ಕಾರವಾರದ ಕಡಲಲ್ಲಿ ಆಮೆಗಳ ಕಲರವ: ಸಂತಾನವೃದ್ಧಿಗಾಗಿ ಬರುತ್ತಿವೆ ನೂರಾರು ಆಮೆಗಳು

134

ಕಾರವಾರ:- ಕಾರವಾರದ ಮುದಗಾ ಕಡಲತೀರದಲ್ಲಿ ಹಗಲಿನಲ್ಲೇ ಓಲಿವ್ ರಿಡ್ಲಿ ಪ್ರಭೇದದ ಕಡಲಾಮೆಯೊಂದು ನೂರಕ್ಕೂ ಹೆಚ್ಚು ಮೊಟ್ಟೆಯಿಟ್ಟ ಘಟನೆ ನಡೆದಿದ್ದು ಅರಣ್ಯ ಇಲಾಖೆ ವಿಭಾಗದ ಕೋಷ್ಟಲ್ ಮರಿನ್ ಸೆಲ್ ನ ಆರ್.ಎಫ್.ಓ ಪ್ರಮೋದ್ ನಾಯಕ್ ಹಾಗೂ ಸಿಬ್ಬಂದಿಗಳು ಆಮೆಯ ಮೊಟ್ಟೆಯನ್ನು ರಕ್ಷಣೆ ಮಾಡಿದ್ದಾರೆ. ಓಲಿವ್ ರಿಡ್ಲಿ ಪ್ರಬೇದದ ಆಮೆಗಳು ನವಂಬರ್ ನಿಂದ ಮಾರ್ಚ ವರೆಗೆ ಮೊಟ್ಟೆ ಇಡುತ್ತವೆ. ಮೊಟ್ಟೆ ಇಡಲು ರಾತ್ರಿಹೊತ್ತನ್ನೇ ಆಯ್ಕಮಾಡಿಕೊಳ್ಳುತ್ತವೆ ಆದ್ರೆ ಈ ಆಮೆ ಹಗಲಿನಲ್ಲೇ ಮೊಟ್ಟೆ ಇಟ್ಟಿದ್ದು ಜನರ ಕುತೂಹಲಕ್ಕೆ ಕಾರಣವಾಯಿತು.

ಕಡಲಾಮೆಗಳಿಗೆ 100 ವರ್ಷಗಳ ಜೀವಿತಾವಧಿ

100 ವರ್ಷಗಳ ಜೀವಿತಾವಧಿಯನ್ನು ಹೊಂದಿರುವ ಆಮೆಗಳು ಮೂಲಭೂತವಾಗಿ ವಲಸೆ ಹೋಗುತ್ತವೆ. ಆದರೆ ಸಂತಾನಾಭಿವೃದ್ಧಿ ಅವಧಿಯಲ್ಲಿ ಹೆಣ್ಣಾಮೆಗಳು ದಡ ಸೇರುತ್ತವೆ. ಒಣ ಮರಳಿನಲ್ಲಿ 12 ರಿಂದ 20 ಇಂಚು ಆಳದ ರಂಧ್ರಗಳನ್ನು ಕೊರೆದು ಅಲ್ಲಿ ಸುಮಾರು 100-150 ಮೊಟ್ಟೆಗಳನ್ನಿಡುತ್ತವೆ. ಆದಾಗ್ಯೂ, ಬದುಕುಳಿಯುವಿಕೆಯ ಪ್ರಮಾಣ ತುಂಬಾ ಕಡಿಮೆ. ಕೇವಲ 1 ಪ್ರತಿಶತದಷ್ಟು (100 ರಲ್ಲಿ ಒಂದು ಮಾತ್ರ ಬದುಕುಳಿಯುತ್ತವೆ) ಮೊಟ್ಟೆಗಳು ಅಥವಾ ಮೊಟ್ಟೆಯೊಡೆದ ಮರಿಗಳನ್ನು ವಿವಿಧ ಭೂ ಮತ್ತು ವೈಮಾನಿಕ ಪರಭಕ್ಷಕಗಳು ತಿನ್ನುತ್ತವೆ. ಸಮುದ್ರ ಆಮೆಗಳು ಸಮತೋಲಿತ ಸಾಗರ ಪರಿಸರ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಅವಶ್ಯಕ. ಏಕೆಂದರೆ, ಅವು ಸತ್ತ ಮೀನು ಮತ್ತು ಸೀಗ್ರಾಸ್ ಅನ್ನು ಸೇವಿಸುವ ಮೂಲಕ ಸಮುದ್ರದ ನೀರನ್ನು ಸ್ವಚ್ಛಗೊಳಿಸುತ್ತದೆ.

