ಕುಮಟಾ,ಭಟ್ಕಳ| ಸಮುದ್ರ ಪಾಲಾಗುತಿದ್ದ ನಾಲ್ಕು ಜನರ ರಕ್ಷಣೆ

95

ಕಾರವಾರ :-ಪ್ರವಾಸಕ್ಕೆ ಬಂದು ಸಮುದ್ರಪಾಲಾಗಿದ್ದ ಪ್ರತ್ತೇಕ ಘಟನೆಯಲ್ಲಿ ನಾಲ್ಕು ಜನರನ್ನ ಲೈಫ್ ಗಾರ್ಡ ಸಿಬ್ಬಂದಿ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಹಾಗೂ ಕುಮಟಾ ತಾಲೂಕಿನ ಗೋಕರ್ಣ ದ ಮುಖ್ಯ ಕಡಲತೀರದಲ್ಲಿ ನಡೆದಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ಮೂಲದ ಮಾರುತಿ (20) ಚಂದನ(16), ಮಧುಸೂದನ (11) ಎಂಬುವವರ ರಕ್ಷಣೆಗೊಳಗಾದವರಾಗಿದ್ದು ಇಂದು ಕುಟುಂಬದೊಂದಿಗೆ ಗೋಕರ್ಣಕ್ಕೆ ಆಗಮಿಸಿದ್ದ ವೇಳೆ ಸಮುದ್ರದಲ್ಲಿ ಈಜಾಡುವಾಗ ಸುಳಿಗೆ ಸಿಲುಕಿ ಸಮುದ್ರದಲ್ಲಿ ಕೊಚ್ಚಿ ಹೋಗಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಲೈಫ್ ಗಾರ್ಡ್ ಸಿಬ್ಬಂದಿಗಳಾದ ಮೋಹನ್ ಅಂಬಿಗ, ಶಿವಪ್ರಸಾದ ಅಂಬಿಗ, ಬೀಚ್ ಸುಪ್ರವೈಸರ್ ರವಿ ನಾಯ್ಕ್, ಪ್ರವಾಸಿ ಮಿತ್ರ ರಘುವೀರ ನಾಯ್ಕ ಎಂಬುವವರು ರಕ್ಷಣೆ ಮಾಡಿದ್ದಾರೆ.

ಇನ್ನು ಮುರುಡೇಶ್ವರದಲ್ಲಿ ಕೋಲಾರದಿಂದ 8 ಜನರೊಂದಿಗೆ ಪ್ರವಾಸಕ್ಕೆ ಬಂದಿದ್ದ ಕೋಲಾರದ ರವೀಂದ್ರ (19) ಈತನು ಕಡಲ ಅಲೆಗೆ ಸಿಲುಕಿದ್ದಾಗ ಲೈಫ್ ಗಾರ್ಡ ಗಳಾದ ಪ್ರವೀಣ, ಹನುಮಂತ, ವಿಘ್ನೇಶ್, ಶೇಖರ್ ಎಂಬುವವರು ರಕ್ಷಣೆ ಮಾಡಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!