ಹಳಿಯಾಳ ತಾಲ್ಲೂಕಿನ ಕರ್ಲಕಟ್ಟಾ ಗ್ರಾಮದಲ್ಲಿ ಸೋಮವಾರ ಟ್ರ್ಯಾಕ್ಟರ್ ಟ್ರೇಲರ್‌ನಿಂದ ಬಿದ್ದ ಕಬ್ಬಿನ ರಾಶಿಯ ಕೆಳಗೆ ಸಿಲುಕಿ ಐದು ವರ್ಷದ ಬಾಲಕಿ ಮೃತಪಟ್ಟಿದ್ದಾಳೆ.

ಮೃತಳನ್ನು ಕೊಪ್ಪಳ ಜಿಲ್ಲೆ ಹಿರೇಬಗನಾಳ ಗ್ರಾಮದ ಮೇಘನಾ ಶಂಕರ ಲಮಾಣಿ ಎಂದು ಗುರುತಿಸಲಾಗಿದೆ. ಆಕೆಯ ಪಾಲಕರು ಕಬ್ಬು ಕಟಾವಿಗೆಂದು ಹಳಿಯಾಳಕ್ಕೆ ಬಂದಿದ್ದರು.
ಟ್ರ್ಯಾಕ್ಟರ್ ಚಾಲಕ ವಿಠ್ಠಲ ಪರಶುರಾಮ ವಡ್ಡರ ಆರೋಪಿಯಾಗಿದ್ದು, ನೋಂದಣಿ ಸಂಖ್ಯೆ ಇಲ್ಲದ ಟ್ರೇಲರ್‌ನಲ್ಲಿ ಹೊಲವೊಂದರಿಂದ ಕಬ್ಬು ಸಾಗಿಸುತ್ತಿದ್ದರು. ತಿರುವಿನಲ್ಲಿ ಟ್ರೇಲರ್ ಬಲಬದಿಗೆ ವಾಲಿಕೊಂಡು, ಅಲ್ಲಿಯೇ ಆಟವಾಡುತ್ತಿದ್ದ ಮೇಘನಾಳ ಮೇಲೆ ಕಬ್ಬಿನ ರಾಶಿ ಬಿದ್ದಿತು. ಅದರಿಂದ ಹೊರಬರಲಾಗದೇ ಮೃತಪಟ್ಟಳು ಎಂದು ಹಳಿಯಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