ಕಾರವಾರ :- ಕರ್ನಾಟಕದಲ್ಲೇ ಶುದ್ಧ ಕನ್ನಡ ಮಾತನಾಡೋದು ಈಗಿನ ಕಾಲದಲ್ಲಿ ಕಷ್ಟದ ಕೆಲಸ ಅಂತದ್ರಲ್ಲಿ ಗಡಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಕನ್ನಡ ಮಾತನಾಡೋದು ,ಅದ್ರಲ್ಲೂ ಶುದ್ಧ ಕನ್ನಡ ಮಾತನಾಡೋದು ಎಷ್ಟು ಕಷ್ಟ ಅಂತ ಇಲ್ಲಿನವರಿಗೆ ಗೊತ್ತು. ಆದ್ರೆ ಇಂಗ್ಲೀಷ್ ಮಿಶ್ರಣವಿಲ್ಲದೇ ಶುದ್ಧ ಕನ್ನಡ ಮಾತನಾಡುತ್ತೇನೆ ಎನ್ನುವವರಿಗೆ ಉತ್ತರ ಕನ್ನಡ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಈಗೊಂದು ಸ್ಪರ್ದೆ ಆಯೋಜಿಸಿದೆ.
ಹೌದು ಈ ಕುರಿತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯ ಕನಿರ್ದೇಶಕ ಎನ್.ಜಿ. ನಾಯ್ಕ ರವರು ಪ್ರಕಟಣೆ ನೀಡಿದ್ದು ಅ.26 ರ ಹತ್ತು ಘಂಟೆಯೊಳಗಾಗಿ ಸಾರ್ವಜನಿಕರು ಮಾತನಾಡಿದ ಶುದ್ಧ ಕನ್ನಡದ ವಿಡಿಯೊ ಲಿಂಕ್ ಅನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುಮೋದನೆ ಗೊಂಡ ಲಿಂಕ್ ನಲ್ಲಿ ಅಪ್ ಲೋಡ್ ಮಾಡಬೇಕು. ಜಿಲ್ಲಾ ಹಂತದಲ್ಲಿ ಮೊದಲ ಬಹುಮಾನವಾಗಿ ₹5000,ದ್ವಿತೀಯ ₹3000,ತೃತೀಯ ₹2000 ಹಾಗೂ ಪ್ರಶಸ್ತಿ ಪತ್ರ ಒಳಗೊಂಡಿದ್ದು ಜಿಲ್ಲೆಯಿಂದ ಆಯ್ಕೆಯಾದವರು ಅ.30 ರಂದು ಬೆಂಗಳೂರಿನಲ್ಲಿ ನಡೆಯುವ ಸ್ಪರ್ದೆಯಲ್ಲಿ ಭಾಗವಹಿಸಬೇಕು.
ಈ ಸ್ಪರ್ದೆಗೆ ಯಾವುದೇ ವಯೋಮಿತಿ ಅನ್ವಯಿಸುವುದಿಲ್ಲ. ಆಸಕ್ತರು ಹೆಚ್ಚಿನ ಮಾಹಿತಿಗೆ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಇರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯನ್ನು ಸಂಪರ್ಕಿಸಬಹುದಾಗಿದೆ. ಇಲ್ಲವೇ ಸಹಾಯಕ ನಿರ್ದೇಶಕಾರದ ಎನ್. ಜಿ. ನಾಯ್ಕ -9481478983 ದೂರವಾಣಿಗೆ ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.