ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಜೂ.7 ರ ವರೆಗೆ ಎಂದಿನಂತೆ ಲಾಕ್ ಡೌನ್ ಮುಂದುವರೆಯಲಿದೆ.
ಆದರೇ ಜಿಲ್ಲಾಧಿಕಾರಿಗಳು ಕೆಲವು ಮಾರ್ಗಸೂಚಿಯಲ್ಲಿ ಬದಲಾವಣೆ ತಂದಿದ್ದು ಈ ಬದಲಾವಣೆಯಲ್ಲಿ ಜಿಲ್ಲೆಗೆ ಅನ್ವಯಿಸುವಂತೆ ವ್ಯಾಪಾರಸ್ತರಿಗೆ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಮಾತ್ರ ಬೆಳಗ್ಗೆ 6 ರಿಂದ 10 ಘಂಟೆ ವರೆಗೆ ದಿನನಿತ್ಯದ ಅಗತ್ಯ ವಸ್ತುಗಳು ಮಳಿಗೆಯಲ್ಲಿ ಮಾರಾಟ ಮಾಡಲು ಮಾತ್ರ ಅವಕಾಶ ಮಾಡಿಕೊಡಲಾಗಿದ್ದು, ಉಳಿದ ದಿನದಲ್ಲಿ ಎಂದಿನಂತೆ ಮನೆ ಮನೆಗೆ ತೆರಳಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ.
ಸದ್ಯ ಜೂ. 7ರ ವರೆಗೆ ಸಮಾರಂಭ, ಮದುವೆ ಇತರೆ ಕಾರ್ಯಕ್ಕೆ ಅನುಮತಿ ನಿರ್ಬಂಧಿಸಲಾಗಿದೆ. ಇನ್ನು ಮುಂದಿನ ತಿಂಗಳವರೆಗೂ ನಿರ್ಬಂಧಿತ ವಾಹನಗಳಿಗೆ ಸಂಚಾರ ಮಾಡಲು ಮಾತ್ರ ಅವಕಾಶ ಕಲ್ಪಿಸಲಾಗಿದೆ.
ಇನ್ನು ಜೂ.7 ರ ವರೆಗೂ ಸರ್ಕಾರಿ ಸಾರಿಗೆ ಸಹ ಬಂದ್ ಇರಲಿದೆ. ಉಳಿದಂತೆ ರಾಜ್ಯ ಸರ್ಕಾರದ ನಿಯಮಗಳು ಎಂದಿನಂತೆ ಜಾರಿ ಇರಲಿದೆ ಎಂದು ಉ.ಕ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.