ಹೆಬ್ಬಾವು ನುಂಗಲು ಕಾಳಿಂಗ ಸರ್ಪ ಯತ್ನ-ಅರಣ್ಯಾಧಿಕಾರಿಗಳಿಂದ ಹಾವುಗಳ ರಕ್ಷಣೆ

1785

ಕಾರವಾರ:- ಹಾವುಗಳು ಹಾವುಗಳನ್ನ ನುಂಗುವುದು ಸಾಮಾನ್ಯ ಆದ್ರೆ ಹೆಬ್ಬಾವನ್ನೇ ಕಾಳಿಂಗಸರ್ಪವೊಂದು ನುಂಗಲು ಪ್ರಯತ್ನಿಸಿದ ಘಟನೆ ಕಾರವಾರದ ಹರಿದೇವ ನಗರದಲ್ಲಿ ನಡೆದಿದೆ.ಸುಮಾರು ಅರ್ಧ ಘಂಟೆಗಳ ಕಾಲ ಕಾಳಿಂಗ ಹಾಗೂ ಹೆಬ್ಬಾವಿನ ನಡುವೆ ಕದನ ಒಂದನ್ನೊಂದು ನುಂಗುವ ಪ್ರಯತ್ನ ಮಾಡಿದ್ದು
ಕೊನೆಗೂ ಬೃಹದಾಕಾರದ ಕಾಳಿಂಗ ಸರ್ಪವು ಹೆಬ್ಬಾವನ್ನು ನುಂಗುವ ಪ್ರಯತ್ನದಲ್ಲಿ ಗೆಲವು ಕಂಡಿದೆ.

ಈ ವೇಳೆ ಸ್ಥಳೀಯರು ಅರಣ್ಯ ಇಲಾಖೆ ಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಎರಡು ಹಾವುಗಳನ್ನು ರಕ್ಷಿಸಿ ಅರಣ್ಯಕ್ಕೆ ಬಿಟ್ಟಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!