ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಅಬ್ಬರದ ಮಳೆಗೆ ಶಿರಸಿ ತಾಲೂಕಿನ ಜಾಜಿ ಗುಡ್ಡದಲ್ಲಿ ಭೂ ಕುಸಿತ ಉಂಟಾಗಿದ್ದು ಈ ಗ್ರಾಮದ ಏಳುಮನೆಗಳ ಜನರನ್ನು ಸ್ಥಳಾಂತರಿಸಲು ಶಿರಸಿ ತಹಶಿಲ್ದಾರ್ ಎಂ.ಆರ್ .ಕುಲಕರ್ಣಿ ಆದೇಶ ನೀಡಿದ್ದಾರೆ.
ಇನ್ನು ಶಿರಸಿಯ ಹುಣಸೆ ಕೊಪ್ಪದಲ್ಲೂ ಭೂ ಕುಸಿತದಿಂದ ನಿನ್ನೆದಿನ ಮಂಜುನಾಥ್ ಗಣಪ ಗೌಡ ಎಂಬುವವರು ಮೃತಪಟ್ಟಿದ್ದರು.
ಜಿಲ್ಲೆಯ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಅಬ್ಬರದ ಮಳೆ ಮುಂದುವರೆದಿದ್ದು ಈ ತಿಂಗಳ 18 ರ ವರೆಗೂ ಜಿಲ್ಲೆಯಾಧ್ಯಾಂತ ರೆಡ್ ಅಲರ್ಟ ಘೋಷಣೆ ಮಾಡಲಾಗಿದೆ. ಹವಾಮಾನ ಇಲಾಖೆ ಮಾಹಿತಿಯಂತೆ ಜಿಲ್ಲೆಯಲ್ಲಿ ಅಬ್ಬರದ ಮಳೆ ಇನ್ನೂ ಒಂದು ವಾರಗಳ ಕಾಲ ಮುಂದುವರೆಯುವ ಸೂಚನೆ ನೀಡಿದ್ದಾರೆ.