ಕಾರವಾರ :- ಕಳೆದ ನಾಲ್ಕು ದಿನದಿಂದ ಸಾರಿಗೆ ನೌಕರರ ಪ್ರತಿಭಟನೆ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಹಾಜುರಾಗದ ಸಾರಿಗೆ ಸಿಬ್ಬಂದಿಗೆ ವರ್ಗಾವಣೆ ಶಿಕ್ಷೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಿಂದ 40 ಸಾರಿಗೆ ನೌಕರರಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದು, ಸಾರ್ವಜನಿಕ ಹಿತಾಸಕ್ತಿ ಹಾಗೂ ಆಡಳಿತಾತ್ಮಕ ಕಾರಣ ನೀಡಿ ಇಂದು ವರ್ಗಾವಣೆ ಮಾಡಲಾಗಿದೆ.
ವರ್ಗಾವಣೆ ಆದೇಶ ವನ್ನು ವಾಯುವ್ಯ ಸಾರಿಗೆ ವಿಭಾಗದ ಹುಬ್ಬಳ್ಳಿ ವ್ಯವಸ್ಥಾಪಕ ನಿರ್ದೇಶಕರು ನೀಡಿದ್ದು ತಾಂತ್ರಿಕ ಸಿಬ್ಬಂದಿ -10 , ಚಾಲಕ,ನಿರ್ವಾಕರು -30 ಒಟ್ಟು 40 ಸಿಬ್ಬಂದಿಗೆ ವಿವಿಧ ಡಿಫೋ ದಿಂದ ವರ್ಗಾವಣೆ ಮಾಡಲಾಗಿದೆ.