ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆ ಮತಯಣಿಕೆ ಕಾರ್ಯ ವಿಳಂಬವಾಗಿ ಪ್ರಾರಂಭವಾಗಿದೆ. 10-58 ಕ್ಕೆ ಮತ ಎಣಿಕೆ ಕಾರ್ಯ ಪ್ರಾರಂಭವಾಗಿದ್ದು 14 ಟೇಬಲ್‌ಗಳಲ್ಲಿ 17 ಸುತ್ತುಗಳಲ್ಲಿ ಮತಎಣಿಕೆ ನಡೆಯಲಿದೆ.
ಸಿಬ್ಬಂದಿಗೆ ಗಾಯ

ಮತದಾನದ ಬ್ಯಾಲೆಟ್ ಪೇಪರ್ ನನ್ನು ಓಪನ್ ಮಾಡುವಾಗ ಎಣಿಕಾ ಸಿಬ್ಬಂದಿಗೆ ಕೈಗೆ ಗಾಯವಾಗಿ ಕೆಲವು ಸಮಯ ಗೊಂದಲ ಉಂಟಾಯಿತು. ತಕ್ಷಣದಲ್ಲಿ ವೈದ್ಯಕೀಯ ಸಿಬ್ಬಂದಿ ಮತ ಎಣಿಕೆ ನಡೆಯುತ್ತಿರುವ ಕಾರವಾರದ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಆಗಮಿಸಿ ಚಿಕಿತ್ಸೆ ನೀಡಿದರು.