ಮುಂಡಗೋಡು-ಕಬ್ಬಿನ ಗದ್ದೆಗೆ ಬೆಂಕಿ ಲಕ್ಷಾಂತರ ರುಪಾಯಿ ಹಾನಿ

320

ಮುಂಡಗೋಡು :- ಶಾಟ್೯ ಸರ್ಕ್ಯೂಟ್ ನಿಂದ ಕಬ್ಬಿನ ಗದ್ದೆಗೆ ಬೆಂಕಿ ತಗಲಿ ಲಕ್ಷಾಂತರ ರುಪಾಯಿ ಹಾನಿಯಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ನಂದಿಕಟ್ಟೆ ಗ್ರಾಮದಲ್ಲಿ ಇಂದು ನಡೆದಿದೆ.

ಸಿದ್ಧಲಿಂಗಪ್ಪ ಎಸ್ ಎಂಬ ರೈತನಿಗೆ ಸೇರಿದ ಕಬ್ಬಿನ ಗದ್ದೆ ಇದಾಗಿದ್ದು ಅಂದಾಜು ಒಂದೂವರೆ ಎಕರೆಯಷ್ಟು ಬೆಳೆ ಸುಟ್ಟು ಕರಕಲಾಗಿದ್ದು
ಸುಮಾರು 1.5 ಲಕ್ಷ ರೂ ನಷ್ಟು ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಿ ದೊಡ್ಡ ಹಾನಿ ತಪ್ಪಿಸಿದ್ದಾರೆ.ಘಟನೆ
ಮುಂಡಗೋಡ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!