ಕಾರವಾರ-ಮೀನಿನ ಲಾರಿಯಲ್ಲಿ ಸಿಕ್ತು ಲಕ್ಷ ,ಲಕ್ಷ ಗೋವಾ ಮದ್ಯ!

2609

ಕಾರವಾರ:- ಗೋವಾ ದಿಂದ ಕಾರವಾರದ ಕಡೆ ಬರುತಿದ್ದ ಟಾಟಾ ಕಂಪನಿಯ 207 ಮೀನಿನ ಕಂಟೈನರ್ ನಲ್ಲಿ ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಾಟ ಮಾಡುತಿದ್ದುದನ್ನು ಕಾರವಾರದ ಅಬಕಾರಿ ಅಧಿಕಾರಿಗಳು ಗಡಿಭಾಗದ ಮಾಜಾಳಿ ತಪಾಸಣಾ ಕೇಂದ್ರದಲ್ಲಿ ಪತ್ತೆ ಹಚ್ಚಿ ವಶಪಡಿಸಿಕೊಂಡು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿ ಅಂಕೋಲಾ ತಾಲೂಕಿನ ಆವರ್ಸಾ ದ ಸಂತೋಷ ಅಶೋಕ್ ಠಾಕ್ಕರಕರ ಎಂಬುವವನಾಗಿದ್ದು, ಈತ ಎಂದಿನಂತೆ ಅಂಕೋಲ ಭಾಗದಿಂದ ಮೀನುಗಳನ್ನು ತುಂಬಿಕೊಂಡು ಗೋವಾಕ್ಕೆ ತೆರಳಿ ಅಲ್ಲಿ ಗೋವಾ ಮದ್ಯವನ್ನು ಮೀನಿನ ಕಂಟೈನರ್ ನಲ್ಲಿ ತುಂಬಿಕೊಂಡು ಕಾರವಾರದ ಕಡೆ ಬಂದಿದ್ದ. ತಪಾಸಣೆ ವೇಳೆ ಗೋವಾ ಮದ್ಯ ಇರುವುದು ಪತ್ತೆಯಾಗಿದೆ.


750 ಎಂ. ಎಲ್ ನ ರಾಯಲ್ ಸ್ಟ್ಯಾಗ ವಿಸ್ಕಿ ಯ 12 ಬಾಟಲಿಗಳು (9 ಲೀ.) ಇದರ ಅಂದಾಜು ಮೌಲ್ಯ ರೂ. 18000. 750 ಎಂ. ಎಲ್ ನ ಗ್ರೀನ್ ಲ್ಯಾಂಡ್ ಕೊಕೋನೆಟ್ ಫೆನ್ನಿ ಒಟ್ಟು 21 ಬಿಳಿ ಬಣ್ಣದ ಚೀಲಗಳಲ್ಲಿ ತಲಾ 36 ರಂತೆ ಒಟ್ಟು 756ಪ್ಲಾಸ್ಟಿಕ್ ಬಾಟಲಿಗಳು, ಇದರ ಅಂದಾಜು ಮೌಲ್ಯ ₹151200. ಸಾಗಾಟ ಮಾಡುತ್ತಿರುವುದನ್ನು ಪತ್ತೆ ಹಚ್ಚಿ ಸದರಿ ಅಬಕಾರಿ ಸ್ವತ್ತು, ವಾಹನ ಹಾಗೂ ವಾಹನದಲ್ಲಿದ್ದ 24 ಖಾಲಿ ಮೀನಿನ ಕ್ರೇಟ್ ಗಳನ್ನು ಜಪ್ತುಪಡಿಸಿಕೊಳ್ಳಲಾಗಿದೆ.ಜಪ್ತು ಪಡಿಸಿದ ಒಟ್ಟು ಬೆಲೆ ₹431200 ದಷ್ಟಾಗಿದೆ.

ಕಾರ್ಯಾಚರಣೆಯಲ್ಲಿ ಅಬಕಾರಿ ಉಪ ಅಧೀಕ್ಷಕಿ ಸುವರ್ಣ ನಾಯ್ಕ ಅಬಕಾರಿ ಉಪ ಅಧೀಕ್ಷಕರು(ಪ್ರಭಾರ)ಉಪ -ವಿಭಾಗ ಕಾರವಾರ ರವರ ಮಾರ್ಗದರ್ಶನದಂತೆ ಗಂಗಾಧರ ಯು ಅಂತರಗಟ್ಟಿ ಅಬಕಾರಿ ಉಪ ನಿರೀಕ್ಷಕರು ಮಾಜಾಳಿ ಸಿಬ್ಬಂದಿಗಳಾದ ಗಣೇಶ ನಾಯ್ಕ, ಎಸ್ ಎಸ್ ನಾಗೇಕರ, ಕೆ ಆರ್ ಪಾವಸ್ಕರ್ ಭಾಗಿಯಾಗಿದ್ದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!