BREAKING NEWS
Search

ಸುಳ್ಳು ಸುದ್ದಿ ಕೇಳಿ ಬಾಳ ಬೇಜಾರಾಥ! ಸ.ರಿ.ಗ.ಮ.ಪ ಸಿಂಗರ್ ಹನುಂತು ಹೇಳಿದ್ದೇನು?

2399

ಕಾರವಾರ:-ಇದೇ ತಿಂಗಳ ಒಂದನೇ ತಾರೀಕು ಜೀ ಕನ್ನಡ ವಾಹಿನಿಯ ಸರಿಗಮಪ ರನ್ನರ್ ಅಪ್ ಸಿಂಗರ್ ಹನುಮಂತು ಕುಮಟಾ ತಾಲೂಕಿನ ಗೋಕರ್ಣಕ್ಕೆ ಭೇಟಿ ನೀಡಿದ್ದರು.

ಈ ವೇಳೆ ಮರಳಿ ಬರುವಾರ ಕುಮಟಾ ನಗರದಲ್ಲಿ ವರ್ಷ ಬೇಕರಿಯಲ್ಲಿ ಐಸ್ ಕ್ರೀಮ್ ಸವಿದು ಕೇಕ್ ತಿಂದು ಹೊರಟಿದ್ದರು.

ಈ ವೇಳೆ ಕುಮಟಾದ ವರ್ಷ ಬೇಕರಿಯವರು ಜೀ ಕನ್ನಡ ವಾಹಿನಿಯಲ್ಲಿ ಮಿಂಚಿದ್ದರಿಂದ ಫೋಟೋ ತೆಗೆದುಕೊಂಡಿದ್ದರು.ಹಾಗೆಯೇ ಒಂದಿಷ್ಟು ಖುಷಲೋಪರಿ ವಿಚಾರಿಸಿದ್ದರು.

ನಂತರ ಇಂದು ಅಂದರೆ ಎಂಟನೆ ತಾರೀಕು ಜಿಲ್ಲೆಯ ಕರಾವಳಿ ಭಾಗದ ಕರಾವಳಿ ಮುಂಜಾವು ಪತ್ರಿಕೆಯು ಆತ ಬೇಕರಿಗೆ ಹೋಗಿದ್ದ ಫೋಟೋವನ್ನು ತಮ್ಮ ಪತ್ರಿಕೆಯಲ್ಲಿ ಹಾಕಿ “ಬೇಕರಿ ಹೊಕ್ಕಿ ಬದುಕಬೇಕುರೀ ಎಂದ ಸಿಂಗರ್ ಹನುಮಂತು” ಎಂಬ ಶೀರ್ಷಿಕೆಯಲ್ಲಿ ಸುದ್ದಿ ಪ್ರಕಟಮಾಡಿತ್ತು.

ಈ ಸುದ್ದಿಯಲ್ಲಿ ರಿಯಾಲಿಟಿ ಶೋಗಳು ಪಕ್ಕಾ ಬಂಡಲ್ ಎಂಬ ಉಪನಾಮದೊಂದಿಗೆ ಸದ್ಯ ಚಾಲ್ತಿಯಲ್ಲಿರುವ ಎಲ್ಲಾ ವಾಹಿನಿಗಳ ರಿಯಾಲಿಟಿ ಶೋಗಳು ಎಲ್ಲಾ ಬಂಡಲ್ ಎಂದು ಈಗ ಜಗಜ್ಹಾಹೀರು ಎಂಬುದಾಗಿ ಬರೆಯಲಾಗಿದೆ‌.

