BREAKING NEWS
Search

ಮಿನುಗಾರರ ಮನವಿ ಸ್ವೀಕರಿಸಲು ಬಾರದ ಸಚಿವ:- ತಂದ ಮನವಿ ಪತ್ರ,ಹೂವುಗಳನ್ನು ಸಮುದ್ರಕ್ಕೆ ಅರ್ಪಿಸಿ ಮೀನುಗಾರರಿಂದ ವಿನೂತನ ಪ್ರತಿಭಟನೆ.

2214

ಕಾರವಾರ :-ಮೀನುಗಾರರ ಸಮಸ್ಯೆ ಆಲಿಸಲು ಬಾರದೇ ಇದ್ದುದರಿಂದ ಮೀನುಗಾರರು ಸಚಿವರಿಗೆ ನೀಡಬೇಕಿದ್ದ ಮನವಿ ಪತ್ರವನ್ನು ಸಮುದ್ರಕ್ಕೆ ಪೂಜೆ ಸಲ್ಲಿಸಿ ,ಸಮುದ್ರಕ್ಕೆ ಮನವಿ ಪತ್ರವನ್ನು ಬಿಡುವ ಮೂಲಕ ಹೊನ್ನಾವರದ ಕಾಸರಕೋಡು ಬಂದರಿನಲ್ಲಿ ವಿನೂತನವಾಗಿ ಮೀನುಗಾರರು ಪ್ರತಿಭಟನೆ ಮಾಡಿದರು.

ಇಂದು ಹೊನ್ನಾವರದಲ್ಲಿ ಮೀನುಗಾರಿಕಾ ಸಚಿವ ಎಸ್.ಅಂಗಾರ ರವರು ಭೇಟಿ ನೀಡಿದ್ದರು. ಈ ಹಿನ್ನಲ್ಲೆಯಲ್ಲಿ ಕಾಸರಗೋಡು ಬಂದರಿನಲ್ಲಿ ಖಾಸಗಿ ವಾಣಿಜ್ಯ ಬಂದರು ನಿರ್ಮಿಸದಂತೆ ಮೀನುಗಾರರು ಸಚಿವರಿಗೆ ಮನವಿ ಸಲ್ಲಿಸಲು ಹಾಗೂ ಸ್ವಾಗತಿಸಲು ಸಿದ್ದತೆ ಮಾಡಿಕೊಂಡಿದ್ದರು.

ಆದರೇ ವಿವಾದಿತ ಪ್ರದೇಶವೆಂದು ಸಚಿವರು ತಮ್ಮ ಬಂದರು ಬೇಟಿಯನ್ನು ರದ್ದುಗೊಳಿಸಿ ಉಡುಪಿಗೆ ಪ್ರಯಾಣ ಬೆಳಸಿದರು.

ತಮ್ಮ ಸಮಸ್ಯೆ ಆಲಿಸದಿದ್ದುದಕ್ಕೆ ನೊಂದ ಮೀನುಗಾರರು ಸಚಿವರಿಗೆ ಸಲ್ಲಿಸಬೇಕಿದ್ದ ಮನವಿ ಪತ್ರ ಹಾಗೂ ಸ್ವಾಗತಿಸಲು ತಂದಿದ್ದ ಹೂವಿನ ಪುಷ್ಪಗುಚ್ವವನ್ನು ಸಮುದ್ರಕ್ಕೆ ಪೂಜೆ ಸಲ್ಲಿಸಿ ಬಿಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಮನವಿ ಪತ್ರದಲ್ಲಿ ಏನಿತ್ತು? ಸಚಿವರು ಬರದೇ ಇರುವುದಕ್ಕೆ ಕಾರಣ ಏನು?

