ಉತ್ತರ ಕನ್ನಡ- ಹಿಜಾಬ್ ಹಾಕಿದ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶಕ್ಕೆ ನಿರ್ಬಂಧ ಇಡೀ ದಿನ ಆಗಿದ್ದೇನು?

3585

ಕಾರವಾರ :- ಹಿಜಾಬ್ ಮತ್ತು ಕೇಸರಿ ಶಾಲಿನ ವಿವಾದ ತಾರಕಕ್ಕೆ ಏರುತ್ತಲೇ ಇದೆ. ಕೋರ್ಟ ನ ಮಧ್ಯಂತರ ತೀರ್ಪಿನ ನಂತರ ಇದೀಗ ಕಾಲೇಜುಗಳು ಪ್ರಾರಂಭವಾಗಿದ್ದರೂ ಧರ್ಮಕ್ಕಿಂತ ಶಿಕ್ಷಣ ದೊಡ್ಡದಲ್ಲ ಎನ್ನುವಂತೆ ವಿದ್ಯಾರ್ಥಿಗಳು ನಡೆದುಕೊಳ್ಳುತಿದ್ದಾರೆ.
ಇಂದು ಉತ್ತರ ಕನ್ನಡ ಜಿಲ್ಲೆಯಲ್ಲೂ ಸಹ ಹಿಜಾಬ್ ಸದ್ದು ಮಾಡಿದೆ.

ಜಿಲ್ಲೆಯ ಕಾರವಾರದ ದಿವೇಕರ್ ಕಾಲೇಜು, ಸರ್ಕಾರಿ ಪದವಿಪೂರ್ವ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದರು.

ಕಾರವಾರದ ಮಾಲಾದೇವಿ ಕ್ರಿಡಾಂಗಣದ ಬಳಿ ಇರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 10 ಜನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಪ್ರವೇಶಿಸಿದ್ದರು. ಕಾಲೇಜಿನ ಉಪನ್ಯಾಸಕರು ಕೋರ್ಟ ನ ಆದೇಶವನ್ನು ತಿಳಿಸಿ ಬುರ್ಕಾ ಹಾಗೂ ಹಿಜಾಬ್ ತಡಗೆದು ಪ್ರವೇಶಿಸುವಂತೆ ತಿಳಿಸಿದ್ದರು.ಆದರೇ ಕೆಲವರು ಇದಕ್ಕೆ ಒಪ್ಪದಿದ್ದಾಗ ಕಾಲೇಜು ಪ್ರವೇಶ ನಿರಾಕರಿಸಲಾಯಿತು. ವಿದ್ಯಾರ್ಥಿಗಳಿಗೆ ಆನ್ ಲೈನ್ ತರಗತಿ ತೆಗೆದುಕೊಳ್ಳುವಂತೆ ಸೂಚಿಸಿ ಮರಳಿ ಕಳುಹಿಸಲಾಯಿತು.

ಇನ್ನು ದಿವೇಕರ್ ಕಾಲೇಜಿನಲ್ಲಿ ಎಂಟು ಜನ ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಕಾಲೇಜು ಆಡಳಿತ ಅವರಿಗೆ ಮೊದಲು ಪ್ರವೇಶ ನೀಡಿದ್ದರಾದರೂ ನಂತರ ಅವರನ್ನು ಕಾಲೇಜಿನಿಂದ ತೆರಳುವಂತೆ ಸೂಚಿಸಲಾಯಿತು.

ಇನ್ನು ಶಿರಸಿಯ ಎಂ.ಇ.ಎಸ್. ಕಾಲೇಜಿನಲ್ಲೂ ಸಹ 15 ವಿದ್ಯಾರ್ಥಿನಿಯರು ಬುರ್ಕಾ ಹಾಗೂ ಹಿಜಾಬ್ ಧರಿಸಿ ಬಂದಿದ್ದರು. ಅವರನ್ನು ಕಾಲೇಜಿನಿಂದ ಹೊರಕ್ಕೆ ಕಳುಹಿಸಿದರೂ ಕಾಲೇಜಿನ ಮುಂಭಾಗದಲ್ಲಿ ನಿಂತು ಹಿಜಾಬ್ ಹಾಕುವುದಾಗಿ ತಿಳಿಸಿದ್ದಾರೆ. ಇನ್ನು ಮೂರು ವಿದ್ಯಾರ್ಥಿನಿಯರು ಹಿಜಾಬ್ ತೆಗೆದು ಕಾಲೇಜಿಗೆ ಪ್ರವೇಶಿಸಿದರು. ಟಿಪ್ಪು ನಗರದ ಸರ್ಕಾರಿ ಡಿಗ್ರಿ ಕಾಲೇಜಿನ 10 ವಿದ್ಯಾರ್ಥಿಗಳು,ಪ್ರೋಗ್ರೆಸಿವ್ ಕಾಲೇಜಿನ ಮೂರು ವಿದ್ಯಾರ್ಥಿನಿಯರು ಹಿಜಾಬ್ ತೆಗೆಯಲು ನಿರಾಕರಿಸಿ ಮನೆಗೆ ತೆರಳಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!