BREAKING NEWS
Search

ಸೈಲ್ ಕಾಲೇಜು ಬಳಿಯ ಅರಣ್ಯದಲ್ಲಿ ಸಿಕ್ತು ಆರು ಲಕ್ಷಕ್ಕೂ ಹೆಚ್ಚು ಮೌಲ್ಯದ ಮದ್ಯ!

1129

ಅಬಕಾರಿ ಅಧಿಕಾರಿಗಳು ವಶಪಡಿಸಿಕೊಂಡ ಮದ್ಯದ ವೀಡಿಯೋ ನೋಡಿ:-

ಕಾರವಾರ :-ಅರಣ್ಯದಲ್ಲಿ ಹುದುಗಿಸಿಟ್ಟಿದ್ದ ಗೋವಾ ಮದ್ಯವನ್ನು ಅಬಕಾರಿ ಅಧಿಕಾರಿಗಳ ಬರ್ಜರಿ ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮಾಜಾಳಿ ಬಳಿಯ ಸೈಲ್ ಇಂಜಿನಿಯರಿಂಗ್ ಕಾಲೇಜು ಬಳಿಯ ಅರಣ್ಯ ದಲ್ಲಿ ನಡೆದಿದೆ.

6,70,800ರೂ ಮೌಲ್ಯದ 1,422 ಲೀಟರ್ ಗೋವಾ ಮದ್ಯ,228 ಲೀಟರ್ ಬಿಯರ್ ವಶಪಡಿಸಿಕೊಳ್ಳಲಾಗಿದ್ದು ಕಾರವಾರ ಅಬಕಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದಾಳಿಯಲ್ಲಿ ಅಬಕಾರಿ ಉಪ ಆಯುಕ್ತರಾದ ಶಿವನಗೌಡ ಪಾಟೀಲ್ ಇವರ ಮಾರ್ಗ ದರ್ಶನ ದಲ್ಲಿ ಅಬಕಾರಿ ಉಪ ನಿರೀಕ್ಷಕರ ಸುವರ್ಣ ಬಾಯಿ, ಕಾರವಾರ ವಲಯ ನಿರೀಕ್ಷಕರಾದ ದೆಯಾನಂದ್, ಜಿಲ್ಲಾ ತಂಡದ ಅಬಕಾರಿ ನಿರೀಕ್ಷಕರಾದ ಬಸವರಾಜ್ ಕರವಿನ ಕೊಪ್ಪ,
ಸಿಬ್ಬಂದಿಗಳಾದ ಶಿವಾನಂದ ಕೊರಡಿ,ಚಂದ್ರಶೇಖರ್ ಪಾಟೀಲ್ ,ಪ್ರವೀಣ್ ,ವೀರೇಶ್ ನಾಗರಾಜ್ ,ಶ್ರೀನಿವಾಸ್,ರವಿ ನಾಯ್ಕ,ಇಮ್ತಿಯಾಜ್ ಭಾಗವಹಿಸಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!