ಕಾರವಾರ :- ಕೇಂದ್ರ ನೆರೆ ಅಧ್ಯಯನ ತಂಡ ಜಿಲ್ಲೆಯ ಅತಿವೃಷ್ಟಿ ಹಾಗೂ ನೆರೆಯಿಂದ ಹಾನಿಯಾದ ಪ್ರದೇಶಕ್ಕೆ ಸೋಮವಾರ ಭೇಟಿ ನೀಡಿ ನೈಜತೆ ಕುರಿತಂತೆ ಪರಿಶೀಲನೆ ನಡೆಸಿದರು.
ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಮಂತ್ರಾಲಯದ ಮುಖ್ಯ ಅಭಿಯಂತರ ಎಸ್.ವಿ.ಜಯಕುಮಾರ ಹಾಗೂ ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರನ್ನೊಳಗೊಂಡ ಅಧ್ಯಯನ ತಂಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ, ಗುಳ್ಳಾಪುರ ಸೇತುವೆ ವಿಕ್ಷೀಸಿ, ಅಂಕೋಲಾ ತಾಲೂಕಿನ ಶಿರೂರು ಗ್ರಾಮದ ಹಾನಿಗೊಂಡ ಪ್ರದೇಶಕ್ಕೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು.
ರೈತರ ಬೇಡಿಕೆಗಳನ್ನು ಕೇಂದ್ರ ತಂಡದ ಭಾರತ ಸರ್ಕಾರದ ಹೆದ್ದಾರಿ ಹಾಗೂ ರಸ್ತೆ ಸಾರಿಗೆ ಮಂತ್ರಾಲಯದ ಮುಖ್ಯ ಅಭಿಯಂತರರಾದ ಎಸ್.ವಿ.ಜಯಕುಮಾರ, ಗ್ರಾಮೀಣ ಅಭಿವೃದ್ಧಿ ಮಂತ್ರಾಲಯದ ಅಪರ ಕಾರ್ಯದರ್ಶಿ ಕೈಲಾಶ್ ಸಂಖ್ಲಾ ಹಾಗೂ ರಾಜ್ಯ ಸರ್ಕಾರದ ಲೈಸನಿಂಗ್ ಅಧಿಕಾರಿ ಶ್ರೀನಿವಾಸ ರೆಡ್ಡಿ ಅವರು ರೈತರ ಕುಂದುಕೊರತೆಗಳನ್ನು ಆಲಿಸಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿನಲ್ ಎಂ.ಪಿ ರವರು ಕೇಂದ್ರ ತಂಡಕ್ಕೆ ಸ್ಥಳಗಳಿಗೆ ಭೇಟಿ ನೀಡುವ ಮುನ್ನ ಯಲ್ಲಾಪುರ ಅಡಿಕೆ ಭವನದಲ್ಲಿ ಅತಿವೃಷ್ಟಿಯಿಂದ ಉಂಟಾದ ಪ್ರವಾಹ ಹಾಗೂ ಹಾನಿಯ ಮಾಹಿತಿಯನ್ನು ಪವರ್ ಪಾಯಿಂಟ್ ಪ್ರಜೆಂಟೇಷನ್ ಮೂಲಕ ಮನವರಿಕೆ ಮಾಡಿಕೊಟ್ಟರು.
ಜುಲೈ ತಿಂಗಳಲ್ಲಿ ವಿಶೇಷವಾಗಿ 22 ರಿಂದ 25ರವರೆಗೆ ಸುರಿದ ಭಾರಿ ಮಳೆಯಿಂದಾಗಿ ಮನೆಹಾನಿ, ಬೆಳೆಹಾನಿ ಹಾಗೂ ಮೂಲಸೌಕರ್ಯಗಳ ಹಾನಿಗೆ ಸಂಬಂಧಿಸಿದಂತೆ ₹ 827.28 ಕೋಟಿ ನಷ್ಟವಾಗಿದ್ದು ಎನ್.ಡಿ.ಆರ್.ಎಫ್. ಮಾರ್ಗಸೂಚಿಯಂತೆ ₹863.57 ಕೋಟಿ ಪರಿಹಾರದ ಬೇಡಿಕೆಯನ್ನು ಜಿಲ್ಲಾಡಳಿತದಿಂದ ಸಲ್ಲಿಸಲಾಯಿತು.
ಪ್ರವಾಹದಿಂದ 155 ಹಳ್ಳಿಯ 21708 ಜನರು ಸಂಕಷ್ಟದಲ್ಲಿದ್ದಾರೆ, 7 ಜನರು, 163 ದೊಡ್ಡ ಪ್ರಾಣಿಗಳು 16 ಚಿಕ್ಕ ಪ್ರಾಣಿಗಳು ಸಾವನ್ನಪ್ಪಿದ್ದು, 6 ಮನೆಗಳು ಸಂಪೂರ್ಣ ನಾಶವಾಗಿದ್ದು, 274 ಮನೆಗಳು ಅತೀ ತೀವ್ರವಾಗಿ, 295 ಮನೆಗಳು ತೀವ್ರ ಹಾಗೂ, 1305 ಮನೆಗಳು ಭಾಗಶಃ ಹಾನಿಗೊಂಡಿವೆ.
ಭೂಕುಸಿದಿಂದ 32.19 ಹೆಕ್ಟೇರ್ ಭೂ ಪ್ರದೇಶ ಹಾನಿಯಾಗಿದ್ದು, 925.2 ಹೆಕ್ಟೇರ್ ಕೃಷಿ ಬೆಳೆಹಾನಿ, 290.63 ಹೆಕ್ಟೇರ್ ತೋಟಗಾರಿಕಾ ಬೆಳೆ, ₹12922 ಲಕ್ಷ ಮೌಲ್ಯದ ಸಣ್ಣ ಹಾನಿ, ₹49352.64 ಲಕ್ಷ ರೂ ಮೌಲ್ಯದ ರಸ್ತೆ, ₹17683.25 ಲಕ್ಷ ರೂ ಮೌಲ್ಯದ ಸೇತುವೆ, 996.3 ಲಕ್ಷ ರೂ ಮೌಲ್ಯದ ಸರ್ಕಾರಿ ಕಟ್ಟಡಗಳು, ಹಾಗೂ ವಿದ್ಯುತ್ ನಿಗಮಕ್ಕೆ ₹1049.56 ಲಕ್ಷ ರೂ ಸೇರಿದಂತೆ ₹82728.45 ನಷ್ಟವಾಗಿರುವ ಮಾಹಿತಿ ನೀಡಲಾಯಿತು.
ಇನ್ನು 200 ಪ್ರಾಥಮಿಕ ಶಾಲಾ ಕಟ್ಟಡಗಳ ಹಾನಿ ಮೊತ್ತ ₹611.10 ಲಕ್ಷ, 77 ಅಂಗನವಾಡಿ ಸೇರಿ ₹184.75 ಲಕ್ಷ ಹಾನಿಯಾಗಿದ್ದು, ಸಂಘ ಸಂಸ್ಥೆಗಳ 24 ಕಟ್ಟಡಗಳು ಹಾನಿ ಮೊತ್ತ ₹150.95 ಲಕ್ಷ, 13 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಾನಿ ಮೊತ್ತ ₹49.50 ಲಕ್ಷ ಹಾಗೂ 184 ಸೇತುವೆಗಳು ಹಾನಿಗೊಳಗಾಗಿದ್ದು ₹14420.00 ಲಕ್ಷ ನಷ್ಟವಾಗಿದೆ. ಮೀನುಗಾರರ 94 ಸಂಪೂರ್ಣ ಬೋಟ್‍ಗಳು, 46 ದೊಡ್ಡ ಬಲೆಗಳು ಸೇರಿದಂತೆ ₹30.190 ಒಟ್ಟು ಲಕ್ಷ ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಮಾಹಿತಿಯನ್ನು ಕೇಂದ್ರ ಅಧ್ಯಯನ ತಂಡಕ್ಕೆ ನೀಡಿದರು.
ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ₹1 ಲಕ್ಷ ಹಾಗೂ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ತಲಾ ₹4 ಲಕ್ಷ ರೂ ನಂತೆ ಮೃತ ಪಟ್ಟಯ 7 ಜನರ ಕುಟುಂಬದವರಿಗೆ ಹಣ ನೀಡಲಾಗಿದೆ. ಹಾಗೂ 8853 ಮನೆಗಳಿಗೆ ನೀರು ನುಗ್ಗಿದ್ದು, 8778 ಕುಟುಂಬಗಳಿಗೆ ತಲಾ ಹತ್ತು ಸಾವಿರದಂತೆ ಒಟ್ಟು ₹877.8 ಮೊತ್ತದ ಬಟ್ಟೆ ಮತ್ತು ಪಾತ್ರೆಗಳು ವಿತರಿಸಲಾಗಿದೆ.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಿಯಾಂಗಾ ಎಂ, ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.