ಕೈಗಾ ಪ್ರದೇಶದಲ್ಲಿ ಹುಲಿ ಪತ್ತೆ! ರಸ್ತೆಯಲ್ಲಿ ಸಂಚಾರ ತಂತು ಜನರಲ್ಲಿ ಆತಂಕ.

1122

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ -ಬಾರೆ -ಯಲ್ಲಾಪುರ ಭಾಗಕ್ಕೆ ತೆರಳುವ ರಸ್ತೆಯಲ್ಲಿ ಹುಲಿ ಪ್ರತ್ಯಕ್ಷವಾಗಿ ಜನರಲ್ಲಿ ಇಂದು ಆತಂಕ ಮೂಡಿಸಿತು. ಇಂದು ಕೈಗಾದಿಂದ ಯಲ್ಲಾಪುರ ಮಾರ್ಗವಾಗಿ ತೆರಳುತಿದ್ದ ಕೈಗಾ ಉದ್ಯೋಗಿ ಯೊಬ್ಬರಿಗೆ ರಸ್ತೆಯಲ್ಲಿ ಹುಲಿ ಕಾಣಿಸಿಕೊಂಡಿದ್ದು ಹುಲಿಯ ವಿಡಿಯೋ ವನ್ನು ಚಿತ್ರಿಸಿ ಸ್ಥಳೀಯರಾದ ಗೋಪಾಲಕೃಷ್ಣ ಎಂಬುವವರಿಗೆ ನೀಡಿದ್ದಾರೆ.

ಅದೃಷ್ಟವಶಾತ್ ಕಾರಿನಲ್ಲಿ ಇದ್ದಿದ್ದರಿಂದ ಉದ್ಯೋಗಿಗೆ ಯಾವುದೇ ತೊಂದರೆಯಾಗಲಿಲ್ಲ. ಇನ್ನು ಹುಲಿಯು ಕೈಗಾ ರಸ್ತೆ ಭಾಗದಲ್ಲಿ ಹಲವು ಕಡೆ ಓಡಾಡುತಿದ್ದು ಸ್ಥಳೀಯ ಜನರಿಗೆ ಕಾಣಿಸಿಕೊಂಡಿದೆ.
ಇದಲ್ಲದೇ ಜೋಯಿಡಾ ರಸ್ತೆಯಲ್ಲಿ ಸಹ ಹುಲಿ ಸಂಚರಿಸುತ್ತಿರುವ ಕುರಿತು ಜನರು ಹೇಳುತಿದ್ದಾರೆ.

ಹುಲಿಯ ಸಂಚಾರದ ಬಗ್ಗೆ ಕಾರವಾರದ ಅರಣ್ಯ ಅಧಿಕಾರಿಗೆ ಮಾಹಿತಿ ನೀಡಲಾಗಿದ್ದು ಕಳೆದ ಆರು ತಿಂಗಳ ಹಿಂದೆ ಕದ್ರಾ ಜಲಾಶಯದ ಬಳಿ ಈ ಹುಲಿ ಕಾಣಿಸಿಕೊಂಡಿದ್ದು ನರಿಯೊಂದನ್ನು ಬೇಟೆಯಾಡಿ ತೆರಳಿತ್ತು. ಇದೀಗ ಕೈಗಾ ಭಾಗದಲ್ಲಿ ಹುಲಿ ಕಾಣಿಸಿಕೊಂಡಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!