ಕಾರವಾರ:- ಸಮುದ್ರದಲ್ಲಿ ಆಟವಾಡುತಿದ್ದ ಪ್ರವಾಸಿಗರಲ್ಲಿ ಮೂರು ಜನ ಅಲೆಗೆ ಸಿಲುಕಿ ಸಾವು ಕಂಡು ಇಬ್ಬರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.
ಬೆಂಗಳೂರಿನಿಂದ ಇಂದು 16 ಜನ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ಊಟ ಮಾಡಿ ದೇವರ ದರ್ಶನ ಪಡೆಯಲು ಹೊರಟವರಲ್ಲಿ ತಿಪ್ಪೇಶ್ ಎಂಬ ಯುವಕ ಮೋಜಿಗಾಗಿ ಸಮುದ್ರಕ್ಕಿಳಿದಿದ್ದ.

ಈವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳದಿದೆ. ಈ ವೇಳೆ ಇದನ್ನು ಗಮನಿಸಿದ ಸುಮಾ ಎಂಬ ಯುವತಿ ಆತನ ರಕ್ಷಣೆಗಾಗಿ ದಾವಿಸಿದ್ದಾಳೆ. ಆದ್ರೆ ಆಕೆಯೂ ಅಲೆಯ ಹೊಡೆತಕ್ಕೆ ನೀರುಪಾಲಾಗಿದ್ದು ಇದನ್ನು ಗಮನಿಸಿದ ರವಿ ಎಂಬಾತ ಹಾಗೂ ಈತನೊಂದಿಗಿದ್ದ ರತ್ನಮ್ಮ ,ಪವಿತ್ರ ದಾವಿಸಿದ್ದಾರೆ ದುರಾದೃಷ್ಟವಶಾತ್ ರವಿ ಕೂಡ ನೀರು ಪಾಲಾಗಿದ್ದು ಪವಿತ್ರ ಹಾಗೂ ರತ್ನಮ್ಮ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ.ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.