ಕಡಲಾಮೆ ಸಂರಕ್ಷಣೆಗೆ ನಿಂತ ಅರಣ್ಯ ಇಲಾಖೆ

ಉತ್ತರ ಕನ್ನಡ ಜಿಲ್ಲೆಯ ಕಡಲ ತೀರದಲ್ಲಿ ಹೆಚ್ಚಾಗಿ ಕಂಡು ಬರುವ ಕಡಲಾಮೆಗಳನ್ನು ಜಿಲ್ಲೆಯ ಅರಣ್ಯ ಇಲಾಖೆ ಸಂರಕ್ಷಿಸುವ ಕೆಲಸ ಮಾಡುತ್ತಿದೆ. ಜನರಲ್ಲಿ ಆಮೆಗಳ ಬಗ್ಗೆ ಜಾಗೃತಿ ಮೂಡಿಸಿ ಅವುಗಳ ಮೊಟ್ಟೆಗಳನ್ನು ಭಕ್ಷಿಸದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ. ಇದರಿಂದ ಕಡಲಾಮೆ ಸಂತತಿ ಹೆಚ್ಚಲು ಅನುಕೂಲಕರ ವಾತಾವರಣ ಕಲ್ಪಿಸಿದೆ. ಹೊನ್ನಾವರದ ಕಾಸರಕೋಡು, ಟೊಂಕ, ಕಾರವಾರದ ದೇವಭಾಗ ಸೇರಿದಂತೆ ಕಡಲತೀರ ಪ್ರದೇಶದಲ್ಲಿ ಓಲಿವ್ ರಿಡ್ಲ್ ಹೆಸರಿನ ಪ್ರಬೇಧದ ಅಳಿವಿನಂಚಿನಲ್ಲಿರುವ ಕಡಲಾಮೆಗಳು ಮೊಟ್ಟೆಯಿಡುತ್ತವೆ.

ಅರಣ್ಯ ಇಲಾಖೆ ಅಧಿಕಾರಿಗಳು ಆಮೆಗಳು ಕಡಲತೀರದಲ್ಲಿ ಇಡುವ ಮೊಟ್ಟೆಗಳನ್ನ ನಾಯಿ ಇನ್ನಿತರ ಪ್ರಾಣಿಗಳ ಪಾಲಾಗದಂತೆ ರಕ್ಷಣೆಗೆ ವ್ಯವಸ್ಥೆ ಮಾಡಿದ್ದು ಮೊಟ್ಟೆ ಇರಿಸಿದ ಪ್ರದೇಶದಲ್ಲೇ ಜಾಲರಿಯನ್ನು ಅಳವಡಿಸುವ ಜೊತೆ ಅವುಗಳ ರಕ್ಷಣೆ ಸಹ ಮಾಡುತ್ತಾರೆ.ಇದರಿಂದ ಮೊಟ್ಟೆಗಳು ಸುರಕ್ಷಿತವಾಗಿರುತ್ತಿದ್ದು, ಈವರೆಗೆ ಸಾವಿರಾರೂ ಮೊಟ್ಟೆಗಳನ್ನು ರಕ್ಷಿಸಿ ಮರಿಗಳನ್ನು ಕಡಲಿಗೆ ಬಿಟ್ಟಿದ್ದಾರೆ.

ಇದನ್ನೂ ಓದಿ:- ತೆರಿಗೆ ಇಲಾಖೆಯಲ್ಲಿ ಕಾಲಿಹುದ್ದೆಗಳು|10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!