ಉತ್ತರ ಕನ್ನಡ ಜಿಲ್ಲೆ ಇಂದಿನ ಸಮಗ್ರ ಸುದ್ದಿ-ಯಾವ ತಾಲೂಕಿನಲ್ಲಿ ಏನಾಯ್ತು? ವಿವರ ನೋಡಿ.

657

ಮನೆ ಕಳ್ಳತನ ಆರೋಪಿಯನ್ನು ಬಂಧನ- ಕಳ್ಳತನವಾದ ಚಿನ್ನದ ನಕ್ಲೇಸ್ ಜಪ್ತಿಪಡಿಸಿಕೊಂಡ ಹೊನ್ನಾವರ ಪೊಲೀಸರು.

ಕಾರವಾರ :- ಮನೆ ಕಳ್ಳತನ ಮಾಡುತಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ಕಳ್ಳತನ ಮಾಡಿದ ಚಿನ್ನವನ್ನು ವಶಕ್ಕೆ ಪಡೆದ ಘಟನೆ ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದಿದೆ.
ಹಾನಗಲ್ ನ ಸಚಿನ್ (21) ಬಂಧಿತ ಆರೋಪಿಯಾಗಿದ್ದು ಈತನಿಂದ ₹82 ಸಾವಿರ ಮೌಲ್ಯದ 18 ಗ್ರಾಮ್ ತೂಕದ ಚಿನ್ನದ ನೆಕ್ಲೆಸ್ ವಶಕ್ಕೆ ಪಡೆಯಲಾಗಿದೆ.

ಹೊನ್ನಾವರದ ಶ್ರೀ ಕೃಷ್ಣ ಎಂಬುವವರ ಮನೆಯಲ್ಲಿ ಕಳೆದ ತಿಂಗಳು 26 ರಂದು ಕಳ್ಳತನ ನಡೆದಿತ್ತು. ಈ ಕುರಿತು ಪಿರ್ಯಾಧುದಾರರ ದೂರಿನ ಮೇಲೆ ಸಿಪಿಐ ಶ್ರೀಧರ್ ಎಸ್.ಆರ್ ರವರ ನೇತ್ರತ್ವದಲ್ಲಿ ಠಾಣೆಯ ಪಿ.ಎಸ್.ಐ ಸಾವಿತ್ರಿ ನಾಯಕ ಪಿ.ಎಸ್.ಐ ಕ್ರೈಂ, ಪಿ.ಎಸ್.ಐ ಶಶಿಕುಮಾರ,ಪಿ.ಎಸ್.ಐ ಮಹಾಂತೇಶ ನಾಯಕ್ ,ಪ್ರೊ.ಪಿ.ಎಸ್.ಐ ಶಾಂತಿನಾಥ್ ಹಾಗೂ ಪೊಲೀಸ್ ಸಿಬ್ಬಂದಿಯವರಾದ ರಮೇಶ ಲಮಾಣಿ ಸಿ.ಎಚ್.ಸಿ, ಸಿ.ಎಚ್.ಸಿ,ಕೃಷ್ಣ ಗೌಡ ಸಿ.ಪಿ.ಸಿ,
ಮಹಾವೀರ, ಸಿಪಿಸಿ ರಯೀಸ್ ಭಗವಾನ್ ತಂಡ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಬಂಧಿತ ಆರೋಪಿಯನ್ನು ಇಂದು ನ್ಯಾಯಾಂಗದ ವಶಕ್ಕೆ ನೀಡಲಾಯಿತು.

