ಶಿರಸಿ-ಕುಮಟಾ ಹೆದ್ದಾರಿ ಬಂದ್ ಮಾಡಿ ಕರವೇ ಪ್ರತಿಭಟನೆ-ಹೆದ್ದಾರಿ ದುರಸ್ತಿಗೆ ಆಗ್ರಹ.

1566

ಕುಮಟಾ:- ಹದಗೆಟ್ಟ ಕುಮಟ-ಶಿರಸಿ ಹೆದ್ದಾರಿ ಕಾಮಗಾರಿಯನ್ನು ವಿಳಂಬವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯಿಂದ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತಿ.

ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ ನೇತೃತ್ವದಲ್ಲಿ ಪ್ರತಿಭಟನೆ ಯನ್ನು ಹಮ್ಮಿಕೊಂಡಿದ್ದು ,ಕತಗಾಲ ಬಳಿ ಕುಮಟ- ಶಿರಸಿ ಹೆದ್ದಾರಿ ತಡೆದು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹೆದ್ದಾರಿ ಬಂದ್ ನಿಂದ ಅರ್ಧ ಗಂಟೆಗೂ ಹೆಚ್ಚಿನ ಸಮಯ ಕುಮಟ-ಶಿರಸಿ ಹೆದ್ದಾರಿ ಬಂದ್ ಆಗಿತ್ತು.
ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ಕರವೇ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಮಾತನಾಡಿ ಇಡೀ ಹೆದ್ದಾರಿ ಸಂಪೂರ್ಣ ಹಾಳಾಗಿದೆ. ವಾಹನಗಳು ಸಂಚರಿಸುವ ಸ್ಥಿತಿ ಸಹ ಇಲ್ಲ,ಅಷ್ಟು ಹದೆಗೆಟ್ಟು ಹೋಗಿದೆ. ಸ್ಥಳೀಯ ಶಾಸಕರು,ಅಧಿಕಾರಿಗಳ ನಿರ್ಲಕ್ಷ ದೋರಣೆ ಈ ಹೆದ್ದಾರಿ ಇಷ್ಟು ಹದಗೆಡಲು ಕಾರಣ ,ಶೀಘ್ರ ಸಮಪರ್ಕ ರಸ್ತೆ ಮಾಡಬೇಕು ಸುಗಮ ವಾಹನ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!