ಇದರ ಜೊತೆಗೆ ಹನುಮಂತು ಜೀ ವಾಹಿನಿಯಲ್ಲಿ ಸಿಕ್ಕ ಅವಕಾಶ ಹೊಸ ಅನುಭವ ರಾಜ್ಯದ ಜನ ನನ್ನನ್ನು ಗುರುತಿಸಿದ್ದಾರೆ.ಕಲೆಗೆ ತಕ್ಕ ಪ್ರೋತ್ಸಾಹ ಸಿಕ್ಕಿತು.ಆದ್ರೆ ಬೆಲೆ ಮಾತ್ರ ಸಿಗಲಿಲ್ಲ ,ರನ್ನರ್ ಅಪ್ ಆದ ನನಗೆ ಬೆಂಗಳೂರಿನಲ್ಲಿ ಪ್ಲಾಟ್ ಕೊಡಿಸುತ್ತೇನೆ ಎಂದರು.ಆದರೇ ಇದುವರೆಗೆ ನೊಂದಣಿ ಕೆಲಸವೇ ಆಗಿಲ್ಲ,ಅವೆಲ್ಲವೂ ಕ್ಯಾಮರಾ ಮುಂದೆ ಹೆಳುವ ಆಶ್ವಾಸನೆ ಎಂದು ಅನಿಸುತ್ತಿದೆ.

ಪ್ರಚಾರಕ್ಕಾಗಿ ಏನೇನೋ ಹೇಳಿ ನಮ್ಮಂತ ಕುರಿಗಾಹಿ ಬದುಕಿನಲ್ಲಿ ಆಸೆ ಹುಟ್ಟಿಸುತ್ತಾರೆ. ಅದರ ಬದಲು ಕಲೆ ಮೆಚ್ಚಿ ಕಳುಹಿಸಿದರೆ ನಾವು ಯಾವುದಕ್ಕೂ ಆಸೆ ಪಡದೆ ನಾವು ಮೊದಲಿನಂತೆ ಬದುಕುತ್ತೇವೆ ಎಂದು ವಿಶ್ವಾಸದ ನೋಟ ಬೀರಿ ಹೇಳಿದರು ಎಂದು ಕುಮಟಾ ವರ್ಷ ಬೇಕರಿಯ ತಾರಾ ಗೌಡ ಬಳಿ ಹೇಳಿದ್ದಾರೆ ಎಂಬಿತ್ಯಾದಿ ವಿಷಯಗಳನ್ನು ಉಲ್ಲೇಖಿಸಿ ಬರೆಯಲಾಗಿತ್ತು.

ಈ ವಿಷಯ ಜಿಲ್ಲೆಯಲ್ಲಿ ಅಲ್ಲದೇ ಹಲವು ಭಾಗದಲ್ಲಿ ಚರ್ಚೆಯ ವಿಷಯವಾಗಿ ಪರಿಣಮಿಸಿ ಜೀ ವಾಹಿನಿ ಸೇರಿದಂತೆ ಹಲವು ವಾಹಿನಿಗಳ ಬಗ್ಗೆ ಅನುಮಾನ ಮೂಡುವಂತೆ ಮಾಡಿತ್ತು.

ಆದರೇ ಈ ವಿಷಯ ನಿಜವೇ ಎಂಬ ಬಗ್ಗೆ ಕನ್ನಡವಾಣಿ ಪತ್ರಿಕೆ ಕುದ್ದು ಹನುಮಂತುವನ್ನು ಸಂಪರ್ಕಿಸಿ ಒಂದಿಷ್ಟು ವಿಷಯ ಸಂಗ್ರಹ ಮಾಡಿದೆ. ಅದರ ಯಾತವತ್ತು ಇಲ್ಲಿ ನೀಡುತಿದ್ದೇವೆ.

ಹನುಮಂತು ಹೇಳಿದ್ದೇನು?

