ನಾಳೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ 100% ಸಾರಿಗೆ ವ್ಯವಸ್ಥೆ.

1109

ಕಾರವಾರ :- ಹಲವು ದಿನಗಳಿಂದ ಕರ್ತವ್ಯಕ್ಕೆ ಹಾಜುರಾಗದೇ ತಮ್ಮ ವಿವಿಧ ಬೇಡಿಕೆಗಾಗಿ ಕರ್ತವ್ಯಕ್ಕೆ ಹಾಜುರಾಗದೇ ಪ್ರತಿಭಟನೆ ನಡೆಸುತಿದ್ದ ಸಾರಿಗೆ ನೌಕರರು ಹೈ ಕೋರ್ಟ ಆದೇಶದಂತೆ ಕರ್ತವ್ಯಕ್ಕೆ ಹಾಜುರಾಗಿದ್ದಾರೆ.

ಇಂದು ಉತ್ತರ ಕನ್ನಡ ಜಿಲ್ಲೆಯಲ್ಲಿ 85% ವಾಯುವ್ಯ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜುರಾಗಿದ್ದರು. ಇದರಿಂದಾಗಿ ಜಿಲ್ಲೆಯಲ್ಲಿ ನಗರ ,ಗ್ರಾಮಾಂತರ ಮತ್ತು ಹೊರ ಜಿಲ್ಲೆಗಳಿಗೆ ಯಾವುದೇ ಸಮಸ್ಯೆ ಇಲ್ಲದೇ ವಾಯುವ್ಯ ಸಾರಿಗೆ ಬಸ್ ಗಳು ಸಂಚರಿಸಿದವು.

ಜಿಲ್ಲೆಯಲ್ಲಿ ವಾಯುವ್ಯ ಸಾರಿಗೆ ನಿಗಮದಲ್ಲಿ ವಿವಿಧ ಹುದ್ದೆಯಲ್ಲಿ 2150 ಜನ ಸಿಬ್ಬಂದಿ ಇದ್ದಾರೆ.1750 ಜನ ಚಾಲಕ ನಿರ್ವಾಹಕ ರಿದ್ದಾರೆ. ಇಂದು 1600 ಸಾರಿಗೆ ನೌಕರರು ಇಂದು ಕರ್ತವ್ಯಕ್ಕೆ ಹಾಜುರಾಗಿದ್ದು ಏಳು ದಿನ ಗೈರಾದವರು ಡಿವಿಜನ್ ಕಚೇರಿಗೆ ಬಂದು ಅನುಮತಿ ಪಡೆದು ನಾಳೆ ಕರ್ತವ್ಯಕ್ಕೆ ಹಾಜುರಾಗಲಿದ್ದಾರೆ ಎಂದು ಶಿರಸಿ ಜಿಲ್ಲಾ ವಿಭಾಗಾಧಿಕಾರಿ ರಾಜಕುಮಾರ್ ತಿಳಿಸಿದ್ದಾರೆ.

  • ಕರೋನಾ ಆತಂಕ ಕರ್ತವ್ಯಕ್ಕೆ ಕತ್ತರಿ!

ಸದ್ಯ ಮುಷ್ಕರ ದಿಂದಾಗಿ ಸಾರಿಗೆ ನೌಕರರು ಏಳು ದಿನಕ್ಕೂ ಹೆಚ್ಚು ದಿನ ಕರ್ತವ್ಯಕ್ಕೆ ಹಾಜುರಾಗಿಲ್ಲ.

ನಿಯಮದ ಪ್ರಕಾರ ಏಳು ದಿನಕ್ಕೂ ಹೆಚ್ಚು ರಜೆ ಹಾಕಿದ ಸಿಬ್ಬಂದಿ ಸ್ಥಳೀಯ ಕಚೇರಿಯಲ್ಲಿ ಅನುಮತಿ ಪಡೆದು ಕರ್ತವ್ಯಕ್ಕೆ ಹಾಜುರಾಗಬೇಕಾಗುತ್ತದೆ.

ಆದರೇ ವೀಕೆಂಡ್ ಕರ್ಫ್ಯೂ ,ನೈಟ್ ಕರ್ಫ್ಯೂ ನಿಂದಾಗಿ ಪ್ರಯಾಣಿಕರು ಬಸ್ ನಲ್ಲಿ ಸಂಚರಿಸುವ ಪ್ರಮಾಣ ಗಣನೀಯ ಇಳಿಕೆ ಕಾಣಲಿದೆ. ಹೀಗಾಗಿ ಸಾರಿಗೆ ನಿಗಮದ ಅಧಿಕಾರಿಗಳು ಪ್ರಯಾಣಿಕರ ಸಾಂದ್ರತೆಗೆ ಅನುಗುಣವಾಗಿ ಬಸ್ ಗಳನ್ನು ರಸ್ತೆಗಿಳಿಸಲು ವ್ಯವಸ್ಥೆ ಮಾಡುವ ಕುರಿತು ಸಮಾಲೋಚನೆ ನೆಡೆಸಿದ್ದು ಆಗುವ ನಷ್ಟ ತಪ್ಪಿಸುವ ಸಿದ್ದತೆಯಲ್ಲಿದ್ದಾರೆ.

ಹೀಗಾಗಿ ಹೆಚ್ಚು ಜನ ಪ್ರಯಾಣಿಕರು ಬಾರದಿದ್ದಲ್ಲಿ ಹಲವು ಬಸ್ ಗಳು ರಸ್ತೆಗಿಳಿಯದು. ಹೀಗಾಗಿ ಅನಿವಾರ್ಯವಾಗಿ ನೌಕರರಿಗೆ ಕರ್ತವ್ಯಕ್ಕೆ ಕತ್ತರಿ ಬೀಳುವ ಸಾಧ್ಯತೆ ಇದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!