ಉತ್ತರ ಕನ್ನಡ ಮತ ಸಮೀಕ್ಷೆ-ಬಿಜೆಪಿ,ಕಾಂಗ್ರೆಸ್ ಜಟಾಪಟಿಯಲ್ಲಿ ಯಾರಿಗೆ ಗದ್ದುಗೆ?

3252

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ವಿಧಾನಪರಿಷತ್ ಚುನಾವಣೆ ಕಣ ಬಿಜೆಪಿ,ಕಾಂಗ್ರೆಸ್ ಗೆ ಪ್ರತಿಷ್ಟೆಯಾಗಿ ಮಾರ್ಪಟ್ಟಿದೆ.
ಬಿಜೆಪಿಯಿಂದ ಗಣಪತಿ ಉಳ್ವೇಕರ್, ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕ ನಡುವೆ ನೇರ ಹಣಾಹಣಿ ಇದೀಗ ಮತಪೆಟ್ಟಿಗೆಯಲ್ಲಿ ಫಲಿತಾಂಶಕ್ಕಾಗಿ ಎದುರು ನೋಡುತ್ತಿದೆ.

ಜಿಲ್ಲೆಯಲ್ಲಿ ಶೇ 99.73ಮತದಾನವಾಗಿದೆ.
ಕಾರವಾರ,ಅಂಕೋಲಾ, ಶಿರಸಿ, ಸಿದ್ದಾಪುರ, ಜೋಯಿಡಾ,ದಾಂಡೇಲಿ,ಹಳಿಯಾಳ ದಲ್ಲಿ ಶೇ. 100ರಷ್ಟು ಮತದಾನವಾಗಿದೆ.

ಜಿಲ್ಲೆಯಲ್ಲಿ ಒಟ್ಟು 2915 ಮತದಾರರಿದ್ದು 1378 ಪುರುಷರು, 1529 ಮಹಿಳೆಯರು ಮತದಾನ ಮಾಡಿದ್ದಾರೆ.

ಕ್ಷೆತ್ರದಲ್ಲಿ ಹವಾ ಹೇಗಿತ್ತು?

ಮೊದಲು ಜಿಲ್ಲೆಯಲ್ಲಿ ಬಿಜೆಪಿ ಹವಾ ಹೆಚ್ಚಿತ್ತು. ಎಲ್ಲಿ ಕಾಂಗ್ರೆಸ್ ನಿಂದ ಭೀಮಣ್ಣ ನಾಯ್ಕರಿಗೆ ಟಿಕೇಟ್ ಘೋಷಣೆ ಆಯಿತೋ ಹಲವು ಬದಲಾವಣೆ ,ಲೆಕ್ಕಾಚಾರಗಳು ನಡೆಯುವ ಮೂಲಕ ನಿಧಾನವಾಗಿ ತನ್ನ ಶಕ್ತಿ ವೃದ್ದಿಸಿಕೊಂಡಿತು. ಚುನಾವಣೆ ನಡೆಯುವ ಎರಡು ದಿನದ ಮೊದಲು 50-50 ಅನುಪಾತಕ್ಕೆ ಎರಡು ಪಕ್ಷಗಳ ಲೆಕ್ಕಾಚಾರ ಬಂದು ನಿಂತಿತ್ತು. ಕಾಂಗ್ರೆಸ್ ಪ್ರಚಾರ ನಿಧಾನಗತಿಯಲ್ಲಿ ಸಾಗಿತ್ತು.ಆದರೇ ಬಿಜೆಪಿ ತನ್ನ ಬಾರಿಯನ್ನು ಮುಗಿಸಿ ಚುರುಕಿನಿಂದ ಪ್ರಚಾರದಲ್ಲಿ ಹೆಚ್ಚು ತೊಡಗಿತ್ತು.

ಬದಲಾದ ಅನುಪಾತ!
ಎರಡೂ ಪಕ್ಷಗಳು ಕ್ಷೇತ್ರದಲ್ಲಿ ಅಬ್ಬರದ ಪ್ರಚಾರ ಕೈಗೊಂಡಿದ್ದರು.ಆದರೇ ಕಾಂಗ್ರೆಸ್ ತನ್ನ ಒಳ ಗುಟ್ಟನ್ನು ಬಿಟ್ಟುಕೊಡದೇ ತಂತ್ರ ಹೆಣದಿತ್ತು. ಇನ್ನು ಬಿಜೆಪಿ ಶಾಸಕರಿಗೆ ಸಚಿವರಿಗೆ ಮತ ಸೆಳೆಯುವ ಹೊಣೆ ಹೊರಿಸಿತ್ತು.

ಕ್ಷೇತ್ರದಲ್ಲಿ ಬಿಜೆಪಿ ಖದರ್ ಇಳಿಕೆ.

ಬಿಜೆಪಿ ಶಾಸಕರು ಮತ ಸೆಳೆಯುವ ದಿಕ್ಕಿನಲ್ಲಿ ತನ್ನ ಎಲ್ಲಾ ಬಲ ಉಪಯೋಗಿಸಿದ್ದಾರೆ. ಆದರೇ ಮತದಾರರನ್ನು ಅವರು ಕಾಂಗ್ರೆಸ್ ,ಇವರು ಪಕ್ಷೇತರ ಎಂದು ವಿಂಗಡಿಸಿ ತಮಗೆ ತೋಚಿದವರಿಗೆ ಮಾತ್ರ ಬೆಂಬಲ ಕೇಳಿದರು,ನಿರಂತರ ಸಂಪಕರ್ಕ ಕೊರತೆ ಕೊನೆಯ ದಿನ ಮತ ಗಳಿಕೆಯಲ್ಲಿ ಬಿಜೆಪಿ ಎಡವಿತ್ತು. ಇನ್ನು ಕ್ಷೇತ್ರದಲ್ಲಿ ಮತದಾರರಿಗಿದ್ದ ಶಾಸಕರಮೇಲಿನ ಅಸಮದಾನ ಕಾಂಗ್ರೆಸ್ ಗೆ ಪ್ಲಸ್ ಆಗಿದೆ.

ಯಾವ ಕ್ಷೇತ್ರದಲ್ಲಿ ಹೇಗಿತ್ತು ಪಕ್ಷದ ಅಲೆ?

ಜಿಲ್ಲೆಯಲ್ಲಿ ಕಾರವಾರ ಅಂಕೋಲ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.60₹% ಇದ್ದರೇ, ಬಿಜೆಪಿ40% ಮಾತ್ರ ಬೆಂಬಲ ಗಳಿಸಿಕೊಂಡಿದೆ.
ಕುಮಟಾ-ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ -50% ,ಬಿಜೆಪಿ-50% ಬೆಂಬಲ ಗಳಿಸಿಕೊಂಡಿದೆ. ಭಟ್ಕಳ -ಹೊನ್ನಾವರ ವಿಧಾನಸಭಾ ಕ್ಷೇತ್ರ ದಲ್ಲಿ ಕಾಂಗ್ರೆಸ್ -70% ,ಬಿಜೆಪಿ-30% ಬೆಂಬಲ ಗಳಿಸಿಕೊಂಡಿದೆ.
ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ- ಕಾಂಗ್ರೆಸ್ -60% ಬಿಜೆಪಿ-40% ಬೆಂಬಲ ಗಳಿಸಿಕೊಂಡಿದೆ.
ಹಳಿಯಾಳವಿಧಾನಸಭಾ ಕ್ಷೇತ್ರ – 50% ಕಾಂಗ್ರೆಸ್, 50%ಬಿಜೆಪಿ (ಇಲ್ಲಿ ಅನುಪಾತ ಬದಲಾಗಲಿದೆ.)
ಜೋಯಿಡಾ ಭಾಗದಲ್ಲಿ 45% ಬಿಜೆಪಿ ,55% ಕಾಂಗ್ರೆಸ್ , ದಾಂಡೇಲಿ ಭಾಗದಲ್ಲಿ 70%ಕಾಂಗ್ರೆಸ್ ,30% ಬಿಜೆಪಿ ಬೆಂಬಲ ಹೊಂದಿದೆ.
ಯಲ್ಲಾಪುರ ವಿಧಾನಸಭಾ ಕ್ಷೇತ್ರ- ಬಿಜೆಪಿ-50% ಕಾಂಗ್ರೆಸ್ -50% ಬೆಂಬಲ ಹೊಂದಿದೆ.

ಸಮೀಕ್ಷೆ ಏನು ಹೇಳುತ್ತೆ?

ಜಿಲ್ಲೆಯಲ್ಲಿ ಬಿಜೆಪಿ ಹವ ಇದ್ದರೂ ಈ ಬಾರಿ ವ್ಯಕ್ತಿಗಳನ್ನು ನೋಡಲಾಗಿದೆ. ಜೊತೆಗೆ ಹಣ ಕೂಡ ವರ್ಕೌಟ್ ಆಗಿದೆ‌. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಪೈಪೋಟಿ ಸಮಬಲ ಎಂದು ಕಂಡರೂ ಚುನಾವಣೆ ದಿನದ ಅಂಕಿ ಅಂಶ ತೆಗೆದುಕೊಂಡರೆ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ ಮುಂದಿದ್ದಾರೆ. ಬಹುತೇಕ ಅವರು ಈ ಬಾರಿಯ ಚುನಾವಣೆ ಗೆಲ್ಲುವ ಎಲ್ಲಾ ಅವಕಾಶಗಳು ಅವರಿಗೆ ಪೂರಕವಾಗಿದೆ.
ಬಿಜೆಪಿಯ ಗಣಪತಿ ಉಳ್ವೇಕರ್ ಗೆ ಪಕ್ಷದ ನಾಯಕರೇ ವಿಲನ್ ಗಳಾಗಿದ್ದಾರೆ. ಶಾಸಕರುಗಳ ಹಿಂದಿನ ವರ್ತನೆ, ಪಕ್ಷೇತರರನ್ನು ಸೇರಿದಂತೆ ಎಲ್ಲರನ್ನೂ ಬೆಂಬಲಕ್ಕೆ ತೆಗೆದುಕೊಳ್ಳದಿರುವುದು ಮತದಾನದ ಸಂದರ್ಭದಲ್ಲಿ ಮೈನೆಸ್ ಆಗಿವೆ. ಬಿಜೆಪಿ ಆಂತರಿಕ ಗುದ್ದಾಟ ಸಹ ಉಳ್ವೇಕರ್ ಗೆ ಕಂಟಕವಾಗಿದ್ದು ಮತ ಹೆಚ್ಚಿಸುಕೊಳ್ಳುವಲ್ಲಿ ತೊಂದರೆಯಾಗಿದೆ.ಆದರೂ ಬಿಜೆಪಿಯಲ್ಲಿ ನಿಷ್ಟಾವಂತ ಕಾರ್ಯಕರ್ತರ ಶ್ರಮ ಮತ ತರುವಲ್ಲಿ ಒಂದಿಷ್ಟು ಸಹಾಯ ಆಗಲಿದೆ.
ಸದ್ಯ ಸಮೀಕ್ಷೆ ಪ್ರಕಾರ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ರವರು ಗೆಲ್ಲುವ ಸಾಧ್ಯತೆಗಳು ಅಧಿಕವಾಗಿದೆ.ಇದು ಕೇವಲ ಲೆಕ್ಕಾಚಾರದ ಕ್ಷೇತ್ರವಾರು ಮಾಹಿತಿ ಕಲೆಹಾಕಿ ಮಾಡಿದ ಸಮೀಕ್ಷೆಯಷ್ಟೆ. ಎಲ್ಲವೂ ಇದೀ ತಿಂಗಳ 14ರಂದು ಫಲಿತಾಂಶ ಉತ್ತರ ನೀಡಲಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!