಬಿಸಲ ಬೇಗೆಗೆ ಬಂದ ಅಥಿತಿಗಳು ಹಾಗೂ ಶಿಕ್ಷಕರು ಬೆಂದುಹೋಗಿದ್ದರು. ಅರ್ಥ ಗಂಟೆಯಾದರೂ ವಿದ್ಯುತ್ ಬಾರದ ಹಿನ್ನಲೆಯಲ್ಲಿ ಕತ್ತಲಲ್ಲೇ ಸಚಿವರು ದೀಪ ಬೆಳಗಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!