ಮೀನುಗಾರರಿಗೆ ಸರ್ಕಾರ ಘೋಷಣೆಮಾಡಿದ ಪರಿಹಾರದಲ್ಲಿ ಮೀನುಗಾರಿಕಾ ವಿವಿಧ ಅವಲಂಭಿತ ಕಾರ್ಮಿಕರಿಗೆ ಆದೇಶದಲ್ಲಿ ಸೂಚಿಸಿಲ್ಲ. ಪರಿಹಾರ ಪ್ಯಾಕೇಜ್ ನಲ್ಲಿ ಗೊಂದಲ ಇದ್ದು ಎಲ್ಲಾ ಮೀನುಗಾರಿಕಾ ಅವಲಂಭಿತ ಕಾರ್ಮಿಕರಿಗೂ ಪರಿಹಾರ ನೀಡಬೇಕು ಎಂಬ ಮನವಿಯನ್ನು ಪತ್ರದಲ್ಲಿ ಉಲ್ಲೇಖ ಮಾಡಲಾಗಿತ್ತು. ಇನ್ನು ಬಂದರಿನಲ್ಲಿ ಮೀನುಗಾರಿಕಾ ಮಹಿಳೆಯರಿಗೆ ಸಮಸ್ಯೆ ಒಣಮೀನು ಒಣಗಿಸಲು ಸ್ಥಳಾವಕಾಶದ ಸಮಸ್ಯೆ, ಕುರಿತು ಮನವಿ ಪತ್ರವನ್ನ ಹೊನ್ನಾವರ ಮೀನುಗಾರರ ಸೊಸೈಟಿ, ಮೀನುಗಾರ ಕಾರ್ಮಿಕರ ಸಂಘ, ಹಸಿಮೀನು ವ್ಯಾಪಾರಿಗಳ ಸಂಘ,ಪರ್ಷಿಯನ್ ಬೋಟ್ ಯೂನಿಯನ್ ಗಳು ಸಲ್ಲಿಸಿ ತಮ್ಮ ಸಮಸ್ಯೆ ಬಗ್ಗೆ ಸಚಿವರ ಗಮನ ತರುವುದರಲ್ಲಿ ಇದ್ದರು. ಆದರೇ ಸಚಿವರು ಕೊನೆ ಕ್ಷಣದಲ್ಲಿ ಇಲ್ಲಿಗೆ ಬಾರದೇ ನೇರ ಉಡುಪಿ ಕಡೆ ಪ್ರಯಾಣಿಸಿದ್ದಾರೆ.

ವಿವಾಧ ಮತ್ತು ಗಲಾಟೆ?

ಹೊನ್ನಾವರದಲ್ಲಿ ಕಾಸರಕೋಡು ಬಂದರು ವಿವಾದ ವರ್ಷಗಳಿಂದ ನಡೆಯುತ್ತಿದೆ. ಬಂದರಿ ಬಳಿಯಲ್ಲಿಯೇ ಹೊನ್ನಾವರ ಪೋರ್ಟ ಕಂಪನಿ ಪ್ರವೇಟ್ ಲಿಮಿಟೆಡ್ ಎಂಬ ಕಂಪನಿ ಖಾಸಗಿ ವಾಣಿಜ್ಯ ಬಂದರು ನಿರ್ಮಾಣ ಮಾಡುತ್ತಿದೆ. ಇದಕ್ಕೆ ಮೀನುಗಾರರು ತೀವ್ರ ವಿರೋಧ ವ್ಯಕ್ತವಾಗಿದ್ದು ಈ ವಿಷಯ ಕೋರ್ಟ ನಲ್ಲಿದೆ. ಈ ಕುರಿತು ಸಚಿವರಿಗೆ ಮೀನುಗಾರರು ಮನವಿ ಪತ್ರ ಸಲ್ಲಿಸುತ್ತಾರೆ ಹಾಗೂ ಗಲಾಟೆ ಮಾಡುತ್ತಾರೆ ಎಂಬ ಸಂದೇಶವನ್ನು ಸಚಿವರಿಗೆ ಅವರ ಆಪ್ತ ಮೂಲಗಳು ತಪ್ಪಾಗಿ ಮಾಹಿತಿ ನೀಡಿದೆ. ಹೀಗಾಗಿ ಮೊದಲೇ ನಿರ್ಧಾರವಾಗಿದ್ದ ಕಾಸರಕೋಡು ಬಂದರು ಭೇಟಿಯನ್ನು ಗಲಾಟೆಯಾಗಬಹುದು ಎಂಬ ನೆಪದಲ್ಲಿ ಸಚಿವರು ಕೊನೆ ಕ್ಷಣದಲ್ಲಿ ಮೊಡಕುಗೊಳಿಸಿದ್ದಾರೆ ಎಂಬ ಮಾಹಿತಿ ಅವರ ಆಪ್ತ ಮೂಲದಿಂದ ತಿಳಿದುಬಂದಿದೆ.

ಆದರೇ ಇದೇ ಮೊದಲಬಾರಿ ಈ ಭಾಗದಲ್ಲಿ ಮೀನುಗಾರರ ಸಮಸ್ಯೆ ಆಲಿಸಲು ಹಾಗೂ ಅಭಿವೃದ್ಧಿ ಕಾರ್ಯ ವೀಕ್ಷಿಸಲು ಬಂದ ಸಚಿವರು ಹೀಗ ಏಕಾಏಕು ಮೀನುಗಾರರ ಸಮಸ್ಯೆ ಆಲಿಸದೇ ,ಅತೀ ಅವಷ್ಯ ಕಾರ್ಯ ಇಲ್ಲದಿದ್ದರೂ ಕಾರ್ಯಕ್ರಮವನ್ನೇ ಮೊಟಕು ಗೊಳಸಿ ತೆರಳಿದ್ದು ಮೀನುಗಾರರಲ್ಲಿ ಬೇಸರ ಮೂಡಿಸದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!