ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಪಡೆದ ಕುಮಟಾ ಪುರಸಭೆ ಕಟ್ಟಡದಲ್ಲೇ ರಾಶಿ ರಾಶಿ ಕಸ! ಪಕ್ಕದ ಮನೆಗೆ ಕಸ ಹಾಕೂ ಪುರಸಭೆ ವಿರುದ್ಧ ಜನರ ಅಕ್ರೋಶ?

1288

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪುರಸಭೆ ಇತ್ತೀಚೆಗಷ್ಟೇ ಎಲ್ಲರೂ ಆಶ್ಚರ್ಯ ಪಡುವ ರೀತಿಯಲ್ಲಿ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಯನ್ನು ಪಡೆದುಕೊಂಡಿತು.

ಅದು ಹೇಗೆ ಪಡೆದುಕೊಂಡಿತು ಎನ್ನುವುದೇ ಇಡೀ ಜಿಲ್ಲೆಯಲ್ಲಿ ಜನರಿಗೆ ಕಾಡುತ್ತಿರುವ ಬಹು ದೊಡ್ಡ ಪ್ರಶ್ನೆಯಾಗಿದೆ. ಯಾಕೆಂದರೆ ಕುಮಟಾ ಪುರಸಭೆ ಸ್ಛಚ್ಛತೆ ವಿಷಯದಲ್ಲಿ ಜಿಲ್ಲೆಯಲ್ಲೇ ಕೆಳಮಟ್ಟದಲ್ಲಿದೆ.

ಕುಮಟಾ ಪುರಸಭೆ ಕಟ್ಟಡದ ಕೆಳಭಾಗದಲ್ಲೇ ರಾಶಿ ರಾಶಿ ಕಸ ತಿಂಗಳುಗಟ್ಟಲೇ ಬಿದ್ದರೂ ಸ್ಪಚ್ಛ ಮಾಡದೇ ಹಾಗೇ ಬಿಟ್ಟಿದ್ದಾರೆ.

ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಪುರಸಭೆ ಕಟ್ಟಡದ ಕೆಳಭಾಗ ಕುಡುಕರ ಅಡ್ಡವಾಗಿದ್ದು ರಾಶಿ ರಾಶಿ ಬಿಯರ್ ಬಾಟಲ್ ಸೇರಿದಂತೆ ಕಸದ ರಾಶಿಯೇ ಇಲ್ಲಿರುತ್ತದೆ. ತಮ್ಮ ಕಚೇರಿಯ ಕಟ್ಟಡಭಾಗವನ್ನೇ ಸ್ವಚ್ಛ ಮಾಡಿಕೊಳ್ಳಲಾಗದ ಪುರಸಭೆಗೆ ಅದು ಹೇಗೆ ಪ್ರಶಸ್ತಿ ದೊರೆಯಿತು ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಹೊನ್ನಾವರ ಕಸ ತಂದು ಸುರಿಯುವುದಕ್ಕೆ ವಿರೋಧ! ಪಕ್ಕದ ಮನೆಗೆ ಕಸ ಸುರಿಯುವುದನ್ನು ಸಹಿಸಿಕೊಳ್ಳಲಾಗದು.

ಹೊನ್ನಾವರ: ನೆರೆಯ ಕುಮಟಾ ಪಟ್ಟಣದ ಕಸವನ್ನು ಹೊನ್ನಾವರದ ಘನತ್ಯಾಜ್ಯ ಘಟಕಕ್ಕೆ ತರುವುದನ್ನು ತಕ್ಷಣದಿಂದಲೇ ತಡೆಯುವಂತೆ ತಾಲೂಕಿನ ಸಮಾನ ಮನಸ್ಕರು ಒಟ್ಟಾಗಿ ಪಟ್ಟಣ ಪಂಚಾ
ಯತಿ ಅಧ್ಯಕ್ಷರಿಗೆ ಹಾಗೂ ಅಧಿಕಾರಿ
ಗಳಿಗೆ ಬುಧವಾರ ಮನವಿಸಲ್ಲಿಸಿದ್ದಾರೆ.

ಕುಮಟಾ ಪುರಸಭೆ ಕಳೆದ ನಾಲ್ಕು ವರ್ಷದ ಹಿಂದೆ ತಾತ್ಕಲಿಕವಾಗಿ ಕಸ ಹಾಕಲು ಅವಕಾಶ ಪಡೆದು ನಿರಂತರವಾಗಿ ಕಸ ಹಾಕುತ್ತಿರುವುದು ತಾಲೂಕಿನ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿರುವುದು ಒಂದಡೆಯಾದರೆ, ಕೆಲ ದಿನದ ಹೊಂದೆ ಕುಮಟಾ ಪುರಸಭೆ ಸ್ವಚ್ಛ ಸರ್ವೇಕ್ಷಣಾ ಪ್ರಶಸ್ತಿ ಸ್ವೀಕರಿಸಿ ಮಾದರಿ ಎಂದು ಬಿಂಬಿತವಾಗಿರುವುದು ಹೊನ್ನಾವರದ ತಾಲೂಕಿನ ನಿವಾಸಿಗಳಿಗೆ ಅಚ್ಚರಿ ಮೂಡಿಸಿದೆ.

ಸ್ವತಃ ವಿಲೇವಾರಿಗೆ ಅವಕಾಶ
ವಿಲ್ಲದಿದ್ದರೂ ಪ್ರಶಸ್ತಿ ನೀಡಿರುವುದು ಯಾವ ಮಾನದಂಡದ ಮೇಲೆ ಎಂದು ಪ್ರಶ್ನೆ ಮೂಡಿದೆ. ನಾಲ್ಕೆದು ವರ್ಷ ದಿಂದ ಸಮಸ್ಯೆ ಬಗ್ಗೆ ಕುಮಟಾ ಹೊನ್ನಾವರ ಹಾಲಿ ಮಾಜಿ ಶಾಸಕ
ರಾದಿ ಪ್ರಮುಖ ಮೂರು ಪಕ್ಷದವರು ಚಕಾರ ಎತ್ತದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಆಯ್ಕೆಯದ ಈ ಹಿಂದಿನ ಹಾಗೂ ಈಗಿನ ಶಾಸಕರು ನಗರವನ್ನು ಸಂಪೂರ್ಣ ನಿರ್ಲಕ್ಷ್ಯ ಮಾಡು
ತ್ತಿದ್ದಾರೆ. 2009ರಂದು ಅಂದಿನ ಅಧ್ಯಕ್ಷ ಸದಾನಂದ ಭಟ್ ಅವಧಿಯಲ್ಲಿ ವಿಲೇವಾರಿ ಘಟಕ ಆರಂಭಿಸಿ ಪಟ್ಟಣದ ತ್ಯಾಜ್ಯ ಸಂಗ್ರಹ ಮಾಡಲಾಗುತ್ತಿತ್ತು.

ಇದೀಗ ಕುಮಟಾ ಪುರಸಭೆಯ ಕಸವನ್ನು ಅಲ್ಲಿಗೆ ಹಾಕುತ್ತಿರುವುದಕ್ಕೆ ವಿರೋಧವಿದ್ದು, ಇಂದಿನಿಂದ ಕಸ ಹಾಕುವುದನ್ನು ನಿಲ್ಲಿಸಬೇಕು. ಗೇಟಿಗೆ ಬೀಗ ಹಾಕಿ ಯಾವುದೇ ಕಾರಣಕ್ಕೂ ಕುಮಟಾ ವಾಹನ ಒಳಪ್ರವೇಶಿಸಬಾರದು. ಒಂದೊಮ್ಮೆ ಪ್ರವೇಶ ಮಾಡಿದ್ದೆ ಆದಲ್ಲಿ ಮುಂದಿನ ಅನಾಹುತಕ್ಕೆ ಕುಮಟಾ ಪುರಸಭೆ ಹಾಗೂ ಶಾಸಕ ದಿನಕರ ಶೆಟ್ಟಿ ನೇರ ಹೋಣಿಯಾಗಲಿದ್ದಾರೆ.

ಈ ಕುರಿತು ಹೊನ್ನಾವರ ಪಟ್ಟಣ ಪಂಚಾಯತಿ ಸದಸ್ಯರ ತುರ್ತು ಸಭೆ ಕರೆದು ನಿರ್ಣಯ ಮಾಡುವಂತೆ ಒತ್ತಾಯಿಸಿದ್ದಾರೆ.

ಒಂದೊಮ್ಮೆ ಮರಾಕಲ್ ಯೋಜನೆಯಿಂದ ಹೊನ್ನಾವರ ಪಟ್ಟಣಕ್ಕೆ ಸರಬರಾಜು ಆಗುವ ನೀರು ತಡೆ ಹಿಡಿಯಲಿದ್ದೆವೆ ಎಂದು ಬ್ಲಾಕ್ ಮೇಲ್ ತಂತ್ರ ಪ್ರಯೋಗಿಸಿದರೆ ಪಟ್ಟಣ ಮತ್ತು ತಾಲೂಕಿನ ಜನತೆಯು ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ತಕ್ಕ ಉತ್ತರ ನೀಡಲು ಸಿದ್ದರಿದ್ದೇವೆ ಎಂದು ಗಂಟಾಗೋಷವಾಗಿ ಹೇಳಿದರು.

ಇಂತಹ ಅಚಾರ್ತುಯಕ್ಕೆ ಅವಕಾಶ ನೀಡಬಾರದು ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿಗೆ ಮನವಿ ಸಲ್ಲಿಸಿದರು.

ಮನವಿಯನ್ನು ಪಟ್ಟಣ ಪಂಚಾಯತಿ ಅಧ್ಯಕ್ಷ ಶಿವರಾಜ ಮೇಸ್ತ, ಉಪಾಧ್ಯಕ್ಷೆ ಮೇಧಾ ನಾಯ್ಕ ಹಾಗು ಮುಖ್ಯಾಧಿಕಾರಿ ಅನುಪಸ್ಥಿತಿಯಲ್ಲಿ ಅಧಿಕಾರಿ ವೆಂಕಟೇಶ ನಾಯ್ಕ ಸ್ವೀಕರಿಸಿದರು.

ಮನವಿ ಸಲ್ಲಿಸಿದ ಬಳಿಕ ಮಾಜಿ.ಪಟ್ಟಣ ಪಂಚಾಯತಿ ಅಧ್ಯಕ್ಷ ಸದಾನಂದ ಭಟ್ ಮಾತನಾಡಿ ನೆರೆ ಮನೆಯ ಕಸವನ್ನು ನಮ್ಮ ಮನೆಯ ಅಂಗಳದಲ್ಲಿ ಹಾಕಿಕೊಳ್ಳುವುದು ಹೇಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲವೋ ಹಾಗೇಯೆ ನೆರೆ ತಾಲೂಕಿನ ಕಸ ನಮ್ಮಲ್ಲಿಗೆ ತೆಗದುಕೊಳ್ಳಲು ಸಾಧ್ಯವಿಲ್ಲ. ಹೊನ್ನಾವರವನ್ನು ಶಾಸಕರು ನಿರ್ಲಕ್ಷ ಮಾಡುತ್ತಿದ್ದಾರೆ.

ಪಟ್ಟಣ ಪಂಚಾಯತಿಗೆ ಮೂರು ವರ್ಷದಿಂದ ಯಾವುದೇ ವಿಶೇಷ ಅನುದಾನ ಬಂದಿಲ್ಲ. ಶಾಸಕರು ಕಣ್ಣು ಮುಚ್ಚಿ ಕುಳಿತಿದ್ದಾರೆ. ಮೂಲಭೂತ ಸೌಕರ್ಯ ಒದಗಿಸಲು ವಿಫಲರಾಗಿದ್ದಾರೆ. ಇದರ ಜೊತೆ ಕಸವನ್ನು ಮತ್ತೆ ತಂದರೆ ಮುಂದಿನ ಎಲ್ಲಾ ಅನಾಹುತಗಳಿಗೆ ಶಾಸಕರು, ಕುಮಟಾ ಪುರಸಭೆ ನೇರ ಹೋಣೆ ಎಂದು ಎಚ್ಚರಿಸಿದರು.
ಮನವಿ ಸ್ವೀಕರಿಸಿದ ಬಳಿಕ ಅಧ್ಯಕ್ಷ ಶಿವರಾಜ ಮೇಸ್ತ ಮಾತನಾಡಿ ಈಗಾಗಲೇ ಪ್ರಕರಣ ನ್ಯಾಯಲಯದ ಹಂತದಲ್ಲಿದ್ದು, ಯಾವ ವಿಧದಲ್ಲಿದೆ ಎಂದು ಹೊಸದಾಗಿ ವಕೀಲರ ನೇಮಕ ಮಾಡಿ ಕಸ ಹಾಕಲು ತಡೆ ತರುತ್ತೇವೆ . ಕುಮಟಾ ವಾಹನ ಹೋಗದಂತೆ ಬೀಗ ಅಳವಡಿಕೆ ಇಂದೆ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ನೀತಿಸಂಹಿತೆ ಜಾರಿ ಇರುದರಿಂದ ಸಭೆ ಮಾಡಲು ಅನುಮತಿ ಇಲ್ಲ. ಸಾರ್ವಜನಿಕರ ಸಮಸ್ಯೆ ಬಗೆಹರಿಸಲು ಪ್ರಾಮಾಣಿಕವಾಗಿ ಸೇವೆ ಸಲ್ಲಿಸುದಾಗಿ ಭರವಸೆ ನೀಡಿದರು.
ಕರವೇ ಅಧ್ಯಕ್ಷ ಉದಯರಾಜ ಮೇಸ್ತ, ಉಮೇಶ ಮೇಸ್ತ, ಲೋಕೇಶ ಮೇಸ್ತ, ಸುರೇಶ ಸಾರಂಗ, ಗಿರೀಶ ನಾಯ್ಕ ಹಡಿಕಲ್, ಪ್ರದೀಪ ಶೆಟ್ಟಿ ವಿವಿಧ ಸಂಘಟನೆಯರು ಉಪಸ್ಥಿತರಿದ್ದರು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!