ಉತ್ತರ ಕನ್ನಡ ಜಿಲ್ಲೆಯಲ್ಲಿ ಇಳಿಕೆ ಕಂಡ ಕರೋನಾ! ವ್ಯಾಕ್ಸಿನ್ ಪಡೆದ ವ್ಯಕ್ತಿ ಹೃದಯಾಘಾತ ದಿಂದ ಸಾವು!

1191

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು 162 ಜನರಿಗೆ ಕರೋನಾ ಪಾಸಿಟಿವ್ ವರದಿಯಾಗಿದ್ದು, ಮೂರು ಜನ ಕರೋನಾಕ್ಕೆ ಬಲಿಯಾಗಿದ್ದಾರೆ.

ತಾಲೂಕುವಾರು ವಿವರ ಈ ಕೆಳಗಿನಂತಿದೆ:-

ಲಸಿಕೆ ಪಡೆದ ವ್ಯಕ್ತಿ ಹೃದಯಾಘಾತ ದಿಂದ ಸಾವು.

ಕೋವಿಡ್ ಲಸಿಕೆ ಪಡೆದು ಅರ್ಧ ಗಂಟೆ ವಿಶ್ರಾಂತಿ ಪಡೆಯುತಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವ್ಯಾಕ್ಸಿನ್ ಸೆಂಟರ್‌ನಲ್ಲಿ ನಡೆದಿದೆ. ಅಂಕೋಲಾ ತಾಲೂಕಿನ ಕಂತ್ರಿಯ ನಿವಾಸಿ ಮಾದೇವ್ ಪುಟ್ಟು ನಾಯ್ಕ್ (67) ಮೃತಪಟ್ಟ ವ್ಯಕ್ತಿ ಯಾಗಿದ್ದು ಲಸಿಕೆ ಪಡೆದ ಬಳಿಕ ಮಾತ್ರೆ ಪಡೆದುಕೊಳ್ಳಲು ತೆರಳುತ್ತಿದ್ದಾಗ ಅಸ್ವಸ್ಥಗೊಂಡು ಸಾವು ಕಂಡಿದ್ದಾನೆ. ಪತ್ನಿ ಯೊಂದಿಗೆ ವ್ಯಾಕ್ಸಿನ್ ತೆಗೆದುಕೊಳ್ಳಲು ಆಸ್ಪತ್ರೆಗೆ ಆಗಮಿಸಿದ್ದ ಈತ ವ್ಯಾಕ್ಸಿನ್ ತೆಗೆದುಕೊಂಡಿದ್ದ. ಆದರೇ ಈತನಿಗೆ ಹೃದಯ ಸಂಬಂಧಿ ಕಾಯಿಲೆ ಇದ್ದು ಸುಸ್ತಿನಿಂದಾಗಿ ಅಲ್ಲಿಯೇ ಕುಸಿದು ಬಿದ್ದಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವುದರಲ್ಲಿ ಹೃದಯಾಘಾತ ದಿಂದ ಸಾವು ಕಂಡಿದ್ದಾನೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!