ಸರ್ ನಾನು ಅಲ್ಲಿಗೆ ಹೋಗಿದ್ದು ನಿಜ ನನ್ನ ಜೊತೆ ಅಣ್ಣ ಸಹ ಇದ್ರುರೀ, ಹಾಗೆಲ್ಲ ನಾನು ಹೇಳಿಲ್ಲ.ಜೀ ಕನ್ನಡ ಅನ್ನ ಕೊಟ್ಟು ಹೆಸರು ಕೊಟ್ಟಿದೆ ರೀ ,ನನಗೆ ಪ್ಲಾಟ್ ಕೊಡದೇ ಇರೋದು ನಿಜ ಆದ್ರೆ ಪ್ಲಾಟ್ ಬದಲು ಅದೇ ಮೌಲ್ಯದ 21 ಲಕ್ಷ ರುಪಾಯಿ ನೀಡಿದ್ದಾರೆ‌. ಪತ್ರಿಕೆಯಲ್ಲಿ ಸುಳ್ಳು ಸುದ್ದಿ ಬಂದಿದ್ದು ಕೇಳಿ ನಂಗೆ ಬಾಳ ಬೇಜಾರಾಯ್ತು. ನಾನ್ಯಾಕೆ ಹಾಗೆಲ್ಲ ಹೇಳಲಿರೀ..ಈ ತರ ಯ್ಯಾಕೆ ಬರದಿದ್ದಾರೆ ಅಂತ ನಂಗೆ ಗೊತ್ತಿಲ್ಲ. ಪತ್ರಿಕೆಯಲ್ಲಿ ಬಂದ ಸುದ್ದಿ ಎಲ್ಲಾ ಸುಳ್ಳಯ್ಯತ್ರಿ. ನಿಜ ಇಲ್ರಿ,ಅದಕ್ಕೆ ನಾನೇ ವೀಡಿಯೋ ಮಾಡಿ ಬಿಟ್ಟೀನ್ರಿ ಎಂದಿದ್ದಾರೆ.

ಇನ್ನು ಪತ್ರಿಕೆಯಲ್ಲಿ ಬಂದ ಸುದ್ದಿಯಿಂದ ಹನುಮಂತು ಬೇಜಾರಾಗಿದ್ದಾರೆ. ಒಂದನೇ ತಾರೀಕಿಗೆ ಕುಮಟಾಕ್ಕೆ ಬಂದಿದ್ದ ಹನುಮಂತು ಫೋಟೋಗಳು ವೈರಲ್ ಕೂಡ ಆಗಿತ್ತು.

ಏಳು ದಿನಗಳು ನಂತರ ಹೀಗೊಂದು ಸುದ್ದಿ ಪತ್ರಿಕೆಯಲ್ಲಿ ಬರುವ ಮೂಲಕ ಒಬ್ಬ ಪ್ರತಿಭೆಗೆ ಘಾಸಿ ಮಾಡಿದೆ. ಜೊತೆಗೆ ಎಷ್ಟೋ ಪ್ರತಿಭೆಗಳು ತಮಗೊಂದು ವೇದಿಕೆ ಸಿಗಬಹುದು ಎಂಬ ನಿರೀಕ್ಷೆ ಇಟ್ಟುಕೊಂಡಿರುವ ಅದೆಷ್ಟೋ ಪ್ರತಿಭೆಗಳು ಯೋಚಿಸುವಂತೆ ಮಾಡಿದೆ.

ಒಂದು ಸುದ್ದಿ ಪ್ರಕಟಿಸಬೇಕಾದರೆ ಹಲವುಬಾರಿ ಯೋಚಿಸಿ ಮುದ್ರಿಸಲಾಗುತ್ತೆ. ಆದರೇ ಇಲ್ಲಿ ಕೈ ತಪ್ಪಿದ್ದು ಎಲ್ಲಿ? ಕೊನೆ ಪಕ್ಷ ಏಳು ದಿನದ ಅಂತರದಲ್ಲಿ ಈ ರೀತಿ ಇದ್ದಾಗ ಕುದ್ದು ಹನುಮಂತುವನ್ನೇ ಕೇಳಬಹುದಿತ್ತು. ಆದರೇ ಇಲ್ಲಿ ಹಾಗಾಗಲಿಲ್ಲ.ಇಲ್ಲಿ ಹನುಮಂತು ಸುಳ್ಳು ಹೇಳಿದನಾ? ಮತ್ಯಾರು ಸುಳ್ಳು ಹೇಳಿದರು? ಎಂಬುದನ್ನ ಓದುಗರ ವಿವೇಕ “ಪ್ರಜ್ಞೆಗೆ” ಬಿಡುತಿದ್ದೇವೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!