ಗೋಕರ್ಣ ಕಡಲಲ್ಲಿ ಮುಳುಗುತಿದ್ದ ಪ್ರವಾಸಿಗನ ರಕ್ಷಣೆ

651

ಕಾರವಾರ :- ಪ್ರವಾಸಕ್ಕೆಂದು ಬಂದಿದ್ದ ಬೆಂಗಳೂರು ಮೂಲದ ಪ್ರವಾಸಿಗನೋರ್ವ ಕಡಲಲ್ಲಿ ಈಜುತ್ತಿರುವಾಗ ಅಲೆಗೆ ಸಿಲುಕಿ ಸಾವು ಬದುಕಿನ ನಡುವೆ ಹೋರಾಡುತಿದ್ದವನನ್ನು ಲೈಫ್ ಗಾರ್ಡಗಳು ರಕ್ಷಿಸಿದ ಘಟನೆ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ಮುಖ್ಯ ಕಡಲತೀರದಲ್ಲಿ ಇಂದು ಸಂಜೆ ನಡೆದಿದೆ.

ಬೆಂಗಳೂರಿನ ಶ್ರೇಯಸ್ ಅರಸ್ (24) ರಕ್ಷಣೆಗೊಳಗಾದವನಾಗಿದ್ದು ಬೆಂಗಳೂರಿನಿಂದ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣಕ್ಕೆ ನಾಲ್ಕು ಜನರೊಂದಿಗೆ ಪ್ರವಾಸಕ್ಕೆ ಇಂದು ಬಂದಿದ್ದರು. ಈ ವೇಳೆ ಶ್ರೇಯಸ್ ಸಮುದ್ರದಲ್ಲಿ ಈಜುವಾಗ ಅಲೆಗೆ ಸಿಲುಕಿ ನಿತ್ರಾಣಗೊಂಡಿದ್ದ. ಇದನ್ನು ಗಮನಿಸಿದ ಲೈಫ್ ಗಾರ್ಡಗಳಾದ ನಾಗೇಂದ್ರ ಕುರ್ಲೆ ಹಾಗೂ ಪ್ರವಾಸಿ ಮಿತ್ರ ಸಿಬ್ಬಂದಿ ರಗುವೀರ ನಾಯ್ಕರವರು ರಕ್ಷಣೆ ಮಾಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!