BREAKING NEWS
Search

ದೇವರಿಗೆ ಕಬ್ಬಿಣದ ಸರಪಳಿ ಕಟ್ಟಿ ಜಾತ್ರೆ ಆಚರಣೆ-ಮುಂಡಗೋಡಿನಲ್ಲೊಂದು ವಿಶಿಷ್ಟ ಸಂಪ್ರದಾಯ

678

ಮುಂಡಗೋಡು:- ಪ್ರತಿ ಧಾರ್ಮಿಕ ಆಚರಣೆಯಲ್ಲೂ ಭಿನ್ನತೆ ಮತ್ತು ವಿಶೇಷತೆಗಳು ಇರುತ್ತವೆ. ಆದ್ರೆ ಕೆಲವು ಆಚರಣೆಗಳು ಜನರನ್ನು ಕುತೂಹಲ ಮೂಡಿಸುತ್ತದೆ.
ಹೌದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು
ತಾಲೂಕಿನ ಮಳಗಿ ಗ್ರಾಮದ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ದೇವರಿಗೆ ಕಬ್ಬಿಣದ ಸರಪಳಿ ಕಟ್ಟಿ ನಂತರ ಸರಪಳಿ ಎಳೆದು ಹರಿದ ನಂತರ ಪೂಜೆ ಸಲ್ಲಿಸುವ ವಿಶಿಷ್ಟ ಆಚರಣೆ ಮಾಡುವ ಮೂಲಕ ಗ್ರಾಮಸ್ಥರು ದೇವರ ಜಾತ್ರಾ ಮಹೋತ್ಸವವನ್ನು ಆಚರಿಸಿದರು.

ಮೈಲಾರಲಿಂಗೇಶ್ವರ ಶಿಬಿರದ ಬಳಿ ಪ್ರತಿವರ್ಷದಂತೆ ಈ ವರ್ಷವೂ ಧಾರ್ಮಿಕ ವಿಧಿ ವಿಧಾನಗಳಂತೆ ಪೂಜೆ ಸಲ್ಲಿಸಲಾಯಿತು.ನಂತರ ಮುಂಭಾಗದಲ್ಲಿರುವ ದೇವರ ಮೂರ್ತಿಗೆ ಕಬ್ಬಿಣದ ಸರಪಳಿಗಳನ್ನು ಕಟ್ಟಿ ಸರಪಳಿ ಎಳೆದು ಹರಿಯಲಾಯಿತು.

ಇಲ್ಲಿನ ಜನರ ನಂಬಿಕೆಯಂತೆ ದೇವರನ್ನು ಮಾಟ ಮಂತ್ರದ ಮೂಲಕ ದಿಗ್ಭಂಧನ ಮಾಡಿದರೂ ಯಾವುದಕ್ಕೂ ಜಗ್ಗದೇ ಊರಿನ ಜನರನ್ನು ರಕ್ಷಿಸುತ್ತಾನೆ ಎಂಬ ನಂಬಿಕೆ ಇಲ್ಲಿನವರದ್ದು. ಹೀಗಾಗಿ ದೇವರಿಗೆ ಕಬ್ಬಿಣದ ಸರಪಳಿ ಬಿಗಿಯಲಾಗುತ್ತದೆ. ನಂತರ ಇದನ್ನು ಎಳೆದಾಗ ತುಂಡಾಗುತ್ತದೆ. ಈ ಮೂಲಕ ದೇವರಲ್ಲಿ ಮಹಿಮೆ ಇದೆ ,ತಮ್ಮನ್ನು ರಕ್ಷಿಸುತ್ತಾನೆ ಯಾವುದಕ್ಕೂ ಜಗ್ಗುವುದಿಲ್ಲ ಎಂಬುದನ್ನು ಈ ಮೂಲಕ ನೆರೆದ ಭಕ್ತರು ಕಣ್ತಬಿಕೊಂಡು ಪೂಜೆ ಸಲ್ಲಿಸಿದರು. ನಂತರ ನಂತರ ಶಸ್ತ್ರಪವಾಡ, ಶಿವದಾರ ಪವಾಡ ಎಂಬ ಕಾರ್ಯಕ್ರಮವನ್ನು ನಡೆಸಲಾಯಿತು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!