ಕಾರವಾರ :- ಮೊದಲ ಅಲೆಯಲ್ಲಿ ಕರೋನಾ ಸೋಂಕಿನ್ನ ತಡೆಯುವಲ್ಲಿ ಒಂದು ಹಂತದಲ್ಲಿ ಎಶಸ್ವಿಯಾಗಿದ್ದ ಜಿಲ್ಲೆ ಇದೀಗ ರಾಜ್ಯದಲ್ಲೇ ಸೋಂಕಿನ ಪ್ರಮಾಣ ಏರಿಕೆಯಲ್ಲಿ ಮೊದಲ ಸ್ಥಾನದಲ್ಲಿದೆ.
ಉತ್ತರ ಕನ್ನಡ ಜಿಲ್ಲೆ- 43.02% ಸೋಂಕಿತ ಶೇಕಡ ದತ್ತಾಂಶ ಹೊಂದಿದೆ.
ಯಾವ ಜಿಲ್ಲೆ ಎಷ್ಟು ಪ್ರಮಾಣ ಕೆಳಗಿನ ಕೋಷ್ಟಕದಲ್ಲಿ ನೀಡಿದೆ:-

ದಿನಾಂಕ :- 13-05-2021 ರ ದತ್ತಾಂಶ ದಂತೆ
ಜಿಲ್ಲೆಯಲ್ಲಿ ಒಟ್ಟು ಸೋಂಕಿತರು- 30336
ಒಟ್ಟು ಗುಣಮುಖರಾದವರು -22819
ಪ್ರಸ್ತುತ ಸೋಂಕಿತರು:- 7168
ಹೋಮ್ ಐಸೋಲೇಷನ್ – 6683
ಆಸ್ಪತ್ರೆ ಯಲ್ಲಿ ದಾಖಲು- 485
ಒಟ್ಟು ಸಾವು- 349
1)ಕಾರವಾರ
ಸೋಂಕಿತರ ಸಂಖ್ಯೆ- 4631
ಸಾವು- 58
2)ಅಂಕೋಲ
ಸೋಂಕಿತರ ಸಂಖ್ಯೆ-2247
ಸಾವು- 26
3)ಕುಮಟಾ
ಸೋಂಕಿತರ ಸಂಖ್ಯೆ-3210
ಸಾವು- 36
4) ಹೊನ್ನಾವರ–
ಸೋಂಕಿತರ ಸಂಖ್ಯೆ-2592
ಸಾವು- 34
5) ಭಟ್ಕಳ:-
ಸೋಂಕಿತರ ಸಂಖ್ಯೆ-2023
ಸಾವು- 31
6) ಶಿರಸಿ
ಸೋಂಕಿತರ ಸಂಖ್ಯೆ-3573
ಸಾವು- 48
7) ಸಿದ್ದಾಪುರ
ಸೋಂಕಿತರ ಸಂಖ್ಯೆ-1936
ಸಾವು- 12
8)ಯಲ್ಲಾಪುರ –
ಸೋಂಕಿತರ ಸಂಖ್ಯೆ-2296
ಸಾವು- 15
9)ಮುಂಡಗೋಡು.
ಸೋಂಕಿತರ ಸಂಖ್ಯೆ-2561
ಸಾವು- 17
10) ಹಳಿಯಾಳ
ಸೋಂಕಿತರ ಸಂಖ್ಯೆ-4415
ಸಾವು- 66
11) ಜೋಯಿಡಾ
ಸೋಂಕಿತರ ಸಂಖ್ಯೆ-852
ಸಾವು- 06
ಇಂದಿನ ಸೋಂಕಿತರ ವಿವರ:- (15/05/2021)

