BREAKING NEWS
Search

ಕಾರವಾರ|ಸ್ಕೂಟಿಗೆ ಹಿಂಭಾಗದಿಂದ ಬಸ್ ಡಿಕ್ಕಿ ಬಾಲಕಿ ಸಾವು

353

ಕಾರವಾರ :- ಸ್ಕೂಟಿಯಲ್ಲಿ ಸಂಚರಿಸುತಿದ್ದ ತಂದೆ ಮಗಳಿಗೆ ಹಿಂಭಾಗದಿಂದ ಸೀಬರ್ಡ ಬಸ್ ಡಿಕ್ಕಿಹೊಡೆದು ಸ್ಥಳದಲ್ಲೇ ಬಾಲಕಿ ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಬಿಣಗಾದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ.

ಲವಿತಾ ಜಾರ್ಜ ಪರ್ನಾಂಡಿಸ್ (13)ಸಾವು ಕಂಡ ಬಾಲಕಿಯಾಗಿದ್ದಿ ಆಕೆಯ ತಂದೆ ಜಾರ್ಜ್ ಪರ್ನಾಂಡಿಸ್ ಗಾಯಗೊಂಡಿದ್ದು ಕಾರವಾರದ ಕ್ರಿಮ್ಸ್ ವೈದ್ಯಕೀಯ ಕಾಲೇಜಿನ ಆಸ್ಪತ್ರಗೆ ದಾಖಲಿಸಲಾಗಿದೆ.

ಬೆಂಗಳೂರಿನಿಂದ ಕಾರವಾರದತ್ತ ಬರುತಿದ್ದ ಸೀ ಬರ್ಡ ಕಂಪನಿಯ ಬಸ್ ,ಬಿಣಗಾ ದಿಂದ ಕಾರವಾರದತ್ತ ಸ್ಕೂಟಿಯಲ್ಲಿ ಹೋಗುತಿದ್ದಾಗ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಘಟನೆ ನಡೆದಿದ್ದು ಸೀಬರ್ಡ ಬಸ್ ಚಾಲಕನನ್ನು ಕಾರವಾರ ಸಂಚಾರಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!