ಪಯಣ ಮುಗಿಸಿದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಮಹಾದೇವ ವೇಳಿಪ.

613

ಕಾರವಾರ :- ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ಜನಪದ ಕಲಾವಿದ ಮಹಾದೇವ ವೇಳಿಪ (90) ರವರು ಇಂದು ಮೃತರಾಗಿದ್ದಾರೆ.

ಜೋಯಿಡಾ ತಾಲೂಕಿನ ನಾಗೋಡಾ ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಾರ್ಟೋಳಿ ಗ್ರಾಮದ ಮಹಾದೇವ ವೇಳಿಪ ರವರು ಜನಪದ ಕಲೆ ಹಾಗೂ ಪರಿಸರ ರಕ್ಷಣೆಗೆ ಜಾನಪದ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿಗೆ ಬಾಜನರಾಗಿದ್ದರು.

ನೂರಾರು ಬಗೆಯ ಗೆಡ್ಡೆ ಗೆಣಸುಗಳನ್ನು ಉಳಿಸಿ ಬೆಳಸುವ ಜೊತೆ ಅರಣ್ಯ ಸಂರಕ್ಷಣೆಸಹ ಮಾಡಿದ್ದ ಮಹಾದೇವ ವೇಳಿಪ ರವರು ಜನಪದ ಹಾಡುಗಳನ್ನು ಸಾವಿರ ಲೆಕ್ಕದಲ್ಲಿ ನಿರಂತರ ಹಾಡುತಿದ್ದರು. ನಾಟಿ ವೈದ್ಯ ಸಹ ಆಗಿದ್ದ ಇವರು ಸರಳ ಸಜ್ಜನಿಕೆ ಎಲ್ಲರನ್ನೂ ಸೆಳೆಯುತಿತ್ತು. ಕಳೆದ ಎರಡು ದಿನದಿಂದ ಅನಾರೋಗ್ಯ ಪೀಡಿತರಾಗಿದ್ದ ಇವರು ಇಂದು ದೈವಾದೀನರಾಗಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!