ಡೇಂಜರ್ ತಾಲೂಕು*:- ಹಳಿಯಾಳ, ಕಾರವಾರ.
ಸಾವಿನ ಪ್ರಮಾಣದಲ್ಲಿ ಹೆಚ್ಚಾಗಲು ಕಾರಣಗಳಿವು:-
ವೈದ್ಯರನ್ನು ಸಂಪರ್ಕಿಸದೇ ತಾವೇ ಔಷದೋಪಚಾರ ಮಾಡಿಕೊಳ್ಳುತ್ತಿರುವುದು ,ಹಾಗೂ ಸೋಂಕಿನ ಕೊನೆಯ ಕ್ಷಣದಲ್ಲಿ ಶ್ವಾಶಕೋಶ ಮತ್ತು ಇತರೇ ಭಾಗಕ್ಕೆ ತಗುಲಿದ ನಂತರ ಚಿಕಿತ್ಸೆಗೆ ದಾಖಲಾಗುತ್ತಿರುವುದು.
ಡೇಂಜರ್ ಆಗಲು ಕಾರಣ ಗಳು ಇವು :-
1)ಅತೀ ಹೆಚ್ಚು ಜನ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.
2) ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಬೇಕಾಬಿಟ್ಟಿ ತಿರುಗಾಟ.
3)ಮದುವೆ ಸಮಾರಂಭಗಳು ಈ ತಿಂಗಳಲ್ಲಿ ಅತೀ ಹೆಚ್ಚು ನಡೆದಿರುವುದು.
4) ಸೋಂಕಿನ ಲಕ್ಷಣ ಇದ್ದರೂ ಚಿಕಿತ್ಸೆ ಪಡೆಯದೇ ಸಮಸ್ಯೆ ಆದಾಗ ವೈದ್ಯರ ಬಳಿ ಹೋಗುತ್ತಿರುವುದರಿಂದ ಸೋಂಕು ಕಮ್ಯುನಿಟಿಯಲ್ಲಿ ಸ್ಪೆರ್ಡ ಆಗಿರುವುದು
ಜಿಲ್ಲೆಯ ವಿಶೇಷ ಕಂಟೈನ್‌ಮೆಂಟ್ ವಲಯಗಳು.
ತಾಲ್ಲೂಕು;ಗ್ರಾಮ ಪಂಚಾಯಿತಿಗಳು
ಕಾರವಾರ;ಚಿತ್ತಾಕುಲಾ, ಮಲ್ಲಾಪುರ
ಅಂಕೋಲಾ;ಬಬ್ರುವಾಡಾ, ಹಿಲ್ಲೂರು
ಹೊನ್ನಾವರ;ಕರ್ಕಿ
ಭಟ್ಕಳ;ಶಿರಾಲಿ
ಶಿರಸಿ;ಬನವಾಸಿ
ಸಿದ್ದಾಪುರ;ಅನಲೆಬೈಲ್, ಮನ್ಮಮೆ, ಕೋಲಶಿರ್ಸಿ
ಯಲ್ಲಾಪುರ;ಮಾವಿನಮನೆ, ಉಮ್ಮಚಗಿ, ನಂದೊಳ್ಳಿ
ಮುಂಡಗೋಡ;ಇಂದೂರು
ಜೊಯಿಡಾ;ರಾಮನಗರ, ಅಖೇತಿ
ದಾಂಡೇಲಿ;ಅಂಬಿಕಾನಗರ, ಅಂಬೇವಾಡಿ
ಹಳಿಯಾ;ಮುರ್ಕವಾಡ.
ಜಿಲ್ಲೆಯ ಸ್ಥಿತಿ ಹೇಗಿದೆ?
ಜಿಲ್ಲೆಯಲ್ಲಿ ಚಿಕಿತ್ಸೆಗೆ ಬೇಕಾದ ಎಲ್ಲಾ ಸವಲತ್ತುಗಳು ಸಂಬಂಧಪಟ್ಟ ಆಸ್ಪತ್ರೆಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಆದರೇ ತೀವ್ರ ತೊಂದರೆಯಾದಾಗ ಸಿಟಿ ಸ್ಕ್ಯಾನ್ ಮಾಡಲು ಉಪಕರಣಗಳು ಎಲ್ಲಾ ತಾಲೂಕಿನಲ್ಲಿ ಇಲ್ಲ. ಹೊನ್ನಾವರ ಖಾಸಗಿ ಆಸ್ಪತ್ರೆ, ಶಿರಸಿ ಖಾಸಗಿ ಆಸ್ಪತ್ರೆ ,ಕಾರವಾರ ಜಿಲ್ಲಾಸ್ಪತ್ರೆ ಹೊರತುಪಡಿಸಿ ಬೇರೆ ತಾಲೂಕಿನಲ್ಲಿ ಸಿಟಿ ಸ್ಕ್ಯಾನ್ ಇಲ್ಲ. ಬೇರೆ ತಾಲೂಕಿನವರು ಹೊರ ಜಿಲ್ಲೆಯನ್ನು ಅವಲಂಬಿಸಬೇಕಿದೆ. ಕಳೆದ ಎರಡು ದಿನದಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಮೆಡಿಸಿನ್ ಸಮಸ್ಯೆ ಸಹ ಉದ್ಭವವಾಗಿದೆ.
ಸದ್ಯ ಪ್ರತಿ ದಿನ 600 ರಿಂದ ಸಾವಿರ ತನಕ ಸೋಂಕಿತರಾಗುತಿದ್ದಾರೆ. ಸಾವಿನ ಸಂಖ್ಯೆ ಸಹ ಪ್ರತಿ ದಿನ 5 ರಿಂದ 10 ಸರಾಸರಿ ಇದೆ.

ಸದ್ಯ ಜಿಲ್ಲೆಯಲ್ಲಿ ಕಠಿಣ ನಿಯಮ ಜಾರಿಯಾದರೂ ಸೋಂಕಿತರ ಪ್ರಮಾಣ ತಗ್ಗಲು ಕನಿಷ್ಟ ಎರಡು ತಿಂಗಳು ಬೇಕು ಎಂಬುದು ತಜ್ಞರ ಅಭಿಪ್ರಾಯ.