ಕಾರವಾರ :- ಕರೋನಾ ಮಹಾ ಮಾರಿ ಯಂತಹ ಜಠಿಲ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಾಗೂ ಆರ್ಥಿಕವಾಗಿ ತೊಂದರೆಗೊಳಗಾದ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಪತ್ರಕರ್ತರಿಗೆ ಜಿಲ್ಲಾ ಪತ್ರಿಕಾ ಭವನ ಹಾಗೂ ದಾನಿಗಳ ಸಹಾಯದೊಂದಿಗೆ ಶುಕ್ರವಾರ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ದಾನಿಗಳಾದ ಸೈಂಟ್ ಮಿಲಾಗ್ರೀಸ್ ಸೌಹಾರ್ದ ಕೋ- ಅಪ್ ಲಿಮಿಟೆಡ್ ನ ಜಾರ್ಜ ಎಸ್.ಫರ್ನಾಂಡೀಸ್, ಚೇಂಬರ್ ಆಫ್ ಕಾಮರ್ಸ ಕಾರ್ಯದರ್ಶಿ ಹಾಗೂ ಡಿ.ಓ.ಬಂಟ್ &ಸನ್ಸ್ ಕಿರಾಣಿ ಮರ್ಚೆಂಟ್ ,ಸಂಡೆಮಾರ್ಕೇಟ್ ಕಾರವಾರ ಮಾಲೀಕರಾದ ದತ್ತಾತ್ರೇಯ ಪ್ರಸಾದ್ ,ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಭೀಮಣ್ಣ ನಾಯ್ಕ ರವರ ಸಹಾಯದಿಂದ ಆಹಾರದ ಕಿಟ್ ವಿತರಣೆ ಮಾಡಲಾಯಿತು.
ಆಹಾರದ ಕಿಟ್ ನಲ್ಲಿ ಅಗತ್ಯ ವಸ್ತುಗಳನ್ನು ನೀಡಲಾಗಿದ್ದು ,ಚೇಂಬರ್ ಆಫ್ ಕಾಮರ್ಸ ನ ದತ್ತಾತ್ರೇಯ ಪ್ರಸಾದ್ ಬಂಟ್ ರವರು ಹಾಗೂ
ಸೈಂಟ್ ಮಿಲಾಗ್ರೀಸ್ ಸೌಹಾರ್ದ ಕೋ- ಅಪ್ ಲಿಮಿಟೆಡ್ ನ ಪ್ರಧಾನ ವ್ಯವಸ್ಥಾಪಕಿ ರಾಜೇಶ್ವರಿ
ರವರು ಆಹಾರದ ಕಿಟ್ ವಿತರಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಪತ್ರಿಕಾಭವನದ ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ,ಉಪಾಧ್ಯಕ್ಷರಾದ ಗಿರೀಶ್ ನಾಯ್ಕ, ಕಾರ್ಯದರ್ಶಿ ಸುಭಾಷ್ ದೂಪದ ಹೊಂಡ ,ದೀಪಕ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.