ಟ್ಯಾಂಕರ್ ಬೈಕ್ ಡಿಕ್ಕಿ-ಸವಾರ ಸ್ಥಳದಲ್ಲೇ ಸಾವು

ಅತೀ ವೇಗದಿಂದ ಬಂದ ಟ್ಯಾಂಕರ್ ಬೈಕ್ ಸವಾರನಿಗೆ ಗುದ್ದಿದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಸಾವು ಕಂಡ ಘಟನೆ ಕುಮಟಾ ತಾಲೂಕಿನ ಮಿರ್ಜಾನ್ ಬಳಿ ನಡೆದಿದ್ದು ಕಿಮಾನಿ ಮೂಲದ ರಮೇಶ್ ಹರಿಕಂತ್ರ ಮೃತ ಬೈಕ್ ಸವಾರ ನಾಗಿದ್ದಾನೆ. ಟ್ಯಾಂಕರ್ ಚಾಲಕ ಪರಾರಿಯಾಗಿದ್ದು, ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

.ನಾಳೆ ಕಾರವಾರಕ್ಕೆ ಸಂಸದ ಅನಂತಕುಮಾರ್ ಹೆಗಡೆ.

ನಾಳೆ ಕಾರವಾರ ಕ್ಕೆ ಸಂಸದ ಅನಂತಕುಮಾರ್ ಹೆಗಡೆ ಆಗಮಿಸಲಿದ್ದು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ನಡೆಯಲಿರುವ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಬಿ.ಎಸ್.ಎನ್.ಎಲ್ ನೆಟ್ವರ್ಕ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.

ನ್ಯಾಯಬೆಲೆ ಅಂಗಡಿಗಳಲ್ಲಿ ಇ-ಕೆವೈಸಿ ಕಡ್ಡಾಯ

ಕಾರವಾರ :-ಪಡಿತರ ಚೀಟಿಯಲ್ಲಿರುವ ಕುಟುಂಬದ ಎಲ್ಲಾ ಸದಸ್ಯರ ಇ-ಕೆವೈಸಿ ಸಂಗ್ರಹಣೆ ಮಾಡುವ ಕಾರ್ಯವು ಜುಲೈ 10 ವರೆಗೆ ಮಾತ್ರ ಆಯಾ ನ್ಯಾಯಬೆಲೆ ಅಂಗಡಿಯಲ್ಲಿ ಚಾಲ್ತಿಯಲ್ಲಿರುವದರಿಂದ ಇದುವರೆಗೂ ಇ-ಕೆವೈಸಿ ಮಾಡಿಕೊಳ್ಳದೆ ಇರುವ ಸದಸ್ಯರು ತಮ್ಮ ಪಡಿತರ ಚೀಟಿ, ಆಧಾರ್ ಕಾರ್ಡ್, ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ, ಸಿಲೆಂಡರ್ ಗ್ಯಾಸ್ ಕಾರ್ಡ್ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರಗಳೊಂದಿಗೆ ತಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆವೈಸಿ ಮಾಡಿಕೊಳ್ಳಬೇಕಾಗಿರುತ್ತದೆ.

ಇ-ಕೆವೈಸಿ ಮಾಡಿಕೊಳ್ಳದೇ ಇದ್ದ ಬಿಪಿಎಲ್ ಪರಿತರ ಚೀಟಿಯಲ್ಲಿರುವ ಸದಸ್ಯರ ಪಡಿತರವನ್ನು ಮುಂದಿನ ತಿಂಗಳಿನಲ್ಲಿ ಕಡಿತಗೊಳಿಸಲಾಗುವುದು. ಹಾಗಾಗಿ ಅಂತ್ಯೋದಯ ಮತ್ತು ಆದ್ಯತಾ ಬಿಪಿಎಲ್ ಪಡಿತರ ಚೀಟಿಯಲ್ಲಿರುವ ಎಲ್ಲಾ ಸದಸ್ಯರು ಕಡ್ಡಾಯವಾಗಿ ಇ-ಕೆವೈಸಿಯನ್ನು ಮಾಡಿಕೊಳ್ಳುವಂತೆ ತಹಶೀಲ್ದಾರ ನಿಶ್ಚಲ್ ನರೋನಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಚಿತ್ರ ಸುದ್ದಿ

ಅನುಮತಿ ಯಿಲ್ಲದೇ ಗೋವುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಟ ಮಾಡುತಿದ್ದ ವಾಹನವನ್ನು ಪೊಲೀಸರ ವಶಕ್ಕೆ ನೀಡಿದ ಘಟನೆ ಶಿರಸಿಯಲ್ಲಿ ನಡೆದಿದೆ. ಶಿರಸಿಯ ಶಿವಾನಿ ಹೋಟೆಲ್ ಸಮೀಪ ಮಿರ್ಜಾನ್ ಇಂದ ಬೇಡ್ಸಗಾವ್ ಗೇ ಗೋ ಗಳನ್ನೂ ಸಾಗಿಸುತ್ತಿದ್ದ ವೇಳೆ ಸ್ಥಳೀಯರು ವಶಕ್ಕೆ ಪಡೆದು ಪೊಲೀಸರಿಗೆ ನೀಡಿದ್ದಾರೆ.

ಮಣ್ಣು ಹಾಗೂ ನೀರು ಪರಿಕ್ಷಾ ಕೇಂದ್ರವನ್ನು ಕುಮಟಾದಲ್ಲಿ ಶಾಸಕ ದಿನಕರ್ ಶಟ್ಟಿ ಇಂದು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಕೃಷಿ ನಿರ್ದೇಶಕರಾದ ರಶ್ಮಿ ಶಹಾಪುರಮಠ ,ಅಕ್ರಮ್ ಆಲದಕಟ್ಟಿ ಮುಂತಾದವರು ಉಪಸ್ತಿತರಿದ್ದರು.

ಕುಮಟಾ ತ್ಯಾಜ್ಯ ಘಟಕ ಸ್ಥಳಾಂತರಿಸಲು ಒತ್ತಾಯ

ಕುಮಟಾ ಪಟ್ಟಣದ ಕೊಪ್ಪಳ ಕಾರ್ ವಾರ್ಡ್ ನ ಕೋರ್ಟ್ ಹಿಂಭಾಗದ ಮುನ್ಸಿಪಾಲಿಟಿ ಕಾಂಪ್ಲೆಕ್ಸ್ ನಲ್ಲಿ ಕುಮಟಾ ಪುರಸಭೆಯವರು ಕಸ ವಿಲೇವಾರಿ ಹಾಗೂ ಡಂಪಿಂಗ್ ಘಟಕವನ್ನು ಮಾಡಿದ್ದು ಅದರಿಂದ ಅಲ್ಲಿನ ಸಾರ್ವಜನಿಕರಿಗೆ ಹಾಗೂ ಪಕ್ಕದಲ್ಲಿರುವ ಅಂಗನವಾಡಿಗೆ ತುಂಬಾ ತೊಂದರೆ ಆಗುತ್ತದೆ ಎಂದು ಸ್ಥಳೀಯರು ದೂರಿದ್ದು ಮುನ್ಸಿಪಾಲ್ಟಿಯ ಡಂಪಿಂಗ್ ಗಾಡಿಯಲ್ಲಿ ಬಂದಿರುವ ತ್ಯಾಜ್ಯಗಳು ಅಲ್ಲಿ ವಿಲೇವಾರಿ ಮಾಡುವುದರಿಂದ ಅದರಲ್ಲಿನ ಔಷಧಿ ಮತ್ತು ಸಿರಿಂಜ್ ಗಳನ್ನು ಮಕ್ಕಳು ತೆಗೆದುಕೊಂಡು ಆಟವಾಡುತ್ತಿರುತ್ತಾರೆ. ಹಾಗೂ ತ್ಯಾಜ್ಯದಿಂದ ಬರುವ ವಾಸನೆಯಿಂದ ಅಕ್ಕಪಕ್ಕದವರಿಗೆ ಓಡಾಡಲು ತುಂಬಾ ತೊಂದರೆಯಾಗುತ್ತಿದೆ. ಈ ಕಾರಣದಿಂದ ದಯವಿಟ್ಟು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಘಟಕವನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಸ್ಥಳೀಯರಾದ ಗಜು ನಾಯ್ಕ, ಪ್ರದೀಪ್ ಅಮನ್ನಾ ,ವಿನಾಯಕ್ ಮರಿಯಪ್ಪ, ಚಿದಾನಂದ ನಾಯ್ಕ ಆಗ್ರಹಿಸಿದ್ದಾರೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!