BREAKING NEWS
Search

ಜಾಲಿ ಮೋಡ್ ನಲ್ಲಿ ನಟ ದಿಗಂತ್- ನೇತ್ರಾಣಿ ಯಲ್ಲಿ ಹತ್ತು ಮೀಟರ್ ಸಮುದ್ರದಾಳದಲ್ಲಿ ಸ್ಕೂಬಾ ಡೈ ಮಾಡಿದ ದಿಗಂತ್.

1286
https://netraniadventures.com/

ಕಾರವಾರ:- ರಾಜ್ಯದ ಏಕೈಕಾ ಸ್ಕೂಬಾ ಡೈ ತಾಣವಾದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ನೇತ್ರಾಣಿ ನಡುಗಡ್ಡೆಯಲ್ಲಿ ಇಂದು ಪಂಚರಂಗಿ ಖ್ಯಾತಿಯ ನಟ ದಿಗಂತ್ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಸಹಕಾರದೊಂದಿಗೆ ಅರಬ್ಬಿ ಸಮುದ್ರದಲ್ಲಿ ಸ್ಕೂಬಾ ಡೈ ಮಾಡಿದರು. ಹತ್ತು ಮೀಟರ್ ಆಳಕ್ಕೆ ತೆರಳಿ ವಿವಿಧ ಭಂಗಿಯಲ್ಲಿ ಸಮುದ್ರದಾಳದಲ್ಲಿ ಈಜಿದ ಅವರು ಸ್ಕೂಬಾ ಡೈ ಗಾಗಿ ಮಾಲ್ಡೀವ್ಸ್ ನಲ್ಲಿ ತರಬೇತಿ ಪಡೆದಿದ್ದರು.

ಹೀಗಾಗಿ ಮುರುಡೇಶ್ವರದ ನೇತ್ರಾಣಿಯ ನಡುಗಡ್ಡೆಗೆ ತೆರಳಿದ ಅವರು ಅರಬ್ಬಿ ಸಮುದ್ರದಲ್ಲಿ ಆಕ್ಸಿಜನ್ ಸಿಲೆಂಡರ್ ಹಾಕಿಕೊಂಡು ಡೈ ಮಾಡಿದರು.

ನಟ ದಿಗಂತ್ ಸ್ಕೂಬಾ ಡೈ ವಿಡಿಯೊ ನೋಡಿ.

ನಂತರ ಸಮುದ್ರದಾಳದ ಜಲಚರಗಳನ್ನು ವೀಕ್ಷಿಸಿ ಎಂಜಾಯ್ ಮಾಡಿದರು.

ಕುಟುಂಬದೊಂದಿಗೆ ಬಂದಿದ್ದ ದಿಗಂತ್
ಹಲವು ವರ್ಷದ ನಂತರ ವೀಕೆಂಡ್ ಮಸ್ತಿಗಾಗಿ ತಂದೆ ಕೃಷ್ಣಮೂರ್ತಿ ಮಂಚಾಲೆ,ತಾಯಿ ಮಲ್ಲಿಕಾ ಜೊತೆ ಐಂದ್ರಿತಾ ಸಹೋದರನೊಂದಿಗೆ ಆಗಮಿಸಿದ್ದ ಅವರು ಇದೇ ಮೊದಲಬಾರಿ ಮುರಡೇಶ್ವರದ ನೇತ್ರಾಣಿಯಲ್ಲಿ ಸ್ಕೂಬಾ ಡೈ ಮಾಡಿದರು.

ಸ್ಕೂಬಾ ಡೈವ್ ಮಾಡುವವರು ಈ ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ ಬುಕ್ ಮಾಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!