


ಕಾರವಾರ :- ಕೋವಿಡ್ ನಿಯಮ ಗಾಳಿಗೆ ತೂರಿ, ವಿಕೇಂಡ್ ಕರ್ಪ್ಯೂ ದಲ್ಲೆ ವಿಜೃಂಭಣೆಯಿಂದ ಬಾಣಂತಿ ದೇವಿ ಜಾತ್ರೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ
ಮುಂಡಗೋಡಿನ ಸಾಲಗಾಂವ ಗ್ರಾಮದಲ್ಲಿ ಇಂದು ನಡೆದಿದೆ.
ಮಕ್ಕಳಿಲ್ಲದ ದಂಪತಿಗಳು ಹರಕೆ ಕಟ್ಟಿಕೊಳ್ಳುವುದೆ ಈ ಜಾತ್ರೆಯ ವಿಶೇಷವಾಗಿದ್ದು
ಕೆರೆ ನೀರಲ್ಲಿ ಮಗುವನ್ನು ಅರ್ದ ಮುಳುಗಿಸುವ ಪದ್ದತಿ ಈ ಜಾತ್ರೆಯ ವಿಶೇಷವಾಗಿದೆ. ತಾಲೂಕು ಆಡಳಿತ ಹಾಗೂ ಪೊಲೀಸಿನವರು ಎಚ್ಚರಿಕೆ ನೀಡಿದರೂ ದೇವಸ್ಥಾನ ಆಡಳಿತ ಮಂಡಳಿ ಜಾತ್ರೆ ನಡೆಸಿದೆ.ಸಾಲಗಾಂವ ಗ್ರಾಮದ ಅಕ್ಕಪಕ್ಕದ ಹಳ್ಳಿ ಹಾಗೂ ಧಾರವಾಡ ,ಹುಬ್ಬಳ್ಳಿಯಿಂದ ಸಾವಿರಾರು ಜನರು ಜಾತ್ರೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ಆದೇಶಕ್ಕೆ ಕಿಮ್ಮತ್ತು ನೀಡದ ದೇವಸ್ಥಾನ ಆಡಳಿತ ಮಂಡಳಿ
ಈಗಾಗಲೇ ಜಿಲ್ಲಾಡಳಿತ ಜಾತ್ರೆ ನೆಡೆಸಲು ನಿರ್ಬಂಧ ಹೇರಿದೆ. ಆದರೇ ಸಾಲಗಾಂವ ನಲ್ಲಿ ಆಡಳಿತ ಮಂಡಳಿ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೇ ಜಾತ್ರೆ ನಡೆಸುವ ಜೊತೆ ವಾಣಿಜ್ಯ ಮಳಿಗೆಗಳನ್ನು ಸಹ ತೆರೆದು ಸಾವಿರಾರು ಜನರು ಸೇರುವಂತೆ ಮಾಡಿದ್ದು ಜನರು ಸಹ ವೀಕೆಂಡ್ ಕರ್ಫ್ಯೂ ಇದ್ದರೂ ಸಾವಿರಾರು ಜನ ಜಾತ್ರೆಗೆ ಜಮಾಯಿಸಿದ್ದಾರೆ.
ಪೊಲೀಸ್ ಇಲಾಖೆ,ಸ್ಥಳೀಯ ಆಡಳಿತ ವಿಫಲ.

ವೀಕೆಂಡ್ ಕರ್ಫ್ಯು ಇದ್ದಿದ್ದರಿಂದ ಪೊಲೀಸರು ಆಯಾ ಕಟ್ಟಿನಲ್ಲಿ ಬ್ಯಾರಿಕೇಟ್ ಆಳವಡಿಸಿ ಬಂದವಸ್ತ್ ಮಾಡಿದೆ.ಆದರೇ ಕಠಿಣ ನಿಯಮ ಜಾರಿಗೆ ತರದ ಹಿನ್ನಲೆಯಲ್ಲಿ ಜನರು ಬೇಕಾಬಿಟ್ಟಿಯಾಗಿ ಜಾತ್ರೆಗೆ ಆಗಮಿಸಿದ್ದರು. ಇನ್ನು ಸದ್ಯ ಇಲಾಖೆ ಎಚ್ಚರಿಕೆ ನಿಡಿದ್ದು ಹೊರತುಪಡಿಸಿ ಈವರೆಗೂ ಪ್ರಕರಣ ದಾಖಲಿಸಿಲ್ಲ.