ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದುವರೆದ ಅಬ್ಬರದ ಮಳೆ- 166 ಗ್ರಾಮಗಳು ಪ್ರಾವಾಹ ಸಂಭವಿಸಬಹಿದಾದ ಗ್ರಾಮಗಳು- ಮುಲೈ ಮಗಿಲನ್

438

ಕಾರವಾರ :- ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ತತ್ತರಿಸಿತ್ತು. ಕೋಟಿ ನಷ್ಟತಂದಿದ್ದ ಚಂಡಮಾರುತದಿಂದ ಜನ ಚೇತರಿಸಿಕೊಳ್ಳುತ್ತಿರುವಾಗಲೇ ಮುಂಗಾರಿನ ಮಳೆಯ ಅಬ್ಬರ ಸಹ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಕಳೆದ ಎರೆಡು ವರ್ಷದಿಂದ ಮಳೆಯ ಆರ್ಭಟ ಹಲವು ಹಳ್ಳಿಗಳನ್ನ ಸಂಪೂರ್ಣ ನಾಶಮಾಡಿತ್ತು. ಆದರೇ ಇದೀಗ ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಂಡಿದ್ದು ಮಳೆಯ ಆರ್ಭಟಕ್ಕೆ 166 ಗ್ರಾಮಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ. ಇಂದು ಮಾಧ್ಯಮದೊಂದಿಗೆ ಮಾತನಾಡಿದ ಅವರು 234 ಕಾಳಜಿ ಕೇಂದ್ರ ವನ್ನು ಗುರುತಿಸಲಾಗಿದೆ.16,826 ಜನರಿಗೆ ಆಶ್ರಯ ಕಲ್ಪಿಸಬಹುದಾಗಿದ್ದು ಸಂಪೂರ್ಣ ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನು ಕಾಳಿನದಿ,ಶರಾವತಿ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು ,ಜನರನ್ನು ತೀರ ಪ್ರದೇಶದಿಂದ ಬೇರೆಡೆ ಸ್ಥಳಾಂಯರಿಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.

ಜಲಾಶಯದಲ್ಲಿ ನಿರಂತರ ನೀರು ಬಿಡುಗಡೆ.

ಕಳೆದ ಎರಡು ದಿನದಿಂದ ಬಿಡುವುಕೊಟ್ಟಿದ್ದ ಮಳೆ ಇಂದು ಮಧ್ಯಾನ ದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಪ್ರಾರಂಭವಾಗಿದೆ. ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಬಿಸಿಲು -ಮಳೆಯ ಆಟ ಪ್ರಾರಂಭವಾಗಿದ್ದು ,ಮಲೆನಾಡು ಭಾಗದಲ್ಲೂ ಸಹ ಅಲ್ಲಲ್ಲಿ ಅಬ್ಬರದ ಮಳೆ ಸುರಿದಿದೆ. ಮಳೆ ಪುನಹಾ ಪ್ರಾರಂಭವಾಗಿದ್ದರಿಂದ ಜಿಲ್ಲೆಯ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಕದ್ರಾ ಜಲಾಶಯ ಗರಿಷ್ಟ 34.50ಮೀ ಕನಿಷ್ಟ 30.10 ಮೀ ಆಗಿದ್ದು ಒಳ ಹರಿವು 20988.00 ಕ್ಯೂಸೆಕ್ಸ್ ಇದ್ದು ಹೊರ ಹರಿವು 21588.0 ಕ್ಯೂಸೆಕ್ಸ್ ಇದೆ. ಇನ್ನು ಸೂಪಾ ಜಲಾಶಯದಲ್ಲಿ ಗರಿಷ್ಟ 564.00 ಮೀ, ಕನಿಷ್ಟ 539.16 ಮೀ, ಒಳ ಹರಿವು 5115.454 ಕ್ಯೂಸೆಕ್ಸ್ ,
ಹೊರಹರಿವು 5115.454 ಕ್ಯೂಸೆಕ್ಸ್ ನೀರು ಹೊರಬಿಡಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!