ಕುಮಟಾ|ಅನುಮಾನಾಸ್ಪದವಾಗಿ ಕಡಲತೀರದಲ್ಲಿ ಚಿರತೆ ಸಾವು!

695

ಕಾರವಾರ:- ಜಿಲ್ಲೆಯ ಕುಮಟ ತಾಲೂಕಿನ ಬಾಡ ಗ್ರಾಮದ ಹುಬ್ಬಣಗೇರಿಯ ಪದವಿ‌ಪೂರ್ವ ಕಾಲೇಜಿನ ಹಿಂಭಾಗದ ಕಡಲತೀರದಲ್ಲಿ ಚಿರತೆಯ ಮೃತ ದೇಹ ಪತ್ತೆಯಾಗಿದೆ.

ಸಮುದ್ರಲ್ಲಿ ತೇಲಿ ಬಂದ ಚಿರತೆಯ ಮೃತ ದೇಹ ಕಡತೀರದಲ್ಲಿ ಬಿದ್ದಿದ್ದು, ಇದನ್ನ ನೋಡಿದ ಸ್ಥಳೀಯರು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ‌ತಿಳಿಸಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಶೀಲನೆ ನಡೆಸಿ ಮೃತ ಚಿರತೆಯನ್ನ ಪರೀಕ್ಷೆಗೆ ಒಳಪಡಿಸಿದ್ದಾರೆ.

ಚಿರತೆ ಹೇಗೆ ಸತ್ತಿರಬಹುದು ಎಂಬ ಬಗ್ಗೆ ಇದುವರೆಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.

ಮೃತ ಚಿರತೆಯ ದೇಹದಲ್ಲಿ ಯಾವುದೆ ಗಾಯವಾಗಿರುವುದು ಕಂಡ ಬಂದಿಲ್ಲ ಹೀಗಾಗಿ ಸಾವಿನ ನಿಖರ ಮಾಹಿತಿಯು ಪೊಸ್ಟ್ ಮಾಟಮ್ ನಂತರ ತಿಳಿದುಬರಬೇಕಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!