BREAKING NEWS
Search

ಕಾಡುಪ್ರಾಣಿಗೆ ಇಟ್ಟಿದ್ದ ಕೈಬಾಂಬ್ ಸ್ಪೋಟ:ಛಿದ್ರಗೊಂಡ ಗೋವಿನ ಬಾಯಿ.

716

ಕಾರವಾರ :- ಕಾಡುಪ್ರಾಣಿಯ ಬೇಟೆಗಾಗಿ ಇಟ್ಟಿದ್ದ ಕೈಬಾಂಬ್‌ ಸ್ಪೋಟಗೊಂಡು ಆಕಳಿನ ಬಾಯಿ ಛಿದ್ರವಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ನಡೆದಿದೆ. ಮುಂಡಗೋಡಸ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ನಾಯರ್ ಎಂಬವರಿಗೆ ಸೇರಿದ ಆಕಳು ಇದಾಗಿದ್ದು , ಮೇವು ಅರಸಿ ಜಲಾಶಯದ ಬಳಿ ಬಂದಿದ್ದು ಈ ವೇಳೆ ಆಹಾರವೆಂದು ನೆಲದಲ್ಲಿ ಕಾಡುಪ್ರಾಣಿ ಬೇಟೆಗೆ ಇರಿಸಿದ್ದ ಕೈಬಾಂಬ್ ತಿನ್ನಲು ಪ್ರಯತ್ನಿಸಿದ್ದು ಸ್ಪೋಟಗೊಂಡಿದೆ.

ಸಜೀವ ಕೈ ಬಾಂಬ್

ಸ್ಪೋಟದಿಂದಾಗಿ ಆಕಳಿನ ಬಾಯಿ ಸಂಪೂರ್ಣ ಛಿದ್ರವಾಗಿದ್ದು ಅರಣ್ಯಾಧಿಕಾರಿಗಳ ಪರಿಶೀಲನೆ ವೇಳೆ ಮತ್ತೊಂದು ಜೀವಂತ ಕೈಬಾಂಬ್ ದೊರೆತಿದೆ. ಘಟನೆ ಸಂಬಂಧ ಮುಂಡಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!