BREAKING NEWS
Search

ಕಾರವಾರ- ಅಪ್ಪನ ಚಿತೆಗೆ ಅಗ್ನಿಸ್ಪರ್ಶ ಮಾಡಿದ ಮಗಳು-ಮಾದರಿಯಾದ ಮಹಿಳೆ.

815

ಕಾರವಾರ :- ಹೆಣ್ಣು ಎಂದಾಕ್ಷಣ ಸಮಾಜದಲ್ಲಿ ಅವರಿಗೆ ನೀಡುವ ಸ್ಥಾನಮಾನಗಳೇ ಬೇರೆ ಇರುತ್ತದೆ. ಧಾರ್ಮಿಕ ನೆಲೆಗಟ್ಟಿನಲ್ಲಿ ಅವರಿಗೆ ಹಲವು ಕಾರ್ಯಗಳಲ್ಲಿ ಇಂದಿಗೂ ಭಾಗವಹಿಸುವ ಅವಕಾಶಗಳಿಲ್ಲ.

ಅದರಲ್ಲಿಯೂ ಶ್ರಾದ್ಧ ಕಾರ್ಯಗಳಲ್ಲಿ ಇಂದಿನವರೆಗೂ ಮಹಿಳೆಗೆ ಕಾರ್ಯ ಮಾಡುವ ಹಕ್ಕು ಧಾರ್ಮಿಕವಾಗಿ ಇಲ್ಲ. ಆದರೇ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಹಿಳೆಯೊಬ್ಬಳು ಹಳೆಯ ಸಂಪ್ರದಾಯವನ್ನು ಮುರಿದು ಪುರುಷರಂತೆ ತಾವು ಸಹ ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ತೋರಿಸಿಕೊಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿದ್ದಾಳೆ.

ಕಾರವಾರ ತಾಲೂಕಿನ ಮುಡಗೇರಿಯಲ್ಲಿ ಪ್ರತಿಭಾ ನಾಯ್ಕ ಎಂಬುವವರು ಇಂದು ಮೃತರಾದ ತಮ್ಮ ತಂದೆಯ ಅಂತ್ಯ ಸಂಸ್ಕಾರವನ್ನು ಮಾಡಿದ್ದಾರೆ.

ಹಿಂದೂ ಧರ್ಮದ ಪ್ರಕಾರ ಮರಣ ಹೊಂದಿದಾಗ ಗಂಡು ಮಕ್ಕಳು ಚಿತೆಗೆ ಅಗ್ನಿ ಸ್ಪರ್ಶ ಮಾಡುವುದು ನಡೆದು ಬಂದ ಸಂಪ್ರದಾಯ. ಇದನ್ನೂ ಮೀರಿಸುವಂತೆ ಪ್ರತಿಭಾ ನಾಯ್ಕ ಎಂಬ ಮಹಿಳೆ ತಂದೆಯ ಅಂತ್ಯ ಸಂಸ್ಕಾರ ನಡೆಸುವ ಮೂಲಕ ಸಮಾಜಕ್ಕೆ ಮಾದರಿಯಾಗುವಂತಾಗಿದೆ. ರಮೇಶ ನಾಯ್ಕ ಅವರಿಗೆ ಪ್ರತಿಭಾ ಏಕೈಕ ಪುತ್ರಿಯಾಗಿದ್ದು ವಿಧಿವಶರಾದ ಅವರ ಚಿತೆಗೆ ಪುತ್ರಿಯೇ ಅಂತ್ಯಸಂಸ್ಕಾರ ಮಾಡಿದ್ದು ಹೆಣ್ಣುಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಎಂಬುದಕ್ಕೆ ಈಕೆ ಮಾಡಿದ ಕಾರ್ಯವೇ ಸಾಕ್ಷಿಯಾಗಿದ